ಸಿಲ್ವರ್ ಟಾಕೀಸ್: ಆರೋಗ್ಯಕರ ವೃದ್ಧಾಪ್ಯಕ್ಕೆ ಅತ್ಯುತ್ತಮ ವೇದಿಕೆ

ಸಾಮಾಜಿಕ ಜಾಲತಾಣಗಳಲ್ಲೇ ತಲ್ಲೀನರಾಗಿರುವ ಇಂದಿನ ಯುವಕರಿಗೆ ಅವರ ಪೋಷಕರು ಅಥವಾ ಅಜ್ಜ-ಅಜ್ಜಿಯರಿಗೆ ವಯಸ್ಸಾಗುತ್ತಿದೆ, ಒಂಟಿತನ ಕಾಡುತ್ತಿದೆ ಎಂಬುದನ್ನು ಮರೆಯುತ್ತಾರೆ.
ವೃದ್ಧಾಪ್ಯ (ಸಾಂಕೇತಿಕ ಚಿತ್ರ)
ವೃದ್ಧಾಪ್ಯ (ಸಾಂಕೇತಿಕ ಚಿತ್ರ)

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲೇ ತಲ್ಲೀನರಾಗಿರುವ ಇಂದಿನ ಯುವಕರಿಗೆ ಅವರ ಪೋಷಕರು ಅಥವಾ ಅಜ್ಜ-ಅಜ್ಜಿಯರಿಗೆ ವಯಸ್ಸಾಗುತ್ತಿದೆ, ಒಂಟಿತನ ಕಾಡುತ್ತಿದೆ ಎಂಬುದನ್ನು ಮರೆಯುತ್ತಾರೆ.
 
ಆದರೆ ವೃದ್ಧಾಪ್ಯದಲ್ಲಿ ಒಂಟಿತನ ಮರೆಸಿ, ಚಟುವಟಿಕೆಯಿಂದ ಕೂಡಿದ ವಾತಾವರಣವಿರುವ ಸಿಲ್ವರ್ ಟಾಕೀಸ್ ಎಂಬ ವೇದಿಕೆಯನ್ನು ಇಬ್ಬರು ವ್ಯಕ್ತಿಗಳು ನಿರ್ಮಿಸಿದ್ದಾರೆ. 

ರೆಷ್ಮಿ ಚಕ್ರವರ್ತಿ ಹಾಗೂ ನಿಧಿ ಚಾವ್ಲಾ ಸಿಲ್ವರ್ ಟಾಕೀಸ್ ನ ಸಂಸ್ಥಾಪಕರಾಗಿದ್ದು, ಇದೊಂದು ತಂತ್ರಜ್ಞಾನ-ಸಕ್ರಿಯಗೊಳಿಸಿದ ಸಮುದಾಯವಾಗಿದ್ದು, 55 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ನಿರ್ಮಿಸಲಾಗಿದೆ.

55 ವರ್ಷಕ್ಕಿಂತ ಮೇಲ್ಪಟ್ಟವರು ಅಥವಾ ವೃದ್ಧಾಪ್ಯ ಸನಿಹದಲ್ಲಿರುವವರನ್ನು ಈ ವೇದಿಕೆಯ ಚಟುವಟಿಕೆಯಿಂದ ಇರಿಸುತ್ತದೆ, ಮಹಿಳೆಯರೇ ಇರುವ ಈ ತಂಡದ ಸಮುದಾಯ, ಆನ್ ಲೈನ್ ವರ್ಕ್ ಶಾಪ್, ಸಭೆಗಳು, ತರಗತಿಗಳನ್ನು ನಡೆಸುತ್ತದೆ. ವಯಸ್ಸಾದವರನ್ನು ಪರಸ್ಪರ ಬೆಸೆಯುವುದುಮ, ಜಾಗೃತಿ ಮತ್ತು ಸಬಲೀಕರಣಕ್ಕಾಗಿ ಪರಿಸರವನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ. 

ಸಾಮಾಜಿಕವಾಗಿ, ವೃತ್ತಿಯಲ್ಲಿ ಸಕ್ರಿಯರಾಗಿರುತ್ತಿದ್ದ ತಮ್ಮ ತಂದೆ ನಿವೃತ್ತಿಯಾದ ಬಳಿಕ ಒಂಟಿಯಾಗಿರುವುದು ಹಾಗೂ ಆಸಕ್ತಿ ಕಳೆದುಕೊಂಡಿರುವುದನ್ನು ಸಂಸ್ಥಾಪಕರು ಗಮನಿಸಿದ್ದರು. ತಮ್ಮ ಪೋಷಕರು ಕಳೆದುಕೊಂಡಿದ್ದ ಜೀವನೋತ್ಸಾಹವನ್ನು ಮತ್ತೆ ಚಿಗುರುವಂತೆ ಮಾಡುವುದಕ್ಕಾಗಿ ಇಬ್ಬರೂ ಮಹಿಳೆಯರು ಒಂದಷ್ಟು ಚಟುವಟಿಕೆಗಳಿರುವ ಕ್ಷೇತ್ರಗಳನ್ನು ಹುಡುಕಿದ್ದರು. ಆದರೆ ಅದು ಸಹಾಯ ಮಾಡಲಿಲ್ಲ.  ಬೆಂಗಳೂರು, ಮುಂಬೈ, ಹೈದರಾಬಾದ್, ಪುಣೆ ಮತ್ತು ದೆಹಲಿ ಸೇರಿದಂತೆ 15 ಕ್ಕೂ ಹೆಚ್ಚು ನಗರಗಳಲ್ಲಿ ಹಿರಿಯರಿಗಾಗಿ ಸಾಮಾಜಿಕ ಮಾಧ್ಯಮದ ಒಂದು ರೂಪವಾಗಿ ಕಾರ್ಯನಿರ್ವಹಿಸುವ ವೇದಿಕೆಯನ್ನು ನಿರ್ಮಿಸಲು ರೇಶ್ಮಿ ಮತ್ತು ನಿಧಿ ನಿರ್ಧರಿಸಿದರು.

"ಪ್ರತ್ಯೇಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಅದು ವಯಸ್ಸಾದವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸಮಾನ ಮನಸ್ಕ ಗೆಳೆಯರ ವಿಶೇಷ ಸಮುದಾಯದ ಭಾಗವಾಗಿರುವುದರಿಂದ, ಅವರು ಏಕಾಂಗಿತನದಿಂದ ಹೊಬರಲು ಸಹಾಯವಾಗಬಹುದು ಮತ್ತು ಪರಸ್ಪರ ಬೆಂಬಲ ಇರುವ ಪರಿಸರದಲ್ಲಿ ಜೀವಮಾನದ ಕಲಿಕೆಯನ್ನು ಮುಂದುವರಿಯಬಹುದು. ಮತ್ತೊಂದೆಡೆ, ಯುವಪೀಳಿಗೆಯವರು ಇವರನ್ನು ಹೆಚ್ಚು ಅರ್ಥ ಮಾಡಿಕೊಳ್ಳುವುದರಿಂದ ಹಿರಿಯರಲ್ಲಿನ ಉತ್ಸಾಹದ ಮಟ್ಟ ಹೆಚ್ಚಿ ತಮ್ಮ ಪರಿಧಿಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ಇರಲಿದೆ ಎನ್ನುತ್ತಾರೆ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ನಿಧಿ. 

ನಿವೃತ್ತಿಯ ವಯಸ್ಸನ್ನು ಪ್ರವೇಶಿಸಿದ ವ್ಯಕ್ತಿಗಳು ಬೇರೆ ನಗರಗಳ ಮೂಲದವರ ಸ್ನೇಹವನ್ನು ಮಾಡಬಹುದು, ಇತರರೊಂದಿಗೆ ತಮ್ಮ ಕೌಶಲ್ಯಗಳನ್ನು ಹಂಚಿಕೊಳ್ಳಬಹುದು, ಹೊಸ ಹವ್ಯಾಸಗಳನ್ನು ಅನ್ವೇಷಿಸಬಹುದು ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳುವ ತಂಡಗಳನ್ನು ನಿರ್ಮಿಸಬಹುದು. ಸಿಲ್ವರ್ ಟಾಕೀಸ್ ವೇದಿಕೆ ಕಲೆ ಮತ್ತು ಕರಕುಶಲ, ರಂಗಭೂಮಿ, ಸಂಗೀತ, ನೃತ್ಯ, ಫಿಟ್ನೆಸ್, ಪ್ರವಾಸ, ಸಾಹಿತ್ಯ, ಕವನ, ಆಧ್ಯಾತ್ಮಿಕತೆ ಮತ್ತು ಕ್ಷೇಮದಂತಹ ವಿವಿಧ ಚಟುವಟಿಕೆಗಳನ್ನು ನೀಡುತ್ತದೆ.

2050ರ ವೇಳೆಗೆ 60 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 149 ಮಿಲಿಯನ್‌ನಿಂದ 347 ಮಿಲಿಯನ್‌ಗೆ ಹೆಚ್ಚಾಗುತ್ತದೆ ಎನ್ನುತ್ತಿವೆ ಅಂಕಿ-ಅಂಶಗಳು. ಈ ರೀತಿಯ ಪ್ಲಾಟ್‌ಫಾರ್ಮ್‌ಗಳು ವಯಸ್ಸಾದ ಸುತ್ತಲಿನ ನಿಷೇಧವನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com