ಯಾದಗಿರಿ ದಲಿತ ಯುವಕನ ಹತ್ಯೆ: ಈ ರಾಜ್ಯದಲ್ಲಿ ಯಾರು ನೆಮ್ಮದಿಯಾಗಿ ಬದುಕಬೇಕು? ವಿಜಯೇಂದ್ರ ಕಿಡಿ

ಅನ್ಯಕೋಮಿನ ಯುವಕರಿಂದ ದಲಿತ ಹಿಂದು ಯುವಕನ‌ ಹತ್ಯೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಯಾದಗಿರಿ ನಗರದ ಶಹಾಪೂರ ಪೇಟ್ ಬಡಾವಣೆಯಲ್ಲಿ ಘಟನೆ ನಡೆದಿದೆ.
ಬಿ ವೈ ವಿಜಯೇಂದ್ರ
ಬಿ ವೈ ವಿಜಯೇಂದ್ರ

ಯಾದಗಿರಿ: ಅನ್ಯಕೋಮಿನ ಯುವಕರಿಂದ ದಲಿತ ಹಿಂದು ಯುವಕನ‌ ಹತ್ಯೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಯಾದಗಿರಿ ನಗರದ ಶಹಾಪೂರ ಪೇಟ್ ಬಡಾವಣೆಯಲ್ಲಿ ಘಟನೆ ನಡೆದಿದೆ. ರಾಕೇಶ್ (22) ಮೃತ ದುರ್ದೈವಿ.

ಭಾನುವಾರ ರಾತ್ರಿ ರಾಕೇಶ್‌ ಊಟ ಮಾಡಲು ಹೊರಗೆ ಬಂದಿದ್ದ. ಅನ್ಯಕೋಮಿನವರ ಮನೆಯಲ್ಲಿ ರೊಟ್ಟಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ಮನೆ ಸಮೀಪದಲ್ಲೇ ಇರುವ ರೊಟ್ಟಿ ಕೇಂದ್ರಕ್ಕೆ ರಾಕೇಶ್‌ ತೆರಳಿದ್ದ. ಈ ವೇಳೆ ಮನೆ ಬಾಗಿಲು ಬಡಿದು ರೊಟ್ಟಿ ಕೇಳಿದ್ದ, ಆದರೆ ರೊಟ್ಟಿ ಇಲ್ಲವೆಂದು ಕಳುಹಿಸಿದ್ದರು. ಮನೆಗೆ ವಾಪಸ್ ಬಂದ ರಾಕೇಶ್‌ ಖಾಲಿ ಹೊಟ್ಟೆಯಲ್ಲಿ ನಿದ್ರೆಗೆ ಜಾರಿದ್ದ.

ಸ್ವಲ್ಪ ಸಮಯದ ನಂತರ ರಾಕೇಶ್‌ ಮನೆಗೆ ಬಂದಿದ್ದ ಅನ್ಯಕೋಮಿನ ಯುವಕರು, ರೊಟ್ಟಿ ಕೇಳಲು ಮನೆಗೆ ಯಾಕೆ ಬಂದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಪ್ರಮುಖ ಆರೋಪಿ ಫೈಯಾಜ್ ಸೇರಿ ನಾಲ್ವರು ರಾಕೇಶ್‌ನ ಗುಪ್ತಾಂಗಕ್ಕೆ ಹಲ್ಲೆ ಮಾಡಿದ್ದಾರೆ. ಮಾರಣಾಂತಿಕ ಹಲ್ಲೆಗೊಳಗಾದ ರಾಕೇಶ್‌ ಉಸಿರುಚೆಲ್ಲಿದ್ದಾನೆ ಎಂದು ರಾಕೇಶ್ ತಾಯಿ ಆರೋಪಿಸಿದ್ದಾರೆ.

ಬಿ ವೈ ವಿಜಯೇಂದ್ರ
ಯಾದಗಿರಿ: ಎಸ್‌ಎಸ್‌ಎಲ್‌ಸಿ‌ ಪರೀಕ್ಷೆಯಲ್ಲಿ ನಕಲು; ಮೊದಲ ದಿನವೇ ಇಬ್ಬರು ಶಿಕ್ಷಕರ ಅಮಾನತು

ಇನ್ನೂ ಯಾದಗಿರಿ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ರಾಜ್ಯದಲ್ಲಿ ಯಾರು ನೆಮ್ಮದಿಯಾಗಿ ಬದುಕಬೇಕು

ಅಮಾಯಕ ಹೆಣ್ಣು ಮಕ್ಕಳ ಮಾನ - ಪ್ರಾಣ ಹರಣವಾಗುತ್ತಿದೆ, ಸ್ತ್ರೀಕುಲ ಪೀಡಕರ ಅಟ್ಟಹಾಸ ಎಲ್ಲೆ ಮೀರಿದೆ. ದೈವ ಸ್ಮರಣೆ ಮಾಡುವವರ ಮೇಲೆ ಹಲ್ಲೆ ನಡೆಯುತ್ತಿದೆ. ಇದೀಗ ಯಾದಗಿರಿಯಲ್ಲಿ ದಲಿತ ಯುವಕ ರಾಕೇಶ್ ನನ್ನು ಫಯಾಜ್ ಎಂಬ ಕೊಲೆಗಡುಕ ಕೊಲೆಗೈದಿದ್ದಾನೆ. ಪೊಲೀಸ್ ವ್ಯವಸ್ಥೆಯನ್ನು ನಿಷ್ಕ್ರೀಯ ಗೊಳಿಸಿರುವ ಸರ್ಕಾರದ ನೆರಳಲ್ಲಿ ಜನರ ರಕ್ಷಣೆಗೆ ಅವಕಾಶ ಎಲ್ಲಿದೆ?

ಮಹಿಳೆಯರಿಗೆ ರಕ್ಷಣೆ ಇಲ್ಲದ, ದಲಿತರಿಗೆ ಭದ್ರತೆ ಕೊಡದ, ಹಿಂದುಳಿದವರಿಗೆ ನಿರಾತಂಕ ಒದಗಿಸಲಾಗದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕುವೆಂಪು ಅವರು ಕಂಡ “ಸರ್ವ ಜನಾಂಗದ ಶಾಂತಿಯ ತೋಟ" ದ ಕರ್ನಾಟಕವನ್ನು ಕರಾಳ ಕರ್ನಾಟಕವನ್ನಾಗಿಸಿ 'ನಿರ್ದಿಷ್ಟ ಕೋಮಿಗೆ ಮಾತ್ರ ಸುರಕ್ಷತೆಯ ತಾಣ ಮಾಡಲು ಹೊರಟಿದೆ ಎಂದು ಹರಿಹಾಯ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com