ಮುಂಗಾರು ಕೊರತೆ: ಮುಂದಿನ ಬೇಸಿಗೆಗಾಗಿ ಈಗಿನಿಂದಲೇ ನೀರು ಉಳಿಸಲು ಪ್ರಾರಂಭಿಸಿ; ತಜ್ಞರ ಸಲಹೆ
ಈಗಿನಿಂದಲೇ ನಗರ ಪ್ರದೇಶಗಳಿಗೆ ಮತ್ತು ನೀರಾವರಿಗೆ ಪಡಿತರ ರೀತಿಯಲ್ಲಿ ನೀರು ಸರಬರಾಜು ಅಂದರೆ ದೈನಂದಿನ ನೀರಿನ ಬಳಕೆಯನ್ನು ಸೀಮಿತಗೊಳಿಸುವ (rationing water supply) ಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
Published: 23rd September 2023 09:46 AM | Last Updated: 23rd September 2023 01:59 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಈ ವರ್ಷ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದ ಅಣೆಕಟ್ಟುಗಳಲ್ಲಿನ ನೀರಿನ ಮಟ್ಟದ ಮೇಲೆ ಪರಿಣಾಮ ಬೀರುತ್ತಿದ್ದು, ಈಗಿನಿಂದಲೇ ನಗರ ಪ್ರದೇಶಗಳಿಗೆ ಮತ್ತು ನೀರಾವರಿಗೆ ಪಡಿತರ ರೀತಿಯಲ್ಲಿ ನೀರು ಸರಬರಾಜು ಅಂದರೆ ದೈನಂದಿನ ನೀರಿನ ಬಳಕೆಯನ್ನು ಸೀಮಿತಗೊಳಿಸುವ (rationing water supply) ಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಜಲಸಂಪನ್ಮೂಲ ಇಲಾಖೆ (WRD) ಮತ್ತು ಅಂತರ್ಜಲ ಮಂಡಳಿಯ ಅಧಿಕಾರಿಗಳ ಪ್ರಕಾರ, ಮೇಲ್ಮೈಯಲ್ಲಿನ ನೀರನ್ನು ಮಾತ್ರ ಅತ್ಯುತ್ತಮವಾಗಿ ಹಿಡಿದಿಡಲಾಗುತ್ತದೆ. ಅಣೆಕಟ್ಟು ಸುತ್ತ ಪ್ರದೇಶಗಳಲ್ಲಿ ಅಂತರ್ಜಲವನ್ನು ಹಿಡಿದಿಟ್ಟುಕೊಳ್ಳಲು ವ್ಯವಸ್ಥೆ ಮಾಡಿ ಅವುಗಳನ್ನು ನೀರಿನ ಕೋರತೆಯ ಸಮಯದಲ್ಲಿ ಬಳಸಿಕೊಳ್ಳುವಂತೆ ಮಾಡಬೇಕು. ನಗರ ಪ್ರದೇಶಗಳಲ್ಲಿ ಮತ್ತು ನೀರಾವರಿಗೆ ದಿನನಿತ್ಯ ಸಹಜವಾಗಿ ನೀರು ಪೂರೈಕೆ ಮಾಡುವುದಕ್ಕಿಂತ ಕಡಿಮೆ ಮಿತಿಯಲ್ಲಿ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಬೇಕು.
ಸರ್ಕಾರವು ನೀರಾವರಿ, ಕೈಗಾರಿಕೆಗಳಿಗೆ ಮತ್ತು ನಗರ ಪ್ರದೇಶಗಳಿಗೆ ತಕ್ಷಣವೇ ಶೇಕಡಾ 20 ರಿಂದ 30 ರಷ್ಟು ನೀರು ಸರಬರಾಜನ್ನು ಕಡಿಮೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈಶಾನ್ಯ ಮುಂಗಾರು ವಿಫಲವಾದರೆ ಈ ನೀರನ್ನು ಬೇಸಿಗೆಯಲ್ಲಿ ಸಂಗ್ರಹಿಸಿ ಬಳಸಬೇಕು. ಮಳೆನೀರು ಕೊಯ್ಲು ತಜ್ಞ ಎಆರ್ ಶಿವಕುಮಾರ್, ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಭಾರತೀಯ ಮಾನದಂಡಗಳ ಬ್ಯೂರೋ (BIS) ಮಾರ್ಗಸೂಚಿಗಳ ಪ್ರಕಾರ, ನಾಲ್ಕು ಜನರ ಕುಟುಂಬಕ್ಕೆ ಮಾಸಿಕವಾಗಿ 12,000-15,000 ಲೀಟರ್ ನೀರು ಬೇಕಾಗುತ್ತದೆ, ಆದರೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಒಂದು ಕುಟುಂಬವು ತಿಂಗಳಿಗೆ 20,000-40,000 ಲೀಟರ್ ನೀರನ್ನು ಬಳಸುತ್ತದೆ. ನಗರ ನೀರು ಬಳಕೆಯ ಕುರಿತು ಯೋಜನೆಯ ಕೊರತೆ ಇದೆ ಎಂದರು.
ಇದನ್ನೂ ಓದಿ: ತಮಿಳುನಾಡಿಗೆ ಮತ್ತಷ್ಟು ನೀರು ಬಿಡುಗಡೆ ಮಾಡಿದರೆ ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗುತ್ತದೆ: ಸಿಎನ್‌ಎನ್‌ಎಲ್ ಎಚ್ಚರಿಕೆ
ಜಲ ತಜ್ಞ ವಿಶ್ವನಾಥ ಶ್ರೀಕಂಠಯ್ಯ, ಅಣೆಕಟ್ಟು ಸುತ್ತಲ ಪ್ರದೇಶಗಳಲ್ಲಿ ಕೃಷಿ ಮಾಡಲು ಅಂತರ್ಜಲದತ್ತ ಗಮನಹರಿಸಬೇಕು. ಸಮಸ್ಯೆ ಹೆಚ್ಚು ರಾಜಕೀಯವಾಗುತ್ತಿದೆ ಎಂದು ಅವರು ಹೇಳಿದರು. ಕಾವೇರಿಯಿಂದ ಕರ್ನಾಟಕದ ನೀರಿನ ಪಾಲು ಕೇವಲ ಶೇಕಡಾ 25 ರಷ್ಟಿದೆ, ಆದರೆ ಇತರ ಮೂಲಗಳಿಂದ ಅದರ ನೀರಿನ ಬಳಕೆ ಹೆಚ್ಚಾಗಿದೆ.
ಕಳೆದ 32 ವರ್ಷಗಳಲ್ಲಿ, ಕರ್ನಾಟಕವು ತಮಿಳುನಾಡಿನೊಂದಿಗೆ ಆರು ಬಾರಿ ಬರ ಮತ್ತು ನೀರಿನ ಹೋರಾಟವನ್ನು ಎದುರಿಸಿತು. ಸರ್ಕಾರಗಳ ಕಡೆಯಿಂದ ಯೋಜನೆ ಮತ್ತು ಸಿದ್ಧತೆಯ ಕೊರತೆ ಇತ್ತು, ಅದು ಈಗ ಪ್ರತಿಫಲಿಸಿದೆ ಎಂದು ಡಬ್ಲ್ಯುಆರ್ ಡಿ ಅಧಿಕಾರಿಯೊಬ್ಬರು ಹೇಳುತ್ತಾರೆ.
ಜಲಾನಯನ ಪ್ರದೇಶದ ಎಲ್ಲಾ ನಾಲ್ಕು ಜಲಾಶಯಗಳಲ್ಲಿ 51 ಟಿಎಂಸಿ ಅಡಿ ನೀರು ಇದೆ. ಬೆಳೆದ ಬೆಳೆಗಳಿಗೆ 70 ಟಿಎಂಸಿ, ಕುಡಿಯಲು 33 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ಅಡಿ ನೀರು ಬೇಕು. ರೈತರು ಬಿತ್ತನೆ ಕೈಗೊಂಡಿದ್ದರಿಂದ ನೀರಾವರಿಗೆ ಹೊಡೆತ ಬೀಳಲಿದೆ. ಎರಡೂ ರಾಜ್ಯಗಳ ರೈತರಿಗೆ ಈಗಲೇ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ಮುಂಗಾರು ವೈಫಲ್ಯ-ಬರ: ನೆರೆಯ ರಾಜ್ಯಗಳಿಗೆ ಮೇವು ಮಾರಾಟ ಮತ್ತು ಸಾಗಣೆ ನಿಷೇಧಿಸಿದ ಸರ್ಕಾರ
ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ.50 ರಷ್ಟು ಮಳೆ ಕೊರತೆಯಾಗಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಐಐಎಸ್‌ಸಿಯ ತಜ್ಞರು ಹೇಳಿದ್ದಾರೆ. ನೀರಾವರಿಗಾಗಿ ಉತ್ತಮ ನೀರಿನ ನಿರ್ವಹಣೆಯನ್ನು ರೈತರು ಅರ್ಥಮಾಡಿಕೊಳ್ಳಬೇಕು. ಕೃಷಿ ವಿಶ್ವವಿದ್ಯಾಲಯಗಳ ಪಾತ್ರ ಇಲ್ಲಿ ಬಳಸಿಕೊಳ್ಳಬಹುದು ಎಂದು ಅಭಿಪ್ರಾಯಪಡುತ್ತಾರೆ.
ಪ್ರತಿಯೊಬ್ಬರಿಗೆ ದೈನಂದಿನ ನೀರಿನ ಬಳಕೆ
- 3-4 ಲೀಟರ್ ಕುಡಿಯಲು
- 8 ಲೀಟರ್ ಅಡುಗೆಗಾಗಿ
- 20 ಲೀಟರ್ ಸ್ನಾನ, ಬಟ್ಟೆ, ಪಾತ್ರೆ ತೊಳೆಯಲು
- 25-30 ಲೀಟರ್ ಫ್ಲಶ್, ಶೌಚಾಲಯ
- 8-10 ಲೀಟರ್ ಇತರ ಉಪಯುಕ್ತತೆಗಾಗಿ