ಪಿಜಿ ಕಟ್ಟಡ ನಿರ್ಮಾಣಕ್ಕಾಗಿ ಬೋರ್ ವೆಲ್ ಕೊರೆಸಲು ಬಂದ ಬಿಲ್ಡರ್: ಸ್ಥಳೀಯ ನಿವಾಸಿಗಳ ಪ್ರತಿಭಟನೆಯಿಂದ ಕಾರ್ಯ ಸ್ಥಗಿತ!

ಸಾರ್ವಜನಿಕ ಕೊಳವೆ ಬಾವಿ ಪಕ್ಕದಲ್ಲಿ ಮತ್ತೊಂದು ಬೋರ್‌ವೆಲ್ ಕೊರೆಸಲು ಮುಂದಾದ ಬಿಲ್ಡರ್ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿ ಬೋರ್ ವೆಲ್ ಕೊರೆಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ.
ಬೋರ್ ವೆಲ್ ಕೊರೆತಕ್ಕೆ ಸ್ಥಳಸ
ಬೋರ್ ವೆಲ್ ಕೊರೆತಕ್ಕೆ ಸ್ಥಳಸ

ಬೆಂಗಳೂರು: ವೈಟ್‌ಫೀಲ್ಡ್‌ನ ಅಂಬೇಡ್ಕರ್ ನಗರದಲ್ಲಿ ನೂರಾರು ಜನರಿಗೆ ಅನುಕೂಲವಾಗುತ್ತಿದ್ದ ಸಾರ್ವಜನಿಕ ಕೊಳವೆ ಬಾವಿ ಪಕ್ಕದಲ್ಲಿ ಮತ್ತೊಂದು ಬೋರ್‌ವೆಲ್ ಕೊರೆಸಲು ಮುಂದಾದ ಬಿಲ್ಡರ್ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿ ಬೋರ್ ವೆಲ್ ಕೊರೆಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ.

ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ನಿಲಯವನ್ನು ನಿರ್ಮಿಸುತ್ತಿರುವ ಆಂಧ್ರಪ್ರದೇಶದ ಬಿಲ್ಡರ್ ಒಬ್ಬರು ಬೋರ್‌ವೆಲ್ ಕೊರೆಸುತ್ತಿದ್ದು. ಈ ಬಿಲ್ಡರ್ ಬೋರ್ ವೆಲ್ ಕೊರೆಸಲು ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ (ಕೆಜಿಡಬ್ಲ್ಯುಎ) ಅನುಮತಿ ಪಡೆದಿದ್ದರು. ಆದರೆ ವಾಣಿಜ್ಯ ಉದ್ದೇಶಕಕ್ಕಾಗಿ ಬೋರ್ ವೆಲ್ ಕೊರೆಸಲಾಗುತ್ತಿತ್ತು. ಇದರಿಂದ ನೂರಾರು ಸ್ಥಳೀಯ ನಿವಾಸಿಗಳ ನೀರಿನ ಅಗತ್ಯಗಳನ್ನು ಪೂರೈಸುವ ಸಾರ್ವಜನಿಕ ಬೋರ್‌ವೆಲ್‌ ಗೆ ತೊಂದರೆಯಾಗಲಿದೆ ಎಂದು ಸ್ಥಳೀಯರು ವಾದಿಸಿದರು.

ಸಾರ್ವಜನಿಕ ಬೋರ್‌ವೆಲ್ ಗೆ ಇತ್ತೀಚೆಗಷ್ಟೇ ಸರ್ವಿಸ್ ಮಾಡಲಾಗಿತ್ತು, ಹೀಗಾಗಿ ಖಾಸಗಿ ಕಟ್ಟಡಕ್ಕಾಗಿ ಹೊಸ ಬೋರ್‌ವೆಲ್‌ಗೆ ಅನುಮತಿ ನೀಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಸ್ಥಳೀಯ ನಿವಾಸಿ ಮಧುಸೂಧನ್ ಆರೋಪಿಸಿದ್ದಾರೆ. ಮಾಲೀಕರು ಎರಡು ದಿನಗಳ ಹಿಂದೆ ಕೆಜಿಡಬ್ಲ್ಯೂಎಯಿಂದ ಪಡೆದ ಅನುಮತಿ ಪತ್ರ ನಮಗೆ ತೋರಿಸಿದರು, ಆದರೆ ಅಧಿಕಾರಿಗಳು ಹೇಗೆ ಸಂವೇದನಾಶೀಲರಾಗುತ್ತಾರೆ? ಎಂದು ಅವರು ಪ್ರಶ್ನಿಸಿದ್ದಾರೆ.

ನಗರವು ನೀರಿನ ಸಮಸ್ಯೆಯಿಂದ ತತ್ತರಿಸುತ್ತಿರುವಾಗ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯಾವುದೇ ಬೋರ್‌ವೆಲ್‌ಗಳನ್ನು ಕೊರೆಯುವಂತಿಲ್ಲ ಎಂದು ಈಗಾಗಲೇ ಆದೇಶ ಹೊರಡಿಸಿದೆ. ಪರಿಸ್ಥಿತಿ ಹೀಗಿರುವಾಗ ಕೆಜಿಡಬ್ಲ್ಯೂಎ ಹೇಗೆ ಅನುಮತಿ ನೀಡುತ್ತಿದೆ. ಸ್ಥಳೀಯರಿಂದ ಆಕ್ಷೇಪಣೆ ಬಂದರೆ ಅನುಮತಿ ರದ್ದುಪಡಿಸಲಾಗುವುದು ಎಂಬುದು ಮಾಲೀಕರಿಗೆ ತಿಳಿದಿರಲಿಲ್ಲ ಎಂದು ಮಧುಸೂಧನ್ ಹೇಳಿದರು.

ಬೋರ್ ವೆಲ್ ಕೊರೆತಕ್ಕೆ ಸ್ಥಳಸ
ಬೆಂಗಳೂರು ಉತ್ತರ ಭಾಗದಲ್ಲಿ ಜಲ ಸಮಸ್ಯೆ: ಟ್ಯಾಂಕ್ ಮೂಲಕ NGO ನೀರು ಪೂರೈಕೆ

ಇದು ಅಧಿಸೂಚಿತ ಪ್ರದೇಶವಾಗಿದೆ, ಆದ್ದರಿಂದ, ಸಾರ್ವಜನಿಕ ಬೋರ್‌ವೆಲ್‌ಗಳನ್ನು ಕೊರೆಯುವುದನ್ನು ಹೊರತುಪಡಿಸಿ ಯಾವುದೇ ಉದ್ದೇಶಕ್ಕಾಗಿ ಅನುಮತಿ ನೀಡಲಾಗುವುದಿಲ್ಲ. ಈ ಪ್ರದೇಶದಲ್ಲಿ ಕಾವೇರಿ ಪೈಪ್‌ಲೈನ್ ಸಂಪರ್ಕವಿದೆ, ಆದ್ದರಿಂದ ಬೋರ್‌ವೆಲ್ ಕೊರೆಯಲು ಅನುಮತಿ ನೀಡಲಾಗುವುದಿಲ್ಲ ಕಟ್ಟಡವು ವಾಣಿಜ್ಯ ಪಿಜಿ ನಿರ್ಮಾಣಕ್ಕಾಗಿ ಮಾಡಲಾಗುತ್ತಿದೆ. ಆದ್ದರಿಂದ, ಇದಕ್ಕೆ ಸಂಪೂರ್ಣವಾಗಿ ಅನುಮತಿಸಲಾಗುವುದಿಲ್ಲ ಎಂದು ಕೆಜಿಡಬ್ಲ್ಯೂಎ ವಿರುದ್ಧ ಸಂದೀಪ್ ಅನಿರುಧನ್ ವಾಗ್ದಾಳಿ ನಡೆಸಿದ್ದಾರೆ.

ಅಂಬೇಡ್ಕರ್ ನಗರದಲ್ಲಿ ಐದು ಸಾರ್ವಜನಿಕ ಬೋರ್‌ವೆಲ್‌ಗಳಿದ್ದು ಅವುಗಳಲ್ಲಿ ನಾಲ್ಕು ಪಿಜಿ ಬಿಲ್ಡರ್‌ಗಳ ಅತಿಯಾದ ಬಳಸುವಿಕೆಯಿಂದ ಬತ್ತಿ ಹೋಗಿವೆ. ಈಗ ಇದು ಕೊನೆಯದಾಗಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಬೋರ್‌ವೆಲ್ ಆಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ, ಇಡೀ ಬಡಾವಣೆ ಈ ಒಂದು ಸಾರ್ವಜನಿಕ ಬೋರ್‌ವೆಲ್‌ ಮೇಲೆ ಅವಲಂಬಿತವಾಗಿದೆ. ಈ ಪಿಜಿ ಬಿಲ್ಡರ್ ಪಕ್ಕದಲ್ಲೇ ಬೋರ್ ವೆಲ್ ಕೊರೆಸಿದರೆ ಇದೂ ಬತ್ತಿ ಹೋಗುತ್ತೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಕೆಲವು ಪಿಜಿ ಬಿಲ್ಡರ್‌ಗಳು ತುಂಬಾ ಅಜಾಗರೂಕ ಮತ್ತು ಬೇಜವಾಬ್ದಾರಿ ಹೊಂದಿದ್ದಾರೆ. ಇಂತಹ ವಿಷಯಗಳ ವಿರುದ್ಧ ಜನಾಂದೋಲನ ನಡೆಯುವ ಸಮಯ ಬಂದಿದೆ ಎಂದು ಅನಿರುಧನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com