ನಮ್ಮ ಮೆಟ್ರೋ ಹಾಗೂ ಪ್ರಯಾಣಿಕರು
ನಮ್ಮ ಮೆಟ್ರೋ ಹಾಗೂ ಪ್ರಯಾಣಿಕರು

ನಮ್ಮ ಮೆಟ್ರೋ ಬಗ್ಗೆ ನೀವೆಷ್ಟು ಸಂತೃಪ್ತ? ಏಪ್ರಿಲ್ 8 ರಿಂದ ಪ್ರಯಾಣಿಕರ ತೃಪ್ತಿ ಸಮೀಕ್ಷೆಯಲ್ಲಿ ನೀವೂ ಭಾಗವಹಿಸಿ

ನಮ್ಮ ಮೆಟ್ರೋ ಪ್ರಯಾಣಿಕರ ಅಭಿಪ್ರಾಯ ತಿಳಿದುಕೊಳ್ಳಲು ತೃಪ್ತಿ ಸಮೀಕ್ಷೆಗೆ ಮುಂದಾಗಿದ್ದು, 'ಕಾಮೆಟ್ ನೊವಾ'(COMET NOVA) ಸಂಸ್ಥೆಯು ಏಪ್ರಿಲ್ 8 ರಿಂದ ಮೇ 6 ರವರೆಗೆ ಸಮೀಕ್ಷೆ ನಡೆಸಲಿದೆ.
Published on

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಅಭಿಪ್ರಾಯ ತಿಳಿದುಕೊಳ್ಳಲು ತೃಪ್ತಿ ಸಮೀಕ್ಷೆಗೆ ಮುಂದಾಗಿದ್ದು, 'ಕಾಮೆಟ್ ನೊವಾ'(COMET NOVA) ಸಂಸ್ಥೆಯು ಏಪ್ರಿಲ್ 8 ರಿಂದ ಮೇ 6 ರವರೆಗೆ ಸಮೀಕ್ಷೆ ನಡೆಸಲಿದೆ.

ಈ ಸಮೀಕ್ಷೆಯು ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸಲು ಮತ್ತು ನಮ್ಮ ಮೆಟ್ರೋ ಕಾರ್ಯಕ್ಷಮತೆ ಸೂಚಕಗಳನ್ನು ರೂಪಿಸಲು ಲಂಡನ್ ನ ಇಂಪೀರಿಯಲ್ ಕಾಲೇಜಿಗೆ ಅಧ್ಯಯನ ನಡೆಸಲಿದೆ.

ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಈ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರಯಾಣಿಕರು ನಿಗಮದ ವೆಬ್ ಸೈಟ್(http://bmrc.co.in.)ನ ಪ್ರತಿಕ್ರಿಯೆ ಪುಟಗಳಲ್ಲಿ ಭಾಗವಹಿಸಬಹುದು.

ನಮ್ಮ ಮೆಟ್ರೋ ಹಾಗೂ ಪ್ರಯಾಣಿಕರು
ನಮ್ಮ ಮೆಟ್ರೋ ಅಧಿಕಾರಿಯಿಂದ ಮಹಿಳಾ ಸೆಕ್ಯೂರಿಟಿಗಳಿಗೆ ಲೈಂಗಿಕ ಕಿರುಕುಳ ಆರೋಪ; ಎಫ್ಐಆರ್ ದಾಖಲು

ನಮ್ಮ ಮೆಟ್ರೋ ಅಧಿಕೃತ ಮೊಬೈಲ್ ಅಪ್ಲಿಕೇಶನ್ ನಲ್ಲಿ, ರೈಲು ಮತ್ತು ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಗಳನ್ನು ಪ್ರದರ್ಶಿಲಾಗಿದೆ. ಪ್ರಯಾಣಿಕರು ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಕ್ರಿಯೆ ನೀಡಬೇಕು ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು travelhelp@bmrc.co.in or call 1800-425-12345ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com