MPLADS: ಬೆಂಗಳೂರು ಸಂಸದರಿಂದ 5 ವರ್ಷಗಳಲ್ಲಿ 55.88 ಕೋಟಿ ರೂ. ವೆಚ್ಚ!

ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ ( B.PAC) ಶನಿವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಲೋಕಸಭೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸುವ ಮೂವರು ಸಂಸದರು 5 ವರ್ಷಗಳ ಅವಧಿಯಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ನಿಂದ 55.88 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (B.PAC) ಶನಿವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಲೋಕಸಭೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸುವ ಮೂವರು ಸಂಸದರು 5 ವರ್ಷಗಳ ಅವಧಿಯಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ನಿಂದ 55.88 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದಾರೆ. ಇದರಲ್ಲಿ ಶೇ.42.67 (ರೂ. 23.47 ಕೋಟಿ) ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತು ಶೇ.29.15 (ರೂ. 16.03 ಕೋಟಿ) ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಶಿಕ್ಷಣಕ್ಕಾಗಿ 13.22 (ರೂ. 7.27 ಕೋಟಿ) ಖರ್ಚು ಮಾಡಿದ್ದಾರೆ.

BPAC ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ದಕ್ಷಿಣ ಸಂಸದೀಯ ಕ್ಷೇತ್ರಗಳನ್ನು ಪ್ರತಿನಿಧಿಸುವ ಸಂಸದರ MPLADS ಚಟುವಟಿಕೆಗಳ ವೆಚ್ಚದ ಮಾದರಿಯನ್ನು ವಿಶ್ಲೇಷಿಸಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು 19.36 ಕೋಟಿ ರೂ.ಗೆ ಶಿಫಾರಸು ಮಾಡಿದರೆ, ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುವ ಡಿವಿ ಸದಾನಂದ ಗೌಡ ಅವರು 18.69 ಕೋಟಿ ರೂ.ಗೆ ಶಿಫಾರಸು ಮಾಡಿದ್ದಾರೆ. ಅದೇ ರೀತಿ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ 17.79 ಕೋಟಿ ರೂ. ವೆಚ್ಚ ಮಾಡಿದ್ದಾರೆ.

ಸ್ಥಳೀಯವಾಗಿ ಜನರ ಅಗತ್ಯತೆಗಳ ಆಧಾರದ ಮೇಲೆ ಬಾಳಿಕೆ ಬರುವ ಸಮುದಾಯ ಆಸ್ತಿಗಳ ಸೃಷ್ಟಿಗೆ ಒತ್ತು ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಶಿಫಾರಸು ಮಾಡಲು ಪ್ರತಿ ಸಂಸದರಿಗೆ ಪ್ರತಿ ವರ್ಷ ಎಂಪಿಲ್ಯಾಡ್ಸ್‌ಗೆ 5 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗುತ್ತಿರುವಂತೆಯೇ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಏಪ್ರಿಲ್ 6, 2020 ರಿಂದ ನವೆಂಬರ್ 9, 2021ರವರೆಗೂ ಸ್ಥಗಿತಗೊಳಿಸಲಾಗಿತ್ತು. 2020-21ರ ಆರ್ಥಿಕ ವರ್ಷದಲ್ಲಿ ಯಾವುದೇ ಹಣವನ್ನು ಯೋಜನೆಗೆ ಹಂಚಿಕೆ ಮಾಡಲಾಗಿಲ್ಲ. 2021-22ರ ಆರ್ಥಿಕ ವರ್ಷದಲ್ಲಿ ನವೆಂಬರ್ 10, 2021 ರಿಂದ ಮಾರ್ಚ್ 31, 2022ರವರೆಗೂ ಈ ಯೋಜನೆಯಡಿ ಪ್ರತಿ ಸಂಸದರಿಗೆ ರೂ. 2 ಕೋಟಿ ಹಂಚಿಕೆ ಮಾಡಲಾಗಿತ್ತು.

ಸಾಂದರ್ಭಿಕ ಚಿತ್ರ
ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೂ ಕೇಂದ್ರದಲ್ಲಿರುವ ಸಚಿವರು, ಸಂಸದರು ಮೌನವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ ಅಸಮಾಧಾನ

17 ನೇ ಲೋಕಸಭೆಯ ಅವಧಿಯಲ್ಲಿ, ಸದನವು 273 ದಿನಗಳ ಕಾರ್ಯ ಕಲಾಪ ನಡೆದಿದ್ದು, ಸಂಸದರ ರಾಷ್ಟ್ರೀಯ ಸರಾಸರಿ ಹಾಜರಾತಿ ಶೇ.79 ಮತ್ತು ಕರ್ನಾಟಕದ ಸಂಸದರ ರಾಜ್ಯದ ಸರಾಸರಿ ಹಾಜರಾತಿ ಶೇ.71 ಆಗಿತ್ತು. ಪಿಸಿ ಮೋಹನ್, 224 ದಿನಗಳು (ಶೇ. 82)ತೇಜಸ್ವಿ ಸೂರ್ಯ 212 ದಿನಗಳು (ಶೇ.78) ಮತ್ತು ಡಿವಿ ಸದಾನಂದ ಗೌಡ ಅವರು 100 ದಿನಗಳು (ಶೇ.63) ರಷ್ಟು ಹಾಜರಾಗಿದ್ದರು. ಡಿವಿ ಸದಾನಂದ ಗೌಡ ಅವರು ಮೇ 30, 2019 ರಿಂದ ಜುಲೈ 07, 2021 ರವರೆಗೆ ಕೇಂದ್ರ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಚರ್ಚೆಗಳಲ್ಲಿ ಸರ್ಕಾರವನ್ನು ಪ್ರತಿನಿಧಿಸುವ ಸಚಿವರು ಹಾಜರಾತಿ ನೋಂದಣಿಗೆ ಸಹಿ ಹಾಕುವುದಿಲ್ಲ ಎಂದು ವರದಿ ಹೇಳಿದೆ.

BPAC ವರದಿಯು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಹೇಗೆ ಹಂಚಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಹೆಚ್ಚಿನ ಪಾರದರ್ಶಕತೆಯನ್ನು ತರುತ್ತದೆ ಮತ್ತು ಇದರೊಂದಿಗೆ ಮತದಾರರು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಬಹುದು ಎಂದು BPAC ಸದಸ್ಯ ಎನ್. ಹರೀಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com