ನೇಹಾ ಹತ್ಯೆ ಪ್ರಕರಣ: 9 ಬಾರಿ ಅಲ್ಲ 14 ಸಲ ಇರಿತ; ಮರಣೋತ್ತರ ವರದಿಯಲ್ಲಿ ಸ್ಫೋಟಕ ಸಂಗತಿ ಬಯಲು

ಬಂಧಿತ ಆರೋಪಿ ಫಯಾಜ್, ನೇಹಾಳನ್ನು 9 ಅಲ್ಲ ಬದಲಾಗಿ 14 ಬಾರಿ ಚುಚ್ಚಿ ಕೊಂದಿದ್ದಾನೆ. ನೇಹಾ ಹಿರೇಮಠ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆಯಾಗಿದೆ.
ನೇಹಾ ಮತ್ತು ಫಯಾಜ್
ನೇಹಾ ಮತ್ತು ಫಯಾಜ್

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್​ ಸದಸ್ಯರಾದ ನಿರಂಜನ್ ಹಿರೇಮಠ್ ಅವರ ಪುತ್ರಿ, ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ರಾಷ್ಟ್ರದಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದು, ಪ್ರಕರಣ ಕ್ಷಣಕ್ಕೊಂದು ಬಣ್ಣ ಪಡೆಯುತ್ತಿದೆ. ನಿತ್ಯವೂ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಕೊಲೆಯಾದ ನೇಹಾಳ ಮರಣೋತ್ತರ ವರದಿ ಬಿಡುಗಡೆಯಾಗಿದ್ದು, ಭಯಾನಕ ಸಂಗತಿ ಬಯಲಾಗಿದೆ

ಬಂದಿತ ಆರೋಪಿ ಫಯಾಜ್, ನೇಹಾಳನ್ನು 9 ಅಲ್ಲ ಬದಲಾಗಿ 14 ಬಾರಿ ಚುಚ್ಚಿ ಕೊಂದಿದ್ದಾನೆ. ನೇಹಾ ಹಿರೇಮಠ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆಯಾಗಿದೆ. ಹೃದಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಕುತ್ತಿಗೆಗೆ ಹಲವು ಬಾರಿ ಇರಿದಿದ್ದರಿಂದ ರಕ್ತನಾಳ ತುಂಡಾಗಿ ವಿಪರೀತ ರಕ್ತಸ್ರಾವವಾಗಿದೆ, ಹೀಗಾಗಿ ರಕ್ತಸ್ರಾವದಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿ ಫಯಾಜ್​ ನೇಹಾಳ ಹೃದಯಕ್ಕೂ ಚಾಕುವಿನಿಂದ ಚುಚ್ಚಿದ್ದಾನೆ ಎಂದು ಹೇಳಲಾಗಿದೆ.

ನೇಹಾ ಮತ್ತು ಫಯಾಜ್
ನೇಹಾ- ಫಯಾಜ್ ಪ್ರೀತಿಸುತ್ತಿದ್ರು.. ತಾಯಿ ಮುಮ್ತಾಜ್ ಹೇಳಿಕೆ, ಅಲ್ಲಗಳೆದ ನೇಹಾ ತಾಯಿ!

ಏ.18 ರ ಗುರುವಾರ ಸಂಜೆ 4.45ರ ಸುಮಾರಿಗೆ ಆರೋಪಿ ಫಯಾಜ್ ತನ್ನ ಕೈಯಲ್ಲಿ ಚಾಕು ಹಿಡಿದು, ಮಾಸ್ಕ್ ಧರಿಸಿಕೊಂಡು ಹುಬ್ಬಳ್ಳಿ ಬಿವಿಬಿ ಕಾಲೇಜು ಕ್ಯಾಂಪಸ್ ಒಳಗೆ ಎಂಟ್ರಿ ಕೊಟ್ಟಿದ್ದನು. ಇತ್ತ ವಿದ್ಯಾರ್ಥಿನಿ ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ್ದಾನೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com