ಕಾಂಬೋಡಿಯಾದಲ್ಲಿ ಸೈಬರ್ ವಂಚನೆ ಜಾಲಕ್ಕೆ ಸಿಲುಕಿದ್ದ ಕನ್ನಡಿಗನ ರಕ್ಷಣೆ ಮಾಡಿದ ಅನಿವಾಸಿ ಭಾರತೀಯ ವೇದಿಕೆ!

ಕಾಂಬೋಡಿಯಾದಲ್ಲಿ ಸಿಲುಕಿದ್ದ ಚಿಕ್ಕಮಗಳೂರಿನ ಎನ್‌ಆರ್ ಪುರ ತಾಲೂಕಿನ ಮಾಗುಂಡಿ ಗ್ರಾಮದ ಅಶೋಕ ಅವರನ್ನು ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆ ರಕ್ಷಿಸಿದ್ದು, ಕೂಡಲೇ ಪೊಲೀಸರು ಹಾಗೂ ರಾಯಭಾರಿ ಕಚೇರಿಗೆ ದೂರು ನೀಡಿ, ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಾಂಬೋಡಿಯಾದಲ್ಲಿ ಸಿಲುಕಿದ್ದ ಚಿಕ್ಕಮಗಳೂರಿನ ಎನ್‌ಆರ್ ಪುರ ತಾಲೂಕಿನ ಮಾಗುಂಡಿ ಗ್ರಾಮದ ಅಶೋಕ ಅವರನ್ನು ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆ ರಕ್ಷಿಸಿದ್ದು, ಕೂಡಲೇ ಪೊಲೀಸರು ಹಾಗೂ ರಾಯಭಾರಿ ಕಚೇರಿಗೆ ದೂರು ನೀಡಿ, ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ವೇದಿಕೆಯು ಅಶೋಕ ಅವರನ್ನು ಬೆಂಗಳೂರಿನಲ್ಲಿ ಸ್ವಾಗತಿಸಿತು. ಕಾಂಬೋಡಿಯಾದಿಂದ ರಕ್ಷಿಸಲ್ಪಟ್ಟ ಇಬ್ಬರು ಕನ್ನಡಿಗರಲ್ಲಿ ಇವರು ಒಬ್ಬರು. 1000-2000 ಡಾಲರ್ ಸಂಬಳಕ್ಕೆ ಖಾಸಗಿ ಏಜೆನ್ಸಿಯೊಂದಕ್ಕೆ ಡೇಟಾ ಎಂಟ್ರಿ ಆಪರೇಟರ್‌ಗಳಾಗಿ ಕೆಲಸ ಮಾಡಲು ಅವರನ್ನು ನೇಮಿಸಲಾಗಿತ್ತು. ಆದರೆ ಹ್ಯಾಕಿಂಗ್ ಮತ್ತು ಸೈಬರ್ ವಂಚನೆಗಾಗಿ ಚೀನಾದ ಕಂಪನಿಯಲ್ಲಿ ಇರಿಸಲಾಯಿತು ಎಂದು NRIFK ನ ಉಪ ಅಧ್ಯಕ್ಷರಾದ ಡಾ ಆರತಿ ಕೃಷ್ಣ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಕ್ರೌನ್ ಕೆಸಿನೋ ಎಂಬ ಕಂಪೆನಿಯಲ್ಲಿ ಕೆಲಸಕ್ಕೆ ನೀವು ಆಯ್ಕೆಯಾಗಿದ್ದೀರಾ, ತಕ್ಷಣವೇ ನೀವು ಕಾಂಬೋಡಿಯಾಗೆ ಬರಬೇಕು, ತಿಂಗಳಿಗೆ 800 ಡಾಲರ್ ಸಂಬಳ ಎಂಬ ಆಫರ್ ಲೆಟರ್ ಒಂದು ಕಳೆದ ಮೂರು ತಿಂಗಳ ಹಿಂದೆ ಅಶೋಕ್ ಕೈ ಸೇರಿತ್ತು. ಇದನ್ನು ನಂಬಿಕೊಂಡು ಕಾಂಬೋಡಿಯಾಕ್ಕೆ ಹೋದ ಆಶೋಕ್ ಗೆ ಅಲ್ಲಿ ದೊಡ್ಡ ಶಾಕ್ ಕಾದಿತ್ತು.. ಅಲ್ಲಿ ಆತನಿಗೆ ಇದ್ದ ಕೆಲಸವೇ ಬೇರೆ ಆಗಿತ್ತು.

ಕಾಂಬೋಡಿಯಾ ಮೂಲದ ಚೀನಿ ಆ್ಯಪ್ ಗ್ಯಾಂಗ್.. ಅದಕ್ಕೆ ಬಳಸಿಕೊಳ್ತಿದ್ದಿದ್ದು ಇದೇ ಭಾರತೀಯ ಮೂಲದ ಅಮಾಯಕ ಯುವಕರನ್ನ.. ಟೂರಿಸ್ಟ್ ವೀಸಾ ಮೂಲಕ ಭಾರತೀಯರನ್ನು ಕರೆತಂದು ಅದನ್ನು ಬಿಸಿನೆಸ್ ವೀಸಾಗೆ ಬದಲಾಯಿಸ್ತಾರೆ.. ಅಲ್ಲಿಂದ ಒಂದು ವರ್ಷ ಕೆಲಸಕ್ಕೆ ತೆರಳಿದ ಈ ಯುವಕರನ್ನ ಬಂಧಿಯಾಗಿಸುತ್ತಾರೆ. 800 ಡಾಲರ್ ಸಂಬಳದ ಆಸೆ ಹುಟ್ಟಿಸಿ ಭಾರತೀಯ ಅಮಾಯಕ ಯುವಕರನ್ನು ಕರೆದುಕೊಂಡು ಹೋಗ್ತಾರೆ.. ಅಲ್ಲಿ ಅವರನ್ನು ಒತ್ತೆಯಾಳಾಗಿರಿಸಿಕೊಂಡು ಅವರಿಂದಲೇ ಭಾರತೀಯರಿಗೆ ಮೋಸ ಮಾಡಿಸುವ ಕೆಲಸಕ್ಕೆ ಕುತಂತ್ರಿ ಚೀನಾ ಮುಂದಾಗಿದೆ.

ಕಾಂಬೋಡಿಯಾಗೆ ತೆರಳಿದ್ದ ಮತ್ತೊಬ್ಬ ಕನ್ನಡಿಗ ಕೋಲಾರದ ಜೈಪಾಲ್ ಜೈಶಂಕರ್ ಮಂಗಳವಾರ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಆರತಿ ತಿಳಿಸಿದ್ದಾರೆ. ಅಶೋಕ್ ಕುಟುಂಬವು ಸಹಾಯಕ್ಕಾಗಿ ತನ್ನ ಕಚೇರಿಯನ್ನು ಸಂಪರ್ಕಿಸಿದೆ,  ಅಶೋಕ ಚೀನಾದ ಸಂಸ್ಥೆಯೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲ ಮತ್ತು ಬದಲಿಗೆ ಭಾರತಕ್ಕೆ ಹಿಂದಿರುಗಲು ಬಯಸಿದ್ದಾರೆ, ಆದರೆ ಅವನ ಪಾಸ್‌ಪೋರ್ಟ್, ವೀಸಾ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಾಂಬೋಡಿಯಾಗೆ ಕರೆದೊಯ್ಯಲು ಏಜೆಂಟ್‌ಗೆ 2 ಲಕ್ಷ ರೂ.  ಕಮಿಷನ್ ನೀಡಬೇಕು. ಭಾರತೀಯರಿಗೆ ನಿರ್ದಿಷ್ಟ ಉದ್ಯೋಗದ ಭರವಸೆ ನೀಡುವ ಕೆಲವು ಗ್ಯಾಂಗ್‌ಗಳು ಕಾರ್ಯನಿರ್ವಹಿಸುತ್ತಿವೆ, ಕೆಲಸ ಸಿಕ್ಕಮೇಲೆ  ಕಾಂಬೋಡಿಯಾ ತಲುಪಿದಾಗ, ಅವರು ಚೀನಾದ ಕಂಪನಿಗಳಿಗೆ ಸೇರುತ್ತಾರೆ. ಆದರೆ ಅವರಿಗೆ ಅಲ್ಲಿ ಬೇರೆ ಯಾವುದೋ ಕೆಲಸ ನೀಡುತ್ತಾರೆ ಎಂದು ಆರತಿ ಹೇಳಿದರು. ಅಂತಹ ಗ್ಯಾಂಗ್‌ನಿಂದ ಅಶೋಕ ಸಿಕ್ಕಿಬಿದ್ದಿದ್ದಾನೆಯೇ ಎಂಬುದು ಇನ್ನೂ ಪರಿಶೀಲನೆಯಾಗಬೇಕಿದೆ ಎಂದಿದ್ದಾರೆ.

ಅದೇ ರೀತಿ ಸಿಕ್ಕಿಬಿದ್ದಿರುವ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಜನರು ಸೇರಿದಂತೆ 500 ಕ್ಕೂ ಹೆಚ್ಚು ಭಾರತೀಯರು ಇರುವುದಾಗಿ ಅಶೋಕ್ ವೇದಿಕೆಗೆ ತಿಳಿಸಿದರು. ಕುಟುಂಬವು ಅವರ ಸಹಾಯವನ್ನು ಕೋರಿದ ಕೂಡಲೇ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿದ್ದಾರೆ ಎಂದು ಆರತಿ ಹೇಳಿದರು. ಈ ವಿಷಯವನ್ನು ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಗಮನಕ್ಕೂ ತರಲಾಗಿತ್ತು ಎಂದು ಹೇಳಿದ್ದಾರೆ.

ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತರು ಕಾನೂನುಬಾಹಿರ ಚಟುವಟಿಕೆಗಳ ಭಾಗವಾಗಲು ಒತ್ತಾಯಿಸಲ್ಪಡುತ್ತಾರೆ. ಅವರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆಯ ನಿರಂತರ ಬೆದರಿಕೆಗಳನ್ನು ಎದುರಿಸುತ್ತಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com