ಚುನಾವಣಾ ಬಾಂಡ್, ಪಿಎಂ ಕೇರ್ಸ್ ದೊಡ್ಡ ಹಗರಣಗಳು: ಪರಕಾಲ ಪ್ರಭಾಕರ್ ಟೀಕೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚುನಾವಣಾ ಬಾಂಡ್ ಗಳನ್ನು "ವಿಶ್ವದ ಅತಿದೊಡ್ಡ ಹಗರಣ" ಎಂದು ಬಣ್ಣಿಸಿರುವ ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್, ಇದರಲ್ಲಿ ತೊಡಗಿರುವ ಹಣದ ಪ್ರಮಾಣವನ್ನು ಪರಿಗಣಿಸಿ, ಬಿಜೆಪಿ ಸರ್ಕಾರದ ಪಾರದರ್ಶಕ ರಾಜಕೀಯ ನಿಧಿಯ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.

ವಂಚಕ ಬಂಡವಾಳಶಾಹಿ(crony capitalism) ಒಂದು ಪ್ರಮುಖ ಭ್ರಷ್ಟಾಚಾರ ಸಮಸ್ಯೆಯಾಗಿದ್ದು, ಪಿಎಂ ಕೇರ್ಸ್ ಫಂಡ್ ಕೂಡ ಒಂದು ಹಗರಣವಾಗಿದೆ ಎಂದು ಟೀಕಿಸಿದ್ದಾರೆ.

ಚುನಾವಣಾ ಬಾಂಡ್‌ಗಳ ಕುರಿತು ಇತ್ತೀಚೆಗೆ ಪಿಎಂ ನರೇಂದ್ರ ಮೋದಿಯವರ ವಿವರಣೆಯ ಬಗ್ಗೆ ಕೇಳಲಾದ ಪ್ರಶ್ನೆಗೆ,''ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯದ್ದಾಗಿದ್ದರೆ, ಅದು ಜಾರಿಗೆ ಬಂದ 2018 ರಿಂದ ಸರ್ಕಾರ ಅದರ ಬಗ್ಗೆ ಜನರಿಗೆ ಏಕೆ ಹೇಳಲಿಲ್ಲ. ಸತ್ಯಾಸತ್ಯತೆ ತಿಳಿದುಕೊಳ್ಳಲು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಏಕೆ ಹೋಗಬೇಕಾಯಿತು ಮತ್ತು ವಿವರಣೆ ಪ್ರಸ್ತುತಪಡಿಸುವ ಮೊದಲು ಸರ್ಕಾರವು ಚುನಾವಣೆ ಮುಗಿಯುವವರೆಗೆ ಏಕೆ ಸಮಯ ಕೇಳಿತು? ಎಂದು ಸಹ ಪ್ರಶ್ನಿಸಿದ್ದಾರೆ.

ನಾನು ಇದನ್ನು ವಿಶ್ವದ ಅತಿದೊಡ್ಡ ಹಗರಣ ಎಂದು ಏಕೆ ಕರೆದಿದ್ದೇನೆಂದರೆ ಕೇವಲ ಹಣದ ವಿನಿಮಯದಿಂದಾಗಿ ಅಲ್ಲ, ಇದು ಒಪ್ಪಂದಗಳಿಗೆ ಬದಲಾಗಿ ನೀಡಿದ ಸಾವಿರಾರು ಕೋಟಿ ರೂಪಾಯಿಗಳನ್ನು ಒಳಗೊಂಡಿರುವ 'ಹಣದ ಚೆಲ್ಲಾಟವಾಗಿದ್ದು, ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ ದಾಳಿಯನ್ನು ನಿಲ್ಲಿಸಲು ಸರ್ಕಾರದ ಕ್ರಮವಾಗಿದೆ. ದಾಳಿಗಳನ್ನು ಮುಂದುವರಿಸಿದ್ದರೆ, ನೂರಾರು- ಸಾವಿರಾರು ಕೋಟಿಗಳನ್ನು ಪತ್ತೆ ಮಾಡುತ್ತಿದ್ದರು ಎಂದರು.

ಸಾಂದರ್ಭಿಕ ಚಿತ್ರ
ನಿರುದ್ಯೋಗ ಕುರಿತ ಅಂಕಿಅಂಶಗಳನ್ನು ಕೇಂದ್ರ ಸರ್ಕಾರ ಮರೆಮಾಚುತ್ತಿದೆ: ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್

ಒಪ್ಪಂದಗಳ ವಿಷಯದಲ್ಲಿ ದೇಶವು ಏನನ್ನು ಕಳೆದುಕೊಂಡಿದೆ ಎಂಬುದನ್ನು ನೀವು ಊಹಿಸಬಹುದು, ಅಕ್ರಮ ಹಣ ವರ್ಗಾವಣೆ ಸಮಸ್ಯೆ ಇದೆ, ಕೇವಲ ಕಂಪನಿಗಳನ್ನು ನೋಡಿ -- ಲಾಭ ಗಳಿಸದ ಮತ್ತು ನಷ್ಟ ಮಾಡುತ್ತಿರುವವರು ಸಹ ಪಾವತಿಸಿದ್ದಾರೆ, ಅವರು ಹೇಗೆ ಹಣ ಪಡೆದರು, ಅಂದರೆ ಇದರರ್ಥ ಚುನಾವಣಾ ಬಾಂಡ್‌ಗಳ ಯೋಜನೆಯಲ್ಲಿ ಸಾಕಷ್ಟು ಹಣ ವರ್ಗಾವಣೆಯಾಗಿದೆ ಎಂದಲ್ಲವೇ, ಇದು ನನ್ನನ್ನು ಇನ್ನಷ್ಟು ಬೆರಗುಗೊಳಿಸಿತು ಎಂದಿದ್ದಾರೆ.

"ಸ್ವತಂತ್ರವಾಗಿರಬೇಕಾದ ಸಂಸ್ಥೆ, ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ನಿಯಮಗಳು ಮತ್ತು ನಿಬಂಧನೆಗಳನ್ನು ಸ್ವೀಕರಿಸಲು ಮತ್ತು ನಿಯಮ ಸಡಿಲಿಸುವಂತೆ ಒತ್ತಡ ಹೇರಿತು. ಚುನಾವಣಾ ಬಾಂಡ್ ಗಳನ್ನು ಖರೀದಿಸಿದ ನಂತರ, ನಿಯಮಾವಳಿಗಳನ್ನು ಸಡಿಲಗೊಳಿಸಲಾಯಿತು, ಅಂದರೆ ಆರ್ ಬಿಐ ಕೂಡ ರಾಜಿ ಮಾಡಿಕೊಂಡಿತು. ಜೊತೆಗೆ ಉತ್ಪಾದನೆಯೂ ಇತ್ತು. ಫಾರ್ಮಾ ಕಂಪನಿಗಳಿಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ಸ್ (PLI) ಕೂಡ ಇತ್ತು ಎಂದು ಪರಕಾಲ ಪ್ರಭಾಕರ್ ಬಣ್ಣಿಸಿದ್ದಾರೆ.

ಪಿಎಂ ಕೇರ್ಸ್ ಫಂಡ್ ಅತಿದೊಡ್ಡ ಹಗರಣ: ಪಿಎಂ ಕೇರ್ಸ್ ಫಂಡ್‌ನಲ್ಲಿ, ಸರ್ಕಾರದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗುತ್ತದೆ, ಸರ್ಕಾರದ ಅಡಿಯಲ್ಲಿ ಬರುವುದಿಲ್ಲ ಎನ್ನುತ್ತಾರೆ. ಎಲ್ಲಾ ಸರ್ಕಾರಿ ನೌಕರರು ಒಂದು ದಿನದ ಸಂಬಳವನ್ನು ದೇಣಿಗೆ ನೀಡುವಂತೆ ಮಾಡಲಾಯಿತು, ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಹಣ ನೀಡುವಂತೆ ಕೇಳಲಾಯಿತು. ಈಗ ಸರ್ಕಾರವು ನಮಗೆ ಎಲ್ಲಿಂದ ಹಣ ಪಡೆಯುತ್ತಿದೆ, ಎಷ್ಟು ಸಂಗ್ರಹಿಸಲಾಗಿದೆ, ಸರ್ಕಾರ ಎಷ್ಟು ಖರ್ಚು ಮಾಡುತ್ತದೆ ಮತ್ತು ಎಷ್ಟು ಎಂದು ಹೇಳುತ್ತಿಲ್ಲ. ಸಾರ್ವಜನಿಕರಿಗೆ ಏನೂ ಗೊತ್ತಾಗುತ್ತಿಲ್ಲ, ಇದು ಬಹುಶಃ ಇನ್ನೂ ದೊಡ್ಡ ಹಗರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ನಿಧಿ ಮತ್ತು ಅನುದಾನ ಹಂಚಿಕೆಯಲ್ಲಿ ಕರ್ನಾಟಕ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ದೂರಿನ ಕುರಿತು ಕೇಳಿದಾಗ, ಬಿಜೆಪಿ ಸರ್ಕಾರಕ್ಕೆ ಒಕ್ಕೂಟ ರಚನೆಯಲ್ಲಿ ನಂಬಿಕೆಯಿಲ್ಲ. ಜಿಎಸ್‌ಟಿ ಕೌನ್ಸಿಲ್ ಮತ್ತು ನೀತಿ ಆಯೋಗದಲ್ಲಿ ರಾಜ್ಯಗಳು ಮತ್ತು ಮುಖ್ಯಮಂತ್ರಿಗಳನ್ನು ನಡೆಸಿಕೊಳ್ಳುವ ರೀತಿ ಅದರ ತಾರತಮ್ಯವನ್ನು ತೋರಿಸುತ್ತದೆ ಎಂದು ಹೇಳಿದರು.

ಕ್ರೋನಿ ಕ್ಯಾಪಿಟಲಿಸಂನ್ನು ಹೇಗೆ ವ್ಯಾಖ್ಯಾನಿಸುತ್ತೀರಿ ಎಂದು ಕೇಳಿದಾಗ, : ನೀವು ಬಡವರಿಗೆ 5 ಕೆಜಿ ಆಹಾರ ಧಾನ್ಯಗಳನ್ನು ನೀಡುತ್ತೀರಿ. ನಿಮ್ಮ ಸ್ನೇಹಿತರಿಗೆ ಐದು ವಿಮಾನ ನಿಲ್ದಾಣಗಳನ್ನು ನೀಡಿ ನಾವು ಬಡವರ ಪರ ಎಂದು ಹೇಳಬಹುದು. ಇದು ಅನೇಕ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಇಂದು ನಡೆಯುತ್ತಿದೆ, ವಿಮಾನ ನಿಲ್ದಾಣಗಳು ಮತ್ತು ಆಸ್ತಿಗಳನ್ನು 'ಸ್ನೇಹಿತರಿಗೆ' ನೀಡಲಾಗಿದೆ ಎಂದು ಪರಕಾಲ ಪ್ರಭಾಕರ್ ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com