ಕ್ರಿಶ್ಚಿಯನ್ ಏಜೆಂಟ್ ಪೆರಿಯಾರ್ ರಾಮಸ್ವಾಮಿಯಿಂದಲೇ ಏನೂ ಆಗಲಿಲ್ಲ: ಉದಯನಿಧಿ ಸ್ಟಾಲಿನ್ ಬೊಗಳಿದರೆ ಹಿಂದೂ ಧರ್ಮ ಹಾಳಾಗದು!

ಕ್ರಿಶ್ಚಿಯನ್ ಏಜೆಂಟ್ ಆಗಿದ್ದ ಪೆರಿಯಾರ್ ರಾಮಸ್ವಾಮಿ ಅವರಿಂದ ಹಿಂದೂ ಧರ್ಮ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಇವರಿಂದ ಪ್ರೇರಣೆಗೊಂಡು ಉದಯನಿಧಿ ಸ್ಟಾಲಿನ್ ಬೊಗಳಲು ಆರಂಭಿಸಿದ್ದಾರೆ.
ಉದಯನಿಧಿ ಸ್ಟಾಲಿನ್
ಉದಯನಿಧಿ ಸ್ಟಾಲಿನ್
Updated on

ಚಿತ್ರದುರ್ಗ: ಕ್ರಿಶ್ಚಿಯನ್ ಏಜೆಂಟ್ ಆಗಿದ್ದ ಪೆರಿಯಾರ್ ರಾಮಸ್ವಾಮಿ ಅವರಿಂದ ಹಿಂದೂ ಧರ್ಮ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಇವರಿಂದ ಪ್ರೇರಣೆಗೊಂಡು ಉದಯನಿಧಿ ಸ್ಟಾಲಿನ್ ಬೊಗಳಲು ಆರಂಭಿಸಿದ್ದಾರೆ. ಇದರಿಂದ ಹಿಂದೂ ಧರ್ಮ ಇನ್ನಷ್ಟು ಗಟ್ಟಿಯಾಗಲಿದೆಯೇ ಹೊರತು ಹಾಳಾಗದು ಎಂದು ಕೊಲ್ಲಾಪುರದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಕಿಡಿಕಾರಿದ್ದಾರೆ.

ಚಿತ್ರದುರ್ಗದ ಜೈನಧಾಮದಲ್ಲಿ ಬಜರಂಗದಳ ಮತ್ತು‌ ವಿಶ್ವ ಹಿಂದೂ ಪರಿಷತ್ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ  ಚಾಲನೆ ನೀಡಿ ಮಾತನಾಡಿದ ಅವರು,  ತಮಿಳುನಾಡಿನ ಹುಡುಗ ಉದಯನಿಧಿ ಸ್ಟಾಲಿನ್ ಹಿಂದೂ ಧರ್ಮದ ಬಗ್ಗೆ ಬೊಗಳಿದ್ದಾರೆ. ಇದರಿಂದ ಹಿಂದೂ ಧರ್ಮಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಹಿಂದೂ ಧರ್ಮದಲ್ಲಿ ಹುಟ್ಟಿ ಹಿಂದೂ ಧರ್ಮದ ವಿರುದ್ಧವೇ ಮಾತನಾಡುತ್ತಿರುವವರಿಗೆ ಗಣೇಶ ಸದ್ಬುದ್ದಿ ಕೊಡಲಿ ಎಂದರು.

ದೇಶದಲ್ಲಿ 80 ರಿಂದ 90 ಕೋಟಿ ಹಿಂದೂಗಳು ಇದ್ದೇವೆ. ಹೀನ ಭಾವನೆ ಹೊಂದದೇ ಎಲ್ಲರೊಂದಿಗೆ ಬದುಕುವ ಮನೋಭಾವ ಹೊಂದಿದ್ದೇವೆ. ಸನಾತನ ಧರ್ಮ ವಿಶಿಷ್ಟವಾಗಿದ್ದು. ವೈಜ್ಞಾನಿಕ ವಿಚಾರಗಳನ್ನು ಪಾಲನೆ ಮಾಡುತ್ತದೆ. ಜಾತಿ, ಪಂಥ ನಿರಪೇಕ್ಷತೆ ಸನಾತನ ಧರ್ಮದಲ್ಲಿದೆ. ಇಷ್ವವಾದ ದೇವರನ್ನು ಪೂಜಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂದು‌ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com