ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭದ್ರತೆ ಉಲ್ಲಂಘಿಸಿದ ಯೂಟ್ಯೂಬರ್ ಬಂಧನ

ಬೆಂಗಳೂರಿನಿಂದ ಚೆನ್ನೈ ಗೆ ತೆರಳುವ ಕಾರಣ ನೀಡಿ ವಿಮಾನ ನಿಲ್ದಾಣದ ಭದ್ರತೆಯನ್ನು ಉಲ್ಲಂಘನೆ ಮಾಡಿದ 23 ವರ್ಷದ ಯೂಟ್ಯೂಬರ್ ನ್ನು ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ವಿಮಾನ ನಿಲ್ದಾಣದ ಭದ್ರತೆ ಉಲ್ಲಂಘಿಸಿದ ಯೂಟ್ಯೂಬರ್ ಬಂಧನ
ವಿಮಾನ ನಿಲ್ದಾಣದ ಭದ್ರತೆ ಉಲ್ಲಂಘಿಸಿದ ಯೂಟ್ಯೂಬರ್ ಬಂಧನTNIE

ಬೆಂಗಳೂರು: ಬೆಂಗಳೂರಿನಿಂದ ಚೆನ್ನೈ ಗೆ ತೆರಳುವ ಕಾರಣ ನೀಡಿ ವಿಮಾನ ನಿಲ್ದಾಣದ ಭದ್ರತೆಯನ್ನು ಉಲ್ಲಂಘನೆ ಮಾಡಿದ 23 ವರ್ಷದ ಯೂಟ್ಯೂಬರ್ ನ್ನು ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.

ಏ.12 ರಂದು ತನ್ನ ಯೂಟ್ಯೂಬ್ ಚಾನಲ್ ಗೆ ವೀಡಿಯೋ ಅಪ್ ಲೋಡ್ ಮಾಡಿದ್ದ ಯೂಟ್ಯೂಬರ್, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು/ ಭದ್ರತೆಯನ್ನು ಲೇವಡಿ ಮಾಡಿದ್ದರು.

ವಿಮಾನ ನಿಲ್ದಾಣದಂತಹ ಸೂಕ್ಷ್ಮ ಪ್ರದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿರುವ ಕಾರಣ ಅವರು ಕಠಿಣ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಮೂಲದ ವಿಕಾಸ್ ಗೌಡ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ 1.3 ಲಕ್ಷ ಅನುಯಾಯಿಗಳನ್ನು ಹೊಂದಿದ್ದು, ತನ್ನ ವೀಡಿಯೊಗಳಿಗೆ ಹೆಚ್ಚು ವೀಕ್ಷಣೆಯನ್ನು ಪಡೆಯಲು ಸಾಹಸಗಳನ್ನು ಕೈಗೊಳ್ಳುತ್ತಿದ್ದರು. ವಿಕಾಸ್ ಗೌಡ ಯೂಟ್ಯೂಬ್ ಖಾತೆಯಲ್ಲಿ 60 ವೀಡಿಯೊಗಳನ್ನು ಹಾಕಿದ್ದು ಪ್ರತಿಯೊಂದಕ್ಕೂ ವೀಕ್ಷಣೆಗಳು 2.5 ಲಕ್ಷದಿಂದ 3.5 ರ ನಡುವೆ ಇದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಈ ನಿರ್ದಿಷ್ಟ ವೀಡಿಯೊವನ್ನು ಅವರು ಏಪ್ರಿಲ್ 7 ರಂದು ಟರ್ಮಿನಲ್ 2 ರಲ್ಲಿ ಚಿತ್ರೀಕರಿಸಿದ್ದಾರೆ ಮತ್ತು ಕೆಲವು ದಿನಗಳ ನಂತರ ಅಪ್‌ಲೋಡ್ ಮಾಡಿದ್ದಾರೆ.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಇನ್ಸ್‌ಪೆಕ್ಟರ್ ಮುರಳಿ ಲಾಲ್ ಮೀನಾ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 448 (ಅತಿಕ್ರಮಣ) ಮತ್ತು ಸೆಕ್ಷನ್ 505 (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ವಿಮಾನ ನಿಲ್ದಾಣದ ಭದ್ರತೆ ಉಲ್ಲಂಘಿಸಿದ ಯೂಟ್ಯೂಬರ್ ಬಂಧನ
ಬೆಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಮಾಣ 5 ಪಟ್ಟು ಹೆಚ್ಚಳ!

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಈ ಬಗ್ಗೆ ಮಾತನಾಡಿದ್ದು ವಿಕಾಸ್ ಗೌಡ ಎಂಬಾತನನ್ನು ನಾವು ಬಂಧಿಸಿದ್ದೇವೆ ಮತ್ತು ಅವರ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಸಿಐಎಸ್ಎಫ್ ಪೋಲೀಸ್ ಪ್ರಕಾರ, “ ವಿಮಾಸ್ ಗೌಡ ಏಪ್ರಿಲ್ 7 ರಂದು ವೀಡಿಯೊಗಳನ್ನು ಚಿತ್ರೀಕರಿಸುವ ನಿರ್ದಿಷ್ಟ ಉದ್ದೇಶದಿಂದ ವಿಮಾನ ನಿಲ್ದಾಣದ ಆವರಣವನ್ನು ಪ್ರವೇಶಿಸಿದ್ದಾರೆ.

ವಿಮಾನ ನಿಲ್ದಾಣದ ಭದ್ರತೆ ಉಲ್ಲಂಘಿಸಿದ ಯೂಟ್ಯೂಬರ್ ಬಂಧನ
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್2ನಲ್ಲಿ ಅಂತಾರಾಷ್ಟ್ರೀಯ ವಿಮಾನದ ಕಾರ್ಯಾಚರಣೆ ಮುಂದೂಡಿಕೆ

ಬೆಂಗಳೂರಿನಿಂದ ಚೆನ್ನೈಗೆ ಅತ್ಯಂತ ಕಡಿಮೆ ಬೆಲೆಯ ವಿಮಾನ ಟಿಕೆಟ್ ಬುಕ್ ಮಾಡಿ, ತಾನು ನಿಜವಾದ ವಿಮಾನಯಾನ ಮಾಡುವವನೆಂದು ಸುಳ್ಳು ಅಭಿಪ್ರಾಯ ಮೂಡಿಸಿದ್ದರು.

ಮಧ್ಯಾಹ್ನ 12.06ರ ಸುಮಾರಿಗೆ ಭದ್ರತಾ ತಪಾಸಣೆ ಮುಗಿಸಿದ ಅವರು ಬೋರ್ಡಿಂಗ್ ಗೇಟ್ ಬಳಿ ಬರಲಿಲ್ಲ. ಅವರು ತಮ್ಮ ಬಳಿ ಕೆಲವು ಗುಪ್ತ ಸಾಧನವನ್ನು ಹೊಂದಿದ್ದರು, ಅದರ ಮೂಲಕ ಅಕ್ರಮವಾಗಿ ಪ್ರವೇಶಿಸುವ ಮೂಲಕ ನಿರ್ಬಂಧಿತ ಪ್ರದೇಶಗಳಲ್ಲಿ ದೃಶ್ಯಗಳನ್ನು ಚಿತ್ರೀಕರಿಸಲು ಪ್ರಾರಂಭಿಸಿದರು. ಇಡೀ ದಿನ ವಿಮಾನ ನಿಲ್ದಾಣದಲ್ಲಿ ಸುತ್ತಾಡುತ್ತೇನೆ ಮತ್ತು ವಿಮಾನ ನಿಲ್ದಾಣದ ಭದ್ರತೆಯನ್ನು ಉಲ್ಲಂಘಿಸಬಹುದು ಎಂದು ಸಾಬೀತುಪಡಿಸುತ್ತೇನೆ ಎಂದು ಕನ್ನಡದಲ್ಲಿ ಬಡಾಯಿ ಕೊಚ್ಚಿಕೊಳ್ಳುವುದು ಸಹ ವೀಡಿಯೋದಲ್ಲಿ ಕೇಳಿಬಂದಿದ್ದು, ಈ ರೀತಿ ಮಾಡಿದ ಬಳಿಕ ಸಂಜೆ 6.30ಕ್ಕೆ ವಿಮಾನ ನಿಲ್ದಾಣದಿಂದ ಆತ ನಿರ್ಗಮಿಸಿದ್ದರು.

ಯೂಟ್ಯೂಬರ್ ನಡೆ ಸಂಪೂರ್ಣವಾಗಿ ಅಕ್ರಮವಾಗಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ. “ವಿಮಾನ ನಿಲ್ದಾಣದಂತಹ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಕಿಡಿಗೇಡಿತನ ಅಥವಾ ವಿನೋದಕ್ಕೆ ಯಾವುದೇ ಅವಕಾಶವಿಲ್ಲ. ಹೀಗಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ವಿಕಾಸ್ ಗೌಡ ತಾವು ವಿಮಾನ ಪ್ರಯಾಣಿಕ ಎಂದು ಸುಳ್ಳು ಹೇಳಿದ್ದಾರೆಂಬುದನ್ನು ಸಾಬೀತುಪಡಿಸಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಭದ್ರತೆ ಬಿಗಿಯಾಗಿಲ್ಲ ಎಂಬ ತಪ್ಪು ಅಭಿಪ್ರಾಯ ಮೂಡಿಸಲು ಟಿಕೆಟ್‌ ಬಳಸಿ ಅನಧಿಕೃತವಾಗಿ ಒಳ ಪ್ರವೇಶಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com