ಲೋಕಸಭಾ ಚುನಾವಣೆ: ಬೀದರ್ ಇತಿಹಾಸದಲ್ಲೇ ಮೊದಲು; ಅಂಧ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ!

ಬೀದರ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದೃಷ್ಟಿ ವಿಕಲಚೇತನ ಅಭ್ಯರ್ಥಿಯೊಬ್ಬರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆ
ನಾಮಪತ್ರ ಸಲ್ಲಿಕೆ
Updated on

ಬೀದರ್: ಬೀದರ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದೃಷ್ಟಿ ವಿಕಲಚೇತನ ಅಭ್ಯರ್ಥಿಯೊಬ್ಬರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. 2ನೇ ಹಂತದ ಲೋಕಸಭಾ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಮೊದಲ ದಿನವಾದ ಶುಕ್ರವಾರ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ.

ಬೀದರ್ ತಾಲೂಕಿನ ಕಡವಾಡ ಗ್ರಾಮದ ದೀಲೀಪ್ ನಾಗಪ್ಪ ಬೂಸಾ ಬ್ರೈಲ್ ಲಿಪಿ ಬಳಸಿ ಅಭ್ಯರ್ಥಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಚುನಾವಣಾಧಿಕಾರಿಯೂ ಆಗಿರುವ ಬೀದರ್ ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ಅವರ ಮುಂದೆ ಅವರು ತಮ್ಮ ದಾಖಲೆಗಳನ್ನು ಸಲ್ಲಿಸಿದರು.

12ನೇ ತರಗತಿಯವರೆಗೆ ಓದಿರುವ ದೀಲಿಪ್, ತಾನು ಚಿಕ್ಕ ವಯಸ್ಸಿನಲ್ಲೇ ರಾಜಕೀಯದತ್ತ ಆಕರ್ಷಿತನಾಗಿದ್ದೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ವೃತ್ತಿಯಲ್ಲಿ ಸಂಗೀತಗಾರರಾಗಿರುವ ದೀಲಿಪ್ ಅವರು ದಶಕದ ಹಿಂದೆ ಬೀದರ್‌ನಲ್ಲಿ ದೃಷ್ಟಿದೋಷವುಳ್ಳವರಿಗಾಗಿ ಶಾಲೆಯೊಂದನ್ನು ತೆರೆದಿದ್ದರು. ಆದಾಗ್ಯೂ, ಸರ್ಕಾರ ಅಥವಾ ಎನ್‌ಜಿಒಗಳಿಂದ ಯಾವುದೇ ಬೆಂಬಲ ಅಥವಾ ಅನುದಾನವಿಲ್ಲದೆ, ಅವರು ಶಾಲೆಯನ್ನು ಮುಚ್ಚಬೇಕಾಯಿತು.

ನಾಮಪತ್ರ ಸಲ್ಲಿಕೆ
ಶಿವಮೊಗ್ಗ BJP ಬಂಡಾಯ ಅಭ್ಯರ್ಥಿಯಾಗಿ ನಾಳೆ ಈಶ್ವರಪ್ಪ ನಾಮಪತ್ರ ಸಲ್ಲಿಕೆ!

ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ ಮತ ಯಾಚಿಸುವುದಾಗಿ ದೀಲೀಪ್ ಹೇಳಿದರು. ಮತದಾರರನ್ನು ತಲುಪಲು ಸಾಮಾಜಿಕ ಜಾಲತಾಣಗಳನ್ನೂ ಬಳಸುವುದಾಗಿ ತಿಳಿಸಿದ್ದಾರೆ. ಲೋಕಸಭೆ ಸೇರಿದಂತೆ ಚುನಾಯಿತ ಸಂಸ್ಥೆಗಳಲ್ಲಿ ದೈಹಿಕ ವಿಕಲಚೇತನರಿಗೆ ಕೆಲವು ಸ್ಥಾನಗಳನ್ನು ಮೀಸಲಿಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com