ರಾಜ್ಯದಲ್ಲಿ ಕಾಂಗ್ರೆಸ್ ಬಂದರೆ ಬರಗಾಲ, ಬಿಜೆಪಿ ಬಂದರೆ ಅತಿವೃಷ್ಟಿ? ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 80 ಅಡಿಗೆ ಕುಸಿತ!

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಬೇಸಿಗೆಯ ಬಿಸಿಲು, ಪೂರ್ವ ಮುಂಗಾರು ಮಳೆ ವಿಳಂಬದಿಂದಾಗಿ ಮಂಡ್ಯದ ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ನೀರಿನ ಮಟ್ಟವು ತೀವ್ರವಾಗಿ ಕುಸಿದಿದೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದ ಹಿನ್ನೀರಿನಲ್ಲಿ ನೀರಿನ ಮಟ್ಟ ಕುಸಿತ ಕಂಡಿದೆ. | UDAYASHANKAR S
ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದ ಹಿನ್ನೀರಿನಲ್ಲಿ ನೀರಿನ ಮಟ್ಟ ಕುಸಿತ ಕಂಡಿದೆ. | UDAYASHANKAR S

ಮೈಸೂರು: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಬೇಸಿಗೆಯ ಬಿಸಿಲು, ಪೂರ್ವ ಮುಂಗಾರು ಮಳೆ ವಿಳಂಬದಿಂದಾಗಿ ಮಂಡ್ಯದ ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ನೀರಿನ ಮಟ್ಟವು ತೀವ್ರವಾಗಿ ಕುಸಿದಿದೆ.

ಭಾನುವಾರ 80.26 ಅಡಿಗೆ ನಿರೀನ ಮಟ್ಟ ಕುಸಿದಿದೆ. ಆದರೆ ಕುಡಿಯುವ ನೀರಿನ ಕೊರತೆಯ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಜಲಾಶಯದ ಡೆಡ್ ಸ್ಟೋರೇಜ್ ಮಟ್ಟ ತಲುಪಲು ಕೇವಲ ಆರು ಅಡಿ ಮಾತ್ರ ಬಾಕಿಯಿದೆ, ನಂತರ ನೀರಿನ ಸಂಗ್ರಹ ಈ ಮಟ್ಟಕ್ಕೆ ತಲುಪಿದಾಗ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. 124.8 ಅಡಿ ಗರಿಷ್ಠ ನೀರಿನ ಮಟ್ಟವನ್ನು ಹೊಂದಿರುವ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ 104.96 ಅಡಿವರೆಗೆ ನೀರಿತ್ತು, ಆದರೆ ಈ ಬಾರಿ ಮಳೆಯ ವಿಳಂಬ ಮತ್ತು ನೀರು ಆವಿಯಾಗುವ ಪ್ರಮಾಣ ಹೆಚ್ಚಾಗಿದೆ.

ಇದರ ಜೊತೆಗೆ ನೀರಾವರಿ ಕಾಲುವೆಗಳಿಗೆ ನೀರು ಬಿಡುವುದರಿಂದ ಜಲಾಶಯವು ಸಂಗ್ರಹದಲ್ಲಿ ಇಳಿಕೆಯಾಗಿದೆ. ಕೆಆರ್‌ಎಸ್‌ ಅಣೆಕಟ್ಟಿನ ಅಧಿಕಾರಿಗಳು ನೀರಿನ ಕೊರತೆಯ ಆತಂಕವನ್ನು ದೂರ ಮಾಡಿದ್ದಾರೆ. ಉತ್ತಮ ಮುಂಗಾರು ಬರಲಿದೆ ಎಂದು ಮುನ್ಸೂಚನೆ ಹೇಳುತ್ತಿದೆ, ಹೀಗಾಗಿ ಮುಂಗಾರು ಪ್ರಾರಂಭವಾದ ನಂತರ ಅಣೆಕಟ್ಟಿಗೆ ನೀರಿನ ಒಳಹರಿವು ಹೆಚ್ಚಾಗುತ್ತದೆ. ತದ ನಂತರ ಅಣೆಕಟ್ಟಿನ ನೀರಿನ ಮಟ್ಟವು ಹೆಚ್ಚುತ್ತದೆ ಎಂದಿದ್ದಾರೆ.

ಭಾನುವಾರದ ಹೊತ್ತಿಗೆ ನೀರಿನ ಒಳಹರಿವು 413 ಕ್ಯೂಸೆಕ್ ಇದ್ದರೆ, ಹೊರಹರಿವು 2997 ಕ್ಯೂಸೆಕ್ ಇದೆ. ಕಳೆದ ಕೆಲವು ವರ್ಷಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗಿದೆ, ಹೀಗಾಗಿ ನೀರಿನ ಒಳಹರಿವು ಹೆಚ್ಚಾಗಿರುವುದರಿಂದ ಪರಿಸ್ಥಿತಿ ಬೇರೆಯಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಆದರೆ ಈ ವರ್ಷ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ ಆದರೆ ಕುಡಿಯುವ ನೀರಿಗೆ ಕೊರತೆ ಉಂಟಾಗುವುದಿಲ್ಲ. ಬೆಂಗಳೂರಿಗೆ ಪ್ರಮುಖ ಮೂಲವಾಗಿರುವ ಕೆ.ಆರ್.ಎಸ್. ನೀರಿನ ಕೊರತೆಯಾಗುವುದಿಲ್ಲ ಎಂದು ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇಂತಹ ಪರಿಸ್ಥಿತಿ ಮುಂದುವರಿಯುತ್ತದೆ ಎಂದು ಹೇಳಲಾಗುತ್ತದೆ. ಈ ಭಾಗದ ರೈತರು ಮತ್ತು ಪ್ರದೇಶದ ಜನರು ಅದನ್ನು ರಾಜಕೀಯದೊಂದಿಗೆ ವಿಚಿತ್ರವಾಗಿ ಸಂಬಂಧ ಕಲ್ಪಿಸಲು ನಿರತರಾಗಿದ್ದಾರೆ.

ಬಿಜೆಪಿ ಅಥವಾ ಬಿಎಸ್ ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇರುತ್ತದೆ. ಕಾಂಗ್ರೆಸ್ ಅಥವಾ ಎಸ್‌ಎಂ ಕೃಷ್ಣ, ಸಿದ್ದರಾಮಯ್ಯ ಅವರಂತಹ ನಾಯಕರು ಸಿಎಂ ಸ್ಥಾನ ಪಡೆದಾಗ, ಬರಗಾಲದಂತಹ ಪರಿಸ್ಥಿತಿಯನ್ನು ನಾವು ನೋಡಿದ್ದೇವೆ, ಈ ಬಾರಿ ಅಣೆಕಟ್ಟು ನೀರಿನ ಒಳಹರಿವು ನೋಡಲು ಹೆಣಗಾಡುತ್ತಿದೆ ಎಂದು ಹೊಸ ಆನಂದೂರು ನಿವಾಸಿ ರಾಮಣ್ಣ ತಿಳಿಸಿದ್ದಾರೆ.

ಕೆಆರ್‌ಎಸ್ ಪೂರ್ಣ ಜಲಾಶಯದ ಮಟ್ಟ 124.8 ಅಡಿ ಮೇ 28 ರಂದು ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ- 80.26 ಅಡಿ ನೀರಿನ ಒಳಹರಿವು- 413 ಕ್ಯೂಸೆಕ್ ನೀರಿನ ಹೊರಹರಿವು- 2997 ಕ್ಯೂಸೆಕ್ಸ್, ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 104.96 ಅಡಿ ಇತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com