ಚಿಕ್ಕಮಗಳೂರು: ನಾಗರಹಾವು ಕಚ್ಚಿ ಉರಗ ತಜ್ಞ ಸ್ನೇಕ್ ನರೇಶ್ ಸಾವು!
ಚಿಕ್ಕಮಗಳೂರಿನಲ್ಲಿ ನಾಗರಹಾವು ಕಚ್ಚಿ ಉಗರ ತಜ್ಞ ಸ್ನೇಕ್ ನರೇಶ್ ಮೃತಪಟ್ಟಿದ್ದಾರೆ. ಸ್ನೇಕ್ ನರೇಶ್ ಅವರು ಸ್ವತಃ ತಾವು ಹಿಡಿದು ಬ್ಯಾಗ್‌ನಲ್ಲಿ ಇಟ್ಟಿದ್ದ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ.
Published: 30th May 2023 06:40 PM | Last Updated: 30th May 2023 06:40 PM | A+A A-

ಸ್ನೇಕ್ ನರೇಶ್
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ನಾಗರಹಾವು ಕಚ್ಚಿ ಉಗರ ತಜ್ಞ ಸ್ನೇಕ್ ನರೇಶ್ ಮೃತಪಟ್ಟಿದ್ದಾರೆ. ಸ್ನೇಕ್ ನರೇಶ್ ಅವರು ಸ್ವತಃ ತಾವು ಹಿಡಿದು ಬ್ಯಾಗ್‌ನಲ್ಲಿ ಇಟ್ಟಿದ್ದ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ.
ಮೃತ 51 ವರ್ಷದ ಸ್ನೇಹ ನರೇಶ್ ಅವರು ಚಿಕ್ಕಮಗಳೂರಿನಲ್ಲಿ ನೂರಾರು ಹಾವುಗಳನ್ನು ಹಿಡಿದು ಜನರಿಗೆ ಜಾಗೃತಿ ಮೂಡಿಸುತ್ತಿದ್ದರು. ಆದರೆ ದುರ್ವಿಧಿ ಅವರು ಹಿಡಿದು ಬ್ಯಾಗ್ ನಲ್ಲಿಟ್ಟ ಹಾವೇ ಅವರನ್ನು ಕಚ್ಚಿದ್ದು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ದೇವನಹಳ್ಳಿ ಬಳಿ ಕೆರೆಯಲ್ಲಿ ಮುಳುಗಿ ನಾಲ್ವರು ಯುವಕರು ಸಾವು, ಮೃತದೇಹ ಪತ್ತೆ
ನರೇಶ್ ಅವರು ಇಂದು ಬೆಳಗ್ಗೆ ನಾಗರಹಾವೊಂದನ್ನು ರಕ್ಷಣೆ ಮಾಡಿ ತಂದಿದ್ದರು. ನಂತರ ಮತ್ತೊಂದು ಹಾವಿನ ರಕ್ಷಣೆಗೆ ಕರೆ ಬಂದಿದ್ದು, ಈ ವೇಳೆ ಬೈಕಿನ ಸ್ಕೂಟಿಯಲ್ಲಿದ್ದ ಹಾವಿನ ಚೀಲದ ಗಂಟು ಬಿಗಿ ಮಾಡಲು ಡಿಕ್ಕಿ ಓಪನ್ ಮಾಡಿದ ವೇಳೆ ನಾಗರಹಾವು ನರೇಶ್ ಅವರನ್ನು ಕಚ್ಚಿತ್ತು.
ಹಾವು ಕಚ್ಚಿದ ಪರಿಣಾಮ ನರೇಶ್ ಅವರು ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರು ಅದು ಫಲ ನೀಡಲಿಲ್ಲ.