Lok Sabha Election 2024 Voting Live Updates: ಸಂಜೆ 5 ಗಂಟೆವರೆಗೆ ಶೇ.63.90 ಮತದಾನ, ಮಂಡ್ಯದಲ್ಲಿ ಗರಿಷ್ಠ

ರಾಜ್ಯದ 14 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ವರೆಗೆ ಶೇಕಡಾ 63.90ರಷ್ಟು ಮತದಾನವಾಗಿದ್ದು, ಮಂಡ್ಯದಲ್ಲಿ ಗರಿಷ್ಠ ಅಂದರೆ 74.87ರಷ್ಟು ಮತದಾನವಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ರಾಜರಾಜೇಶ್ವರಿನಗರದ ಶಾಲೆಯೊಂದರಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ರಾಜರಾಜೇಶ್ವರಿನಗರದ ಶಾಲೆಯೊಂದರಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.TNIE photo by Shashidhar Byrappa.

Loksabha Election 2024: ಸಂಜೆ 5 ಗಂಟೆವರೆಗೂ ರಾಜ್ಯದಲ್ಲಿ ಶೇ.63.90ರಷ್ಟು ಮತದಾನ, ಎಲ್ಲಿ ಎಷ್ಟು ಪ್ರಮಾಣ.. ಇಲ್ಲಿದೆ ಮಾಹಿತಿ!

ದೇಶಾದ್ಯಂತ ಇಂದು 2ನೇ ಹಂತದ ಚುನಾವಣೆ ನಡೆಯುತ್ತಿದ್ದು ರಾಜ್ಯ 14 ಸಂಸದೀಯ ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಯಾವುದೇ ಗೊಂದಲಗಳಿಲ್ಲದೆ ಮತದಾನ ಆರಂಭವಾಗಿದೆ.

ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶ್ರೀಕಾಂತ್ ವಿದ್ಯಾಸಂಸ್ಥೆಯ ಮತಗಟ್ಟೆಯಲ್ಲಿ ಶತಾಯುಷಿ 101 ವರ್ಷದ ತಿಮ್ಮಮ್ಮ ಮತ ಚಲಾಯಿಸಿದರು.

ಹಾಸನ ನಗರದ ಸಂತೇಪೇಟೆಯ ಶಾಲೆಯ ಮತಗಟ್ಟೆ ಸಂಖ್ಯೆ 189 ರಲ್ಲಿ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತಗೊಂಡಿದೆ. ಯಂತ್ರ ಸ್ಥಗಿತಗೊಂಡು ಒಂದು ಗಂಟೆ ಕಳೆದರೂ ಮತಯಂತ್ರ ಸರಿಯಾಗಿಲ್ಲ ಎಂದು ಮತದಾರರು ಆರೋಪಿಸಿದ್ದಾರೆ.

ಮತ ಚಲಾವಣೆ ಮಾಡಿದ ಪರಮೇಶ್ವರ್ ದಂಪತಿ

ರಾಜರಾಜೇಶ್ವರಿ ನಗರದಲ್ಲಿ ಮತ ಚಲಾಯಿಸಿದ ನಟಿ ಅಮೂಲ್ಯ ಮತ್ತು ಜಗದೀಶ್

ಗೋವಿಂದ ರಾಜನಗರದ ಸಿದ್ದಗಂಗಾ ಪಬ್ಲಿಕ್ ಶಾಲೆಯಲ್ಲಿ ಮತ ಚಲಾಯಿಸಲು ಸುದೀರ್ಘ ಸಾಲಿನಲ್ಲಿ ನಿಂತಿರುವ ನಾಗರಿಕರು

ಬೆಳಗ್ಗೆ 7ಗಂಟೆಯಿಂದ 9 ಗಂಟೆವರೆಗೆ ಶೇ. 9 ರಷ್ಟು ಮತದಾನ

ಹಾಸನದಲ್ಲಿ ಎನ್ ಡಿ ಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮತದಾನ

ಚಿಕ್ಕಮಗಳೂರಿನ ಆರೆನೂರು ಗ್ರಾಮದ ಮತಗಟ್ಟೆ ಸಂಖ್ಯೆ 53 ರಲ್ಲಿ ಇವಿಎಂ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತಗೊಂಡಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾದಗಿ ಕೆಲವೇ ನಿಮಿಷಗಳಲ್ಲಿ ಮತದಾನ ಸ್ಥಗಿತಗೊಂಡಿದೆ.

ಹೆಚ್ಚಿನ ಸಂಖ್ಯೆಯ ಮತದಾನ ಮಾಡುವಂತೆ ಕನ್ನಡದಲ್ಲಿ ಪ್ರಧಾನಿ ಮೋದಿ ಕರೆ

ಬೆಂಗಳೂರಿನಲ್ಲಿ ಮತದಾನ ಬಂದ ಮಹಿಳೆಗೆ ಹೃದಯಾಘಾತನವಾಗಿತ್ತು, ಸರದಿ ಸಾಲಿನಲ್ಲಿ ಮತ ಚಲಾವಣೆಗೆ ನಿಂತಿದ್ದ ವೈದ್ಯರೊಬ್ಬರು ಕೂಡಲೇ ಆಕೆಯನ್ನು ಪರೀಕ್ಷಿಸಿ ಆಸ್ಪತ್ರೆಗೆ ಸೇರಿಸುವಂತೆ ಸೂಚಿಸಿದರು, ಇದರಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿದೆ.

ಮಂಗಳೂರು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತ ರಂಪಾಟ ನಡೆಯಿತು. ಈ ವೇಳೆ, ಪೊಲೀಸ್ ಅಧಿಕಾರಿಯನ್ನು ಬಿಜೆಪಿ ಕಾರ್ಯಕರ್ತರು ತಳ್ಳಾಡಿದರು‌. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಿ ಹೊರ ಬಂದಾಗ ಘಟನೆ ನಡೆಯಿತು.

ಗೂಂಡಾಗಿರಿಗೆ ಜನರು ಬಗ್ಗುವುದಿಲ್ಲ ಎಂದು ಗೊತ್ತಾದ ಮೇಲೆ ಡಿಕೆ ಬ್ರದರ್ಸ್ ಕನಕಪುರದಲ್ಲಿ ಕಾರ್ಡ್ ಹಂಚಿಕೆ-ಬಿಜೆಪಿ ಆರೋಪ

ಬೆಂಗಳೂರಿನ ನಿಸರ್ಗ ಗ್ರ್ಯಾಂಡ್ ನಲ್ಲಿ ಉಚಿತ ಉಪಹಾರ ಸೇವಿಸಲು ಮತದಾನ ಮಾಡಿ ಬಂದ ನಾಗರಿಕರು

ಹಾಸನದ ಪಡುವಲಹಿಪ್ಪೆಯಲ್ಲಿ ಮತದಾನ ಮಾಡಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

ಚಿತ್ರದುರ್ಗದ ಸಿರಿಗೆರೆ ಗ್ರಾಮದ ಬಳಿಯ ಸಿದ್ದಾಪುರದ ಮತಗಟ್ಟೆ ಯಲ್ಲಿ ಮತದಾನ ಬಹಿಷ್ಕಾರ

ಕೋಲಾರದಲ್ಲಿ ಮತಚಲಾಯಿಸಿದ 107 ವರ್ಷದ ಮುನಿ ವೆಂಕಟಪ್ಪ

ಪತ್ನಿ ಜೊತೆ ಬಂದು ಮತ ಚಲಾಯಿಸಿದ ನಟ ಶ್ರೀ ಮುರುಳಿ

ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮತ ಚಲಾಯಿಸಿದ ಮೈಸೂರು-ಕೊಡಗು ಅಭ್ಯರ್ಥಿ ಯದುವೀರ್ ಒಡೆಯರ್

ಮತದಾನ ಮಾಡಲು ಬಂದ ಮಹಿಳೆಗೆ ಹೃದಯ ಸ್ತಂಭನ: ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ ವೈದ್ಯ!

ಬೆಂಗಳೂರು: ಮತಗಟ್ಟೆ ಸಮೀಪ ಧರೆಗುರುಳಿದ ಬೃಹತ್​ ಮರ, ತಪ್ಪಿದ ಭಾರೀ ದುರಂತ

Lok Sabha Elections 2024: ಕರ್ನಾಟಕದ 14 ಕ್ಷೇತ್ರಗಳಲ್ಲಿ ಶೇ.50ರಷ್ಟು ಮತದಾನ! ಎಲ್ಲಿ ಗರಿಷ್ಠ? ಎಲ್ಲಿ ಕನಿಷ್ಠ? ಇಲ್ಲಿದೆ ಸಂಪೂರ್ಣ ಪಟ್ಟಿ

ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ.

ರಾಜ್ಯದ 14 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ವರೆಗೆ ಶೇಕಡಾ 63.90ರಷ್ಟು ಮತದಾನವಾಗಿದ್ದು, ಮಂಡ್ಯದಲ್ಲಿ ಗರಿಷ್ಠ ಅಂದರೆ 74.87ರಷ್ಟು ಮತದಾನವಾಗಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ ಅಂದರೆ ಶೇ.48.61ರಷ್ಟು ಮತದಾನವಾಗಿದೆ ಎಂದು ಚುನವಾವಣಾ ಆಯೋಗ ಮಾಹಿತಿ ನೀಡಿದೆ.

ಚಿತ್ರದುರ್ಗ: ಮತಗಟ್ಟೆಯಲ್ಲೇ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಸಾವು

ಚಾಮರಾಜನಗರದಲ್ಲಿ ಘರ್ಷಣೆ: ಮನವೊಲಿಸಲು ಯತ್ನಿಸಿದ ಅಧಿಕಾರಿಗಳ ಮೇಲೆ ಗ್ರಾಮಸ್ಥರ ದಾಳಿ, ಲಾಠಿ ಚಾರ್ಜ್!

Loksabha Election 2024: ಕೊನೆಗೂ ಸಂಧಾನ, #Voting ಬಹಿಷ್ಕರಿಸಿದ್ದ ಗ್ರಾಮಸ್ಥರಿಂದ ಸಂಜೆ ಮತದಾನ!

Advertisement

X
Kannada Prabha
www.kannadaprabha.com