ಮನೆಯೊಳಗೆ ಚಿತ್ರೀಕರಣ ನಡೆಸಿರುವ ಅಪರಿಚಿತರಿಂದ ನಮ್ಮ ಕುಟುಂಬಕ್ಕೆ ಅಪಾಯದ ಭೀತಿ: ನೇಹಾ ತಂದೆ

ಸಹಪಾಠಿಯಿಂದಲೇ ಹತ್ಯೆಗೀಡಾದ ಹುಬ್ಬಳ್ಳಿ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹ ಹಿರೇಮಠ ಅವರ ತಂದೆ ತಮ್ಮ ಕುಟುಂಬಕ್ಕೆ ಅಪಾಯದ ಭೀತಿ ಇದೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡಿದ ನಿರಂಜನ ಹಿರೇಮಠ
ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡಿದ ನಿರಂಜನ ಹಿರೇಮಠonline desk

ಧಾರವಾಡ: ಸಹಪಾಠಿಯಿಂದಲೇ ಹತ್ಯೆಗೀಡಾದ ಹುಬ್ಬಳ್ಳಿ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹ ಹಿರೇಮಠ ಅವರ ತಂದೆ ತಮ್ಮ ಕುಟುಂಬಕ್ಕೆ ಅಪಾಯದ ಭೀತಿ ಇದೆ ಎಂದು ಹೇಳಿದ್ದಾರೆ.

ಏ.18 ರಂದು ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಹತ್ಯೆಗೀಡಾಗಿದ್ದರು. ಮಗಳ ಅಂತ್ಯಕ್ರಿಯೆಯ ಬಳಿಕ ಮನೆಯಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳನ್ನು ಅಪರಿಚಿತರು ಚಿತ್ರೀಕರಿಸಿದ್ದು, ಈ ಅಪರಿಚಿತರುಗಳಿಂದ ತಮ್ಮ ಕುಟುಂಬಕ್ಕೆ ಅಪಾಯ ಇದೆ ಎಂದು ನಿರಂಜನ ಹಿರೇಮಠ ಆತಂಕ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪುರಸಭೆಯ ಕಾಂಗ್ರೆಸ್ ಕೌನ್ಸಿಲರ್ ಆಗಿರುವ ನಿರಂಜನ ಹಿರೇಮಠ ಅವರು ತಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಘಟನೆ ನಡೆದ 5 ನೇ ದಿನ ನಾವು ಧಾರ್ಮಿಕ ವಿಧಿವಿಧಾನಗಳಲ್ಲಿ ವ್ಯಸ್ತರಾಗಿದ್ದೆವು, ಓರ್ವ ವ್ಯಕ್ತಿ ನಮ್ಮ ಮನೆಗೆ ಬಂದು ಮನೆ ಹಾಗೂ ಕುಟುಂಬ ಸದಸ್ಯರ ವೀಡಿಯೋ ಚಿತ್ರೀಕರಿಸಿದ್ದ ಎಂದು ಹಿರೇಮಠ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡಿದ ನಿರಂಜನ ಹಿರೇಮಠ
ನೇಹಾ ಹಿರೇಮಠ ನಿವಾಸಕ್ಕೆ ಸುರ್ಜೇವಾಲಾ ಭೇಟಿ: ನ್ಯಾಯ ಕೊಡಿಸುವುದಾಗಿ ವಾಗ್ದಾನ

ತನ್ನ ಕೊಠಡಿಗಳನ್ನು ಚಿತ್ರೀಕರಿಸುತ್ತಿದ್ದ ವ್ಯಕ್ತಿಯನ್ನು ನೀವು ಯಾರೆಂದು ಕೇಳಿದಾಗ, ಅಪರಿಚಿತರು ಯಾವುದೇ ಸಮರ್ಪಕ ಉತ್ತರ ನೀಡದೆ ಅಲ್ಲಿಂದ ಹೊರಟುಹೋದರು ಎಂದು ನಿರಂಜನ ಹಿರೇಮಠ ಹೇಳಿದ್ದಾರೆ.

ನೇಹಾ ಕೊಲೆ ನಡೆಯುವುದಕ್ಕೂ ಮುನ್ನ ಕಳೆದ ಹಲವು ದಿನಗಳಿಂದ ಅಪರಿಚಿತ ವ್ಯಕ್ತಿಯೂ ತಿರುಗಾಡುತ್ತಿದ್ದ ಎಂದು ಸ್ವಾಮಿಯೊಬ್ಬರಿಂದ ತಿಳಿದುಕೊಂಡಿದ್ದೇನೆ ಎಂದು ಹಿರೇಮಠ್ ಹೇಳಿದ್ದಾರೆ. ಮಗಳ ಹತ್ಯೆಯ ಹಿಂದೆ ದೊಡ್ಡ ಸಂಚು ಇದೆ ಎಂದು ಕಾಂಗ್ರೆಸ್‌ ಸದಸ್ಯ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com