ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಬರಗಾಲ ಚರ್ಚೆ ಕುರಿತ ಸಭೆ: ಹಾಜರಾಗಿದ್ದು ಕೇವಲ ಇಬ್ಬರು ಶಾಸಕರು!

18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳು ಈ ವರ್ಷ ಮುಂಗಾರು ಮಳೆ ಕೊರತೆಯಿಂದ ಭೀಕರ ಬರಗಾಲಕ್ಕೆ ತುತ್ತಾಗಿದೆ. ಇಷ್ಟೊಂದು ಸಮಸ್ಯೆಯಿದ್ದರೂ ನಿನ್ನೆ ಶುಕ್ರವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬರ ಪರಿಸ್ಥಿತಿ ಕುರಿತು ನಡೆದ ಸಭೆಯಲ್ಲಿ ಜಿಲ್ಲೆಯ 18 ಶಾಸಕರ ಪೈಕಿ ಭಾಗವಹಿಸಿದ್ದು ಮಾತ್ರ ಇಬ್ಬರೇ ಇಬ್ಬರು ಶಾಸಕರು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳು ಈ ವರ್ಷ ಮುಂಗಾರು ಮಳೆ ಕೊರತೆಯಿಂದ ಭೀಕರ ಬರಗಾಲಕ್ಕೆ ತುತ್ತಾಗಿದೆ. ಇಷ್ಟೊಂದು ಸಮಸ್ಯೆಯಿದ್ದರೂ ನಿನ್ನೆ ಶುಕ್ರವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬರ ಪರಿಸ್ಥಿತಿ ಕುರಿತು ನಡೆದ ಸಭೆಯಲ್ಲಿ ಜಿಲ್ಲೆಯ 18 ಶಾಸಕರ ಪೈಕಿ ಭಾಗವಹಿಸಿದ್ದು ಮಾತ್ರ ಇಬ್ಬರೇ ಇಬ್ಬರು ಶಾಸಕರು. 

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಮಹೇಂದ್ರ ತಮ್ಮಣ್ಣನವರ್ ಮತ್ತು ವಿಶ್ವಾಸ ವೈದ್ಯ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮಾಂತರ ಶಾಸಕರು ಕೂಡ ಸಭೆಗೆ ಹಾಜರಾಗಿರಲಿಲ್ಲ.

ಸಭೆಗೆ ಗೈರಾದ ಇತರ ಶಾಸಕರು: ಆಸೀಫ್ ಸೇಟ್ (ಬೆಳಗಾವಿ ಉತ್ತರ), ಅಭಯ ಪಾಟೀಲ (ಬೆಳಗಾವಿ ದಕ್ಷಿಣ), ವಿಠಲ ಹಲಗೇಕರ (ಖಾನಾಪುರ), ಮಹಾಂತೇಶ ಕೌಜಲಗಿ (ಬೈಲಹೊಂಗಲ), ಅಶೋಕ ಪಟ್ಟಣ (ರಾಮದುರ್ಗ), ಬಾಬಾಸಾಹೇಬ ಪಾಟೀಲ (ಕಿತ್ತೂರು), ರಮೇಶ ಜಾರಕಿಹೊಳಿ ( ಗೋಕಾಕ), ಬಾಲಚಂದ್ರ ಜಾರಕಿಹೊಳಿ (ಅರಭಾವಿ), ನಿಖಿಲ್ ಕತ್ತಿ (ಹುಕ್ಕೇರಿ), ಗಣೇಶ ಹುಕ್ಕೇರಿ (ಚಿಕ್ಕೋಡಿ), ರಾಜು ಕಾಗೆ (ಕಾಗವಾಡ), ಲಕ್ಷ್ಮಣ ಸವದಿ (ಅಥಣಿ), ಶಶಿಕಲಾ ಜೊಲ್ಲೆ (ನಿಪ್ಪಾಣಿ), ಮತ್ತು ದುರ್ಯೋಧನ ಐಹೊಳೆ (ರಾಯಬಾಗ).

ಗೈರಾದ ಶಾಸಕರಿಗೆ ತಮ್ಮ ಕ್ಷೇತ್ರದ ಜನರ ಹಿತಾಸಕ್ತಿಯಿಂದ ಮಹತ್ವದ ಸಭೆಗಳಿಗೆ ಹಾಜರಾಗುವುದು ಹೆಚ್ಚು ಮುಖ್ಯವಾಗಿತ್ತು ಎನಿಸುತ್ತದೆ. ಬರಗಾಲದಿಂದ ತಮ್ಮ ಕ್ಷೇತ್ರಗಳಲ್ಲಿ ಜನರು ಎದುರಿಸುತ್ತಿರುವ ಬಿಕ್ಕಟ್ಟಿಗೆ ಪರಿಹಾರ ಯಾರು ಕಂಡುಹಿಡಿಯಬೇಕು ಎಂದು ಬೆಳಗಾವಿಯ ವಿವಿಧ ಭಾಗಗಳಿಂದ ಹಲವಾರು ಜನರು ಗೈರುಹಾಜರಾದ ಶಾಸಕರನ್ನು ಪ್ರಶ್ನಿಸುತ್ತಿದ್ದಾರೆ. 

ಬೆಳಗಾವಿ ಜಿಲ್ಲೆ ಈ ವರ್ಷ ಶೇ.61 ರಷ್ಟು ಮಳೆ ಕೊರತೆ ಎದುರಿಸುತ್ತಿದೆ. ನಿನ್ನೆ ನಡೆದ ಸಭೆಯಲ್ಲಿ ಬೆಳೆ ನಷ್ಟ, ನೀರಿನ ಸಮಸ್ಯೆ ನೀಗಿಸಲು ಪರಿಹಾರ, ಜಿಲ್ಲೆಯ ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚೆ ನಡೆಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com