ನೇಹಾ ಹಿರೇಮಠ್ ಮನೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿ

ಇತ್ತೀಚಿಗೆ ಕಾಲೇಜ್ ಆವರಣದಲ್ಲಿ ಹತ್ಯೆಗೀಡಾದ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರ ನಿವಾಸಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭಾನುವಾರ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನಾಗಲಕ್ಷ್ಮಿ ಚೌಧರಿ
ನಾಗಲಕ್ಷ್ಮಿ ಚೌಧರಿ

ಬೆಂಗಳೂರು: ಇತ್ತೀಚಿಗೆ ಕಾಲೇಜ್ ಆವರಣದಲ್ಲಿ ಹತ್ಯೆಗೀಡಾದ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರ ನಿವಾಸಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭಾನುವಾರ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಾಧ್ಯವಾದಷ್ಟು ಬೇಗ ನ್ಯಾಯ ಸಿಗುತ್ತದೆ ಎಂದು ಭರವಸೆ ನೀಡಿದರು. ನೇಹಾ ಸಾವನ್ನು ವೈಯಕ್ತಿಕ ಲಾಭಕ್ಕಾಗಿ ರಾಜಕೀಯಗೊಳಿಸಬಾರದು ಮತ್ತು ಹಾಗೆ ಮಾಡಿದ್ದರೆ ಅದು ಈ ನೆಲದ ಮಗಳಿಗೆ ಅವಮಾನ ಮಾಡಿದಂತೆ ಎಂದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯನ್ನು ತಮ್ಮ ಸ್ವಾರ್ಥಕ್ಕಾಗಿ ಅಥವಾ ರಾಜಕೀಯಗೊಳಿಸಲು ಯಾರಿಗೂ ಅವಕಾಶ ನೀಡಬೇಡಿ ಎಂದು ಪೋಷಕರಿಗೆ ಹೇಳಿದ್ದೇನೆ. ಏಕೆಂದರೆ ಅದು ನೇಹಾ ಅವರನ್ನು ಅವಮಾನಿಸಿದಂತೆ ಆಗುತ್ತದೆ. ನಾವು ನಿಜವಾಗಿಯೂ ಅವಳ ಬಗ್ಗೆ ಚಿಂತೆ ಮಾಡುತ್ತಿದ್ದರೆ, ನಾವೆಲ್ಲರೂ ಬಲವಾಗಿ ಬೆಂಬಲಿಸಬೇಕು ಮತ್ತು ಪೊಲೀಸರಿಗೆ ತನಿಖೆ ಮಾಡಲು ಅವಕಾಶ ಮಾಡಿಕೊಡಿ ಮತ್ತು ಸಾಧ್ಯವಾದಷ್ಟು ಬೇಗ, ಸಾವಿಗೆ ನ್ಯಾಯ ಪಡೆಯಬೇಕು ಎಂದು ಹೇಳಿದರು.

ನಗರ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಸುರಕ್ಷತಾ ಕ್ರಮಗಳನ್ನು ಹೊಂದಿರಬೇಕು ಮತ್ತು ಕಾಲೇಜುಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಅವರ ಭವಿಷ್ಯ, ಸೈಬರ್ ಕ್ರೈಮ್, ಸಾಮಾಜಿಕ ಜಾಲತಾಣ, ಅವರ ಗುರಿಗಳ ಬಗ್ಗೆ ತಿಳಿಸಲು ಸೂಚಿಸಲಾಗಿದೆ. "ಈ ವಿಷಯಗಳನ್ನು ಶಾಲೆಗಳು ಮತ್ತು ಸಂಸ್ಥೆಗಳಲ್ಲಿ ಅನ್ವಯಿಸಿದರೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಖಂಡಿತವಾಗಿಯೂ ಕಡಿಮೆಯಾಗುತ್ತವೆ" ಎಂದು ಅವರು ಅಭಿಪ್ರಾಯಪಟ್ಟರು.

ನಾಗಲಕ್ಷ್ಮಿ ಚೌಧರಿ
ನೇಹಾ ಹಿರೇಮಠ್ ಹತ್ಯೆ: ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು- ಜೆಪಿ ನಡ್ಡಾ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಕೌನ್ಸಿಲರ್‌ ನಿರಂಜನ ಹಿರೇಮಠ ಅವರ ಪುತ್ರಿಯನ್ನು ಅ.18ರಂದು ಕಾಲೇಜು ಆವರಣದಲ್ಲಿ ಕೊಲೆ ಮಾಡಿರುವುದು ವ್ಯಾಪಕ ಖಂಡನೆ ಹಾಗೂ ಪ್ರತಿಭಟನೆಗೆ ಕಾರಣವಾಗಿತ್ತು.

ಈ ವಿಷಯವು ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷದ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಆಡಳಿತ ಪಕ್ಷವು ಇದನ್ನು 'ವೈಯಕ್ತಿಕ ಘಟನೆ' ಎಂದು ಬಿಂಬಿಸಲು ಪ್ರಯತ್ನಿಸಿದರೆ, ಕೇಸರಿ ಪಕ್ಷವು 'ಲವ್ ಜಿಹಾದ್' ಎಂದು ಶಂಕಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com