
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಲಿರುವ ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೆ ಅನುಕೂಲವಾಗಲು ನಮ್ಮ ಮೆಟ್ರೊ ಸಂಚಾರ ಸೇವೆಯ ಅವಧಿಯನ್ನು ಏಪ್ರಿಲ್ 15, ಮೇ 4,12 ಮತ್ತು ಮೇ 18ರಂದು ಎಲ್ಲಾ ನಾಲ್ಕು ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30ರವರೆಗೆ ವಿಸ್ತರಿಸಲಾಗಿದೆ.
ಈ ಪಂದ್ಯ ದಿನಗಳಲ್ಲಿ ಎಲ್ಲಾ ಮೆಟ್ರೊ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳು 50 ರೂಪಾಯಿಗೆ ಮಾರಾಟಕ್ಕೆ ಸಿಗುತ್ತವೆ. ಕಬ್ಬನ್ ಪಾರ್ಕ್ ಮತ್ತು ಎಂ ಜಿ ರಸ್ತೆ ಮೆಟ್ರೊ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೊ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನಗಳಲ್ಲಿ ರಾತ್ರಿ 8ರಿಂದ ದಿನದ ಸೇವೆ ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಆದರೆ ಈ ನಿಲ್ದಾಣಗಳಲ್ಲಿ ಟೋಕನ್ ವ್ಯವಸ್ಥೆಯಿರುವುದಿಲ್ಲ.
ಕ್ಯುಆರ್ ಕೋಡ್ ಟಿಕೆಟ್ ಗಳು, ಸ್ಮಾರ್ಟ್ ಕಾರ್ಡುಗಳು, ಎನ್ ಸಿಎಂಸಿ ಕಾರ್ಡುಗಳನ್ನು ಬಳಸಬಹುದು. ವಾಟ್ಸಾಪ್, ನಮ್ಮ ಮೆಟ್ರೊ ಆಪ್/ ಪೆಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ಕ್ಯುಆರ್ ಟಿಕೆಟ್ ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.
Advertisement