ಗಣಿ-ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಹತ್ಯೆ: ಮಹಿಳಾ ಅಧಿಕಾರಿಯ ಸೋದರ ಮತ್ತು ಬೆಂಗಳೂರು ಡಿಸಿ ಹೇಳಿದ್ದೇನು?

ಭಾನುವಾರ ಬೆಂಗಳೂರು ಜನತೆಗೆ ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಗಣಿ ಭೂ ವಿಜ್ಞಾನ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕ ಪ್ರತಿಮಾ(37ವ) ಕೊಲೆ ಘಟನೆಗೆ ಸಂಬಂಧಿಸಿದಂತೆ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕೊಲೆಯಾದ ಅಧಿಕಾರಿ ಪ್ರತಿಮಾ
ಕೊಲೆಯಾದ ಅಧಿಕಾರಿ ಪ್ರತಿಮಾ

ಬೆಂಗಳೂರು : ಭಾನುವಾರ ಬೆಂಗಳೂರು ಜನತೆಗೆ ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಗಣಿ ಭೂ ವಿಜ್ಞಾನ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕ ಪ್ರತಿಮಾ(37ವ) ಕೊಲೆ ಘಟನೆಗೆ ಸಂಬಂಧಿಸಿದಂತೆ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಡಿಸಿ ಕೆ.ಎ ದಯಾನಂದ್ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲಸದ ವಿಚಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾಗೆ ಯಾವುದೇ ರೀತಿಯ ಅಸಮಾಧಾನವಿರಲಿಲ್ಲ.ಕೆಲಸದ ವಿಚಾರವಾಗಿ ಪ್ರತಿಮಾ ಯಾವುದೇ ಗಂಭೀರ ಆರೋಪಗಳನ್ನು ಕೂಡ ಮಾಡಿರಲಿಲ್ಲ ಎಂದು ತಿಳಿಸಿದರು.

ಇದೇ ವಿಷಯವಾಗಿ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಪುರವಾಡ್ ಪ್ರತಿಕ್ರಿಯಿಸಿದ್ದು, ನಿನ್ನೆ ಸಂಜೆ 8 ಗಂಟೆಗೆ ಪ್ರತಿಮಾ ಮನೆಗೆ ಬಂದಿದ್ದರು. ಇಂದು ಬೆಳಿಗ್ಗೆ ಮನೆಯವರು ಫೋನ್ ಮಾಡಿದ್ದರು.ಬೆಳಗ್ಗೆ ಪ್ರತಿಮಾ ಅವರ ಸಹೋದರ ಮನೆಗೆ ಬಂದು ನೋಡಿದಾಗ ಕೊಲೆ ಕೇಸ್ ಬಹಿರಂಗವಾಗಿದೆ.

ಮೊದಲು ಉಸಿರು ಹುಟ್ಟಿಸಿ ನಂತರ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.ಐದು ವರ್ಷದಿಂದ ಡಿಪ್ಯೂಟಿ ಡೈರೆಕ್ಟರ್ ಪ್ರತಿಮಾ ಒಬ್ಬರೇ ವಾಸವಾಗಿದ್ದರು. ಕೊಲೆಯಾದ ಪ್ರತಿಮಾ ಮನೆಯಲ್ಲಿ ಯಾವುದೇ ರೀತಿಯಾದಂತಹ ವಸ್ತು ಕಳ್ಳತನವಾಗಿಲ್ಲ. ಆರೋಪಿಗಳ ಬಂಧನಕ್ಕಾಗಿ ಈಗಾಗಲೇ ಪೊಲೀಸರ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಪ್ರತಿಮಾ ಅವರ ಸೋದರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ ನನ್ನ ಸೋದರಿಯ ಈ ಸಾವಿನಿಂದ ಬಹಳ ಆಘಾತಕ್ಕೊಳಗಾಗಿದ್ದೇವೆ. ನಮಗೆ ಯಾರೂ ಶತ್ರುಗಳಿಲ್ಲ. ಯಾರು ಏಕೆ ಕೊಲೆ ಮಾಡಿದರು ಎಂದು ಗೊತ್ತಾಗುತ್ತಿಲ್ಲ. ನಮಗೆ ಸರ್ಕಾರದ ಮೇಲೆ ನಂಬಿಕೆಯಿದೆ. ಪೊಲೀಸರಿಂದ ಸೂಕ್ತ ತನಿಖೆ ನಡೆಸಿ ಸತ್ಯ ಹೊರಗೆ ಬರುತ್ತದೆ ಎಂಬ ವಿಶ್ವಾಸವಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.

ನನ್ನ ಸಹೋದರಿಯನ್ನು ಕೆಲಸದ ವಿಚಾರಕ್ಕೆ ಕೊಲೆ ಮಾಡಲಾಗಿದೆ. ಸರ್ಕಾರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇ ತಪ್ಪಾ ಎಂದು ಅವರ ಸಹೋದರ ಗೋಳಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com