2nd PUC results: ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು?, ಟಾಪರ್ ವಿದ್ಯಾರ್ಥಿಗಳು ಹೇಳುತ್ತಾರೆ... ಕೇಳಿ...

ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದ ತನ್ನ ಕಲಿಕೆಗೆ ಅನುಕೂಲವಾಯಿತು ಎಂದ ವಿಜಯಪುರದ ವೇದಾಂತ್ ನಾವಿ, ಸಿಎಂ-ಡಿಸಿಎಂ ಶ್ಲಾಘನೆ
ಪಿಯುಸಿ ಟಾಪರ್ಸ್: ಎ ವಿದ್ಯಾಲಕ್ಷ್ಮಿ (ವಿಜ್ಞಾನ - 598), ಜ್ಞಾನವಿ ಎಂ (ವಾಣಿಜ್ಯ - 597), ಮತ್ತು ಮೇಧಾ ಡಿ (ಕಲೆ - 596)
ಪಿಯುಸಿ ಟಾಪರ್ಸ್: ಎ ವಿದ್ಯಾಲಕ್ಷ್ಮಿ (ವಿಜ್ಞಾನ - 598), ಜ್ಞಾನವಿ ಎಂ (ವಾಣಿಜ್ಯ - 597), ಮತ್ತು ಮೇಧಾ ಡಿ (ಕಲೆ - 596)

ಬೆಂಗಳೂರು: ಮುಂದೆ ಎಂಬಿಬಿಎಸ್ ಓದಬೇಕು, ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು, ಮನೋವಿಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕು ಇತ್ಯಾದಿಗಳು ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಬಂದ ವಿದ್ಯಾರ್ಥಿಗಳ ಕನಸಾಗಿದೆ. ಈ ಬಾರಿ ಕೂಡ ಹೆಣ್ಣುಮಕ್ಕಳೇ ಅಂಕಗಳಿಕೆಯಲ್ಲಿ ಗಂಡುಮಕ್ಕಳಿಗಿಂತ ಮುಂದಿದ್ದಾರೆ.

ದಿನಕ್ಕೆ ಕೇವಲ 4-5 ಗಂಟೆಗಳ ಕಾಲ ಅಧ್ಯಯನ ಮಾಡಿದರೂ, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 598 ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿರುವ ಎ ವಿದ್ಯಾಲಕ್ಷ್ಮಿ, ಪರೀಕ್ಷೆಗೆ ಎಷ್ಟು ಹೊತ್ತು ಓದುವುದು ಎಂಬುದು ಮುಖ್ಯವಲ್ಲ, ಬದಲಿಗೆ ಓದಿನಲ್ಲಿ ವರ್ಷಪೂರ್ತಿ ಸ್ಥಿರತೆ ಕಾಯ್ದುಕೊಳ್ಳುವುದು ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ.

ತಮಿಳುನಾಡಿನ ತಿರುಚ್ಚಿ ಮೂಲದ ವಿದ್ಯಾಲಕ್ಷ್ಮಿ ಅವರು ಹುಬ್ಬಳ್ಳಿಯ ವಿದ್ಯಾನಿಕೇತನ ಎಸ್‌ಸಿ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದರು. "ಕಾಲೇಜಿನಲ್ಲಿ ಪಾಠದ ಅವಧಿಯಲ್ಲಿ ನಾನು ಹೆಚ್ಚಿನ ಪರಿಕಲ್ಪನೆಗಳನ್ನು ಸುಲಭವಾಗಿ ಗ್ರಹಿಸುತ್ತಿದ್ದೆ. ಹಾಗಾಗಿ ಮನೆಗೆ ಬಂದು ಹೆಚ್ಚು ಅಧ್ಯಯನ ಮಾಡುತ್ತಿರಲಿಲ್ಲ" ಎನ್ನುತ್ತಾರೆ. "ಕುಟುಂಬದಲ್ಲಿ ವೈದ್ಯರಿಲ್ಲದ ಕಾರಣ, ನಾನು ಎಂಬಿಬಿಎಸ್ ಓದಿ ವೈದ್ಯೆಯಾಗಲು ಬಯಸುತ್ತೇನೆ" ಎಂದು ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್ ಆಟಗಾರ್ತಿ ಕೂಡ ಆಗಿರುವ ವಿದ್ಯಾಲಕ್ಷ್ಮಿ ಹೇಳುತ್ತಾರೆ.

597 ಅಂಕಗಳೊಂದಿಗೆ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಉನ್ನತ ಸ್ಥಾನ ಪಡೆದ ತುಮಕೂರಿನ ವಿದ್ಯಾನಿಧಿ ಸ್ವತಂತ್ರ ಪಿಯು ಕಾಲೇಜಿನ ಜ್ಞಾನವಿ ಎಂ, “ನಾನು ಎಂದಿಗೂ ನಿಗದಿತ ಅಧ್ಯಯನ ವೇಳಾಪಟ್ಟಿಯೆಂದು ಅನುಸರಿಸಿಕೊಂಡು ಹೋಗಲೇ ಇಲ್ಲ, ಬದಲಿಗೆ, ನಾನು ಪಾಠದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವತ್ತ ಗಮನಹರಿಸಿದ್ದೆ. ಪರೀಕ್ಷೆ ದಿನ ಹತ್ತಿರ ಬರುವಾಗ ಎಲ್ಲವನ್ನೂ ಒಟ್ಟಿಗೆ ಓದಿಕೊಳ್ಳುವುದಕ್ಕಿಂತ ವರ್ಷದ ಆರಂಭದಿಂದಲೇ ನಿಗದಿತವಾಗಿ ಅಧ್ಯಯನ ಮಾಡುತ್ತಾ ಬಂದರೆ ಸುಲಭವಾಗುತ್ತದೆ ಎನ್ನುತ್ತಾರೆ.

ಪಿಯುಸಿ ಟಾಪರ್ಸ್: ಎ ವಿದ್ಯಾಲಕ್ಷ್ಮಿ (ವಿಜ್ಞಾನ - 598), ಜ್ಞಾನವಿ ಎಂ (ವಾಣಿಜ್ಯ - 597), ಮತ್ತು ಮೇಧಾ ಡಿ (ಕಲೆ - 596)
ದ್ವಿತೀಯ ಪಿಯುಸಿ ಫಲಿತಾಂಶ: ಒಟ್ಟಿಗೆ ಪರೀಕ್ಷೆ ಬರೆದಿದ್ದ ತಾಯಿ-ಮಗಳು ಪಾಸ್!

ನಿನ್ನೆ ಪ್ರಕಟವಾದ ಪಿಯು ಫಲಿತಾಂಶದಲ್ಲಿ ವಿದ್ಯಾನಿಧಿ ಸ್ವತಂತ್ರ ಪಿಯು ಕಾಲೇಜಿನ ಜ್ಞಾನವಿ ಎಂ ವಾಣಿಜ್ಯ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅವರು 600 ರಲ್ಲಿ 597 ಅಂಕಗಳನ್ನು ಗಳಿಸಿದ್ದಾರೆ. "ಸೆಲ್ ಫೋನ್ ಬಳಕೆಯಿಂದ ದೂರವಿರುವುದು ಮತ್ತು ನಾನು ಅಧ್ಯಯನಕ್ಕೆ ಕುಳಿತಾಗ ವಿಷಯವನ್ನು ಅರ್ಥಮಾಡಿಕೊಳ್ಳುವವರೆಗೂ ಬಿಡದೆ ಇದ್ದುದು ಈ ಸಾಧನೆಯನ್ನು ಸಾಧಿಸಲು ನನಗೆ ಸಹಾಯ ಮಾಡಿದೆ" ಎಂದು ಅವರು ಹೇಳಿದರು. ಕಲಿಕೆಗೆ ಸುಲಭವಾಗಲು ಕಾಲೇಜಿನ ಹಾಸ್ಟೆಲ್ ಸೇರಿಕೊಂಡೆ. ಅಂತಿಮ ಪರೀಕ್ಷೆಗಳಿಗೆ ಮೊದಲು ವಿದ್ಯಾರ್ಥಿಗಳಿಗೆ ಎಂಟು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸುವುದರೊಂದಿಗೆ ಸಾಕಷ್ಟು ತರಬೇತಿಯನ್ನು ಕಾಲೇಜಿನಲ್ಲಿ ನೀಡಿದರು ಎನ್ನುತ್ತಾರೆ.

ಈಕೆಗೆ ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಆಸೆ. ಹೀಗಾಗಿ ಬಿ.ಕಾಂ ಪದವಿ ಮಾಡಲು ಇಚ್ಛೆಯಿದೆ ಎಂದರು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಯಡಿಯೂರು ಬಳಿಯ ಬೀಚನಹಳ್ಳಿಯಲ್ಲಿ ಚಿಕ್ಕ ಹೋಟೆಲ್ ನಡೆಸುತ್ತಿರುವ ಆಕೆಯ ಪೋಷಕರು ಡಿ ಎಲ್ ಮಂಜುನಾಥ್ ಮತ್ತು ಡಿ ಮಂಜುಳಾ. ಕಾಲೇಜಿನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಅವರು ತಮ್ಮ ಕಾಲೇಜಿನ ವಿದ್ಯಾರ್ಥಿನಿಯ ಸಾಧನೆ ಕಂಡು ಬಹಳ ಖುಷಿಯಾಗಿದ್ದಾರೆ. ರಾಜ್ಯದ ಮೊದಲ ಹತ್ತು ಸಾಧಕರ ಪಟ್ಟಿಯಲ್ಲಿ ಇನ್ನೂ ಎಂಟು ವಿದ್ಯಾರ್ಥಿಗಳು ಇದೇ ಕಾಲೇಜಿನವರಾಗಿದ್ದಾರೆ.

ಪಿಯುಸಿ ಟಾಪರ್ಸ್: ಎ ವಿದ್ಯಾಲಕ್ಷ್ಮಿ (ವಿಜ್ಞಾನ - 598), ಜ್ಞಾನವಿ ಎಂ (ವಾಣಿಜ್ಯ - 597), ಮತ್ತು ಮೇಧಾ ಡಿ (ಕಲೆ - 596)
2nd PUC results: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಶೇ.81.15ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಕಲಾ ವಿಭಾಗದಲ್ಲಿ 596 ಅಂಕ ಗಳಿಸಿರುವ ಜಯನಗರದ ಎನ್‌ಎಂಕೆಆರ್‌ವಿ ಪಿಯು ಕಾಲೇಜಿನ ಮೇಧಾ ಡಿ ಕೃಷಿಕರ ಮಗಳು. ಮೇಧಾ ಅವರು ಕಲಾವಿಭಾಗದಲ್ಲಿ ಕೇವಲ ಅಧ್ಯಯನವನ್ನು ಮೀರಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು, ಮನೋವಿಜ್ಞಾನವನ್ನು ಮುಂದುವರಿಸಲು ಮೇಧಾ ಅವರ ಪ್ರೇರಣೆಯು ಸಕಾರಾತ್ಮಕ ಸಾಮಾಜಿಕ ಬದಲಾವಣೆಯನ್ನು ತರುವ ಉದ್ದೇಶವಂತೆ."ನನ್ನ ಕುಟುಂಬ, ವಿಶೇಷವಾಗಿ ನನ್ನ ಅಜ್ಜ, ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ದೀರ್ಘಕಾಲದಿಂದ ಪ್ರತಿಪಾದಿಸಿಕೊಂಡು ಬಂದವರು. ಎಂದರು.

ಪರೀಕ್ಷೆಯಲ್ಲಿ ಸಾಧನೆ ಮಾಡಿದ ಬಾಲಕ, ಗ್ಯಾರಂಟಿ ಸ್ಕೀಂ ಯೋಜನೆಯ ಯಶಸ್ಸು ಎಂದ ಸಿಎಂ, ಡಿಸಿಎಂ: ವಿಜಯಪುರದ ವೇದಾಂತ್ ನಾವಿ ಅವರು ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿ ತೇರ್ಗಡೆ ಹೊಂದಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಮ್ಮ ಸರ್ಕಾರದ ಯೋಜನೆಗಳ ಬಗ್ಗೆ ಶ್ಲಾಘಿಸಿಕೊಂಡಿದ್ದಾರೆ. ವಿಜಯಪುರದ ವೇದಾಂತ್ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹಿನ್ನೆಲೆಯಿಂದ ಬಂದಿದ್ದು, ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬಕ್ಕೆ ಬಂದ ಹಣದ ಲಾಭ ಪಡೆದಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದನು. ದೇಶದ ಮಕ್ಕಳ ಕಲಿಕೆಯ ಸಾಧನೆಗೆ ಬಡತನ ಅಡ್ಡಿಯಾಗಬಾರದು ಎಂಬುದು ನಮ್ಮ ದೃಷ್ಟಿಕೋನವಾಗಿದೆ. ಇದನ್ನು ಸಾಧ್ಯವಾಗಿಸಿದ್ದು ಗೃಹಲಕ್ಷ್ಮಿ... ಇದು ನಯವಂಚಕರಿಗೆ ಕಪಾಳಮೋಕ್ಷ ಮಾಡಿದಂತಿದೆ ಎಂದು ಬಿಜೆಪಿಗೆ ತಿವಿದು ಸಿಎಂ ಮತ್ತು ಡಿಸಿಎಂ ಪೋಸ್ಟ್ ಮಾಡಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಜಯಪುರದ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿ ವೇದಾಂತ್ ನಾವಿ ಅವರಿಗೆ ಅಭಿನಂದನೆಗಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಈ ವಿದ್ಯಾರ್ಥಿಯು ತನ್ನ ತಾಯಿಗೆ ಸರ್ಕಾರ ನೀಡಿದ ಗೃಹಲಕ್ಷ್ಮಿ ಯೋಜನೆಯಡಿ ತನ್ನ ಕುಟುಂಬಕ್ಕೆ ಪಡೆದ 2000 ರೂಪಾಯಿಗಳಿಂದ ತನ್ನ ವಿದ್ಯಾಭ್ಯಾಸಕ್ಕೆ ಅನುಕೂಲವಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com