ಮೈಸೂರು ದಸರಾ ಆರಂಭ: ಪ್ರವಾಸಿ ವಾಹನಗಳಿಗೆ ಇಲ್ಲ ತೆರಿಗೆ ವಿನಾಯಿತಿ

ದಸರಾ ಹಬ್ಬ ನಿನ್ನೆ ಭಾನುವಾರ ಆರಂಭವಾಗಿದ್ದು, ಮೈಸೂರು ನಗರಕ್ಕೆ ಆಗಮಿಸುವ ಪ್ರವಾಸಿಗರ ವಾಹನಗಳಿಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿಲ್ಲ. ರಾಜ್ಯದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸಕ್ಕೆ ಈಗಾಗಲೇ ಹೆಚ್ಚಿನ ಹೊರೆಯಾಗಿರುವುದರಿಂದ ತೆರಿಗೆ ವಿನಾಯಿತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ. 
ಜಂಬೂ ಸವಾರಿಗೆ ದಸರಾ ಆನೆಗಳ ಅಭ್ಯಾಸ
ಜಂಬೂ ಸವಾರಿಗೆ ದಸರಾ ಆನೆಗಳ ಅಭ್ಯಾಸ
Updated on

ಬೆಂಗಳೂರು: ದಸರಾ ಹಬ್ಬ ನಿನ್ನೆ ಭಾನುವಾರ ಆರಂಭವಾಗಿದ್ದು, ಮೈಸೂರು ನಗರಕ್ಕೆ ಆಗಮಿಸುವ ಪ್ರವಾಸಿಗರ ವಾಹನಗಳಿಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿಲ್ಲ. ರಾಜ್ಯದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸಕ್ಕೆ ಈಗಾಗಲೇ ಹೆಚ್ಚಿನ ಹೊರೆಯಾಗಿರುವುದರಿಂದ ತೆರಿಗೆ ವಿನಾಯಿತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ. 

ಇದು ರಾಜ್ಯಕ್ಕೆ ಬರುವ ಪ್ರವಾಸಿ ವಾಹನಗಳ ಮೇಲೆ ಪರಿಣಾಮ ಬೀರಲಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ತಿಳಿಸಿದೆ. ರಾಜ್ಯ ಸರ್ಕಾರವು ‘ಖಾತರಿ ಯೋಜನೆ’ಗಳನ್ನು ಜಾರಿಗೆ ತಂದ ನಂತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಆದರೆ ತೆರಿಗೆ ವಿನಾಯಿತಿ ನೀಡುವುದರಿಂದ ಪ್ರವಾಸಿಗರ ಒಳಹರಿವು ಹೆಚ್ಚುತ್ತದೆ ಮತ್ತು ಪರೋಕ್ಷ ತೆರಿಗೆ ಮೂಲಕ ಆದಾಯವನ್ನು ಪಡೆಯಬಹುದು ಎಂಬುದನ್ನು ಅರಿತುಕೊಳ್ಳುವಲ್ಲಿ ವಿಫಲವಾಗಿದೆ ಎನ್ನುತ್ತಾರೆ. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಫೆಡರೇಶನ್‌ನ ನಾಮನಿರ್ದೇಶಿತ ಅಧ್ಯಕ್ಷ ನಟರಾಜ್ ಶರ್ಮ, ಪ್ರತಿ ವರ್ಷ ದಸರಾಗೆ ಸುಮಾರು 10,000 ಹಳದಿ ಬೋರ್ಡ್ ಕಾರುಗಳು, 3,000 ಮ್ಯಾಕ್ಸಿ ಕ್ಯಾಬ್‌ಗಳು ಮತ್ತು ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳದಿಂದ ಸುಮಾರು 1,000 ಬಸ್‌ಗಳು ಮೈಸೂರು ಪ್ರವೇಶಿಸುತ್ತವೆ. ಸಾವಿರಾರು ಪ್ರಯಾಣಿಕರು ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಾರೆ. ಹತ್ತಿರದ ಪ್ರವಾಸಿ ತಾಣಗಳನ್ನು ಸುತ್ತುತ್ತಾರೆ. ಕರ್ನಾಟಕ ಸರ್ಕಾರವು 15 ವರ್ಷಗಳಿಂದ ಈ ತೆರಿಗೆ ವಿನಾಯಿತಿಯನ್ನು ದಸರಾ ಹಬ್ಬದ ಸಂದರ್ಭದಲ್ಲಿ 15 ದಿನಗಳ ಅವಧಿಗೆ ನೀಡುತ್ತಿದೆ. ಆದಾಗ್ಯೂ, ಈ ವರ್ಷ ವಿನಾಯಿತಿ ನೀಡದಿರಲು ನಿರ್ಧರಿಸಿದೆ. 

ಈ ವರ್ಷ ತೆರಿಗೆ ವಿನಾಯಿತಿ ನೀಡುವುದರಿಂದ ಆಗುವ ನಷ್ಟವನ್ನು ಸರ್ಕಾರ ಲೆಕ್ಕ ಹಾಕಿದೆ, ಆದರೆ ಪ್ರವಾಸಿಗರು ಮತ್ತು ಆದಾಯಕ್ಕಾಗಿ ಪ್ರವಾಸಿಗರನ್ನು ಅವಲಂಬಿಸಿರುವ ಜನರ ಜೀವನೋಪಾಯದ ಮೂಲಕ ಪಡೆಯಬಹುದಾದ ನೇರ ಮತ್ತು ಪರೋಕ್ಷ ತೆರಿಗೆಯನ್ನು ಲೆಕ್ಕ ಹಾಕಿಲ್ಲ ಎನ್ನುತ್ತಾರೆ ನಟರಾಜ್ ಶರ್ಮ. 55 ಆಸನಗಳ ಇತರ ರಾಜ್ಯ ಬಸ್ ಸುಮಾರು 18,000 ರೂಪಾಯಿಗಳನ್ನು ತೆರಿಗೆಯಾಗಿ ಪಾವತಿಸುತ್ತದೆ. ತೆರಿಗೆಯು ವಾಹನದ ಪ್ರಕಾರ ಮತ್ತು ಆಸನ ಸಾಮರ್ಥ್ಯದ ಮೇಲೆ ಬದಲಾಗುತ್ತದೆ ಎಂದರು. 

ಪ್ರತಿ ವರ್ಷವೂ ದಸರಾ ಹಬ್ಬದ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ವಿನಾಯಿತಿ ಘೋಷಿಸುತ್ತಿದ್ದು, ಈ ಬಾರಿ ಹಣಕಾಸು ಇಲಾಖೆಯಿಂದ ಒಪ್ಪಿಗೆ ಸಿಗದ ಕಾರಣ ಘೋಷಣೆ ಮಾಡಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಮೂಲಗಳು ಸಮರ್ಥಿಸಿಕೊಂಡಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com