ನಟ ದರ್ಶನ್ ಗೆ ಜೈಲೂಟವೇ ಸಾಕು, ಮನೆಯೂಟ ಬೇಡ: ಅಧಿಕಾರಿಗಳಿಂದ ಹೈಕೋರ್ಟ್ ಗೆ ವರದಿ ಸಲ್ಲಿಕೆ

ನಟ ದರ್ಶನ್ ಗೆ ಮನೆ ಊಟಕ್ಕೆ ಅವಕಾಶ ನೀಡಬೇಡಿ, ಜೈಲೂಟ ತಿಂದು ಅವರಿಗೆ ಆರೋಗ್ಯ ಸಮಸ್ಯೆಯೇನೂ ಆಗಿಲ್ಲ, ಚೆನ್ನಾಗಿದ್ದಾರೆ, ಕಾನೂನಿನಲ್ಲಿ ಕೊಲೆ ಆರೋಪಿಗೆ ಮನೆಯೂಟಕ್ಕೆ ಅವಕಾಶವಿಲ್ಲ ಎಂಬುದಾಗಿ ನಿರಾಕರಿಸಿದ್ದಾರೆ.
ನಟ ದರ್ಶನ್(ಸಂಗ್ರಹ ಚಿತ್ರ)
ನಟ ದರ್ಶನ್(ಸಂಗ್ರಹ ಚಿತ್ರ)
Updated on

ಬೆಂಗಳೂರು: ಜೈಲೂಟ ರುಚಿಸುತ್ತಿಲ್ಲ, ತೂಕ ಕಳೆದುಕೊಳ್ಳುತ್ತಿದ್ದೇನೆ, ಮನೆಯಿಂದ ಊಟ, ಹಾಸಿಗೆ ತರಿಸಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಮಾಡಿದ್ದ ಮನವಿಗೆ ಸಂಬಂಧಪಟ್ಟಂತೆ ಜೈಲು ಅಧಿಕಾರಿಗಳು ಹೈಕೋರ್ಟ್ ಗೆ ವರದಿ ಸಲ್ಲಿಸಿದ್ದಾರೆ.

ನಟ ದರ್ಶನ್ ಅವರು ಹೈಕೋರ್ಟ್ ಗೆ ಸಲ್ಲಿಸಿದ್ದ ಮನೆ ಊಟದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಈ ಬಗ್ಗೆ 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅರ್ಜಿ ಸಲ್ಲಿಸುವಂತೆಯೂ ನಟ ದರ್ಶನ್ ಪರ ವಕೀಲರಿಗೆ ಸೂಚಿಸಿ, ಆಗಸ್ಟ್.20ಕ್ಕೆ ಅರ್ಜಿಯ ವಿಚಾರಣೆ ಮುಂದೂಡಿತ್ತು.

ನಟ ದರ್ಶನ್(ಸಂಗ್ರಹ ಚಿತ್ರ)
ಬಳ್ಳಾರಿ: ಗರ್ಭಗುಡಿಯಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ; ಅರ್ಚಕನನ್ನು ವಜಾಗೊಳಿಸಿದ ಮುಜರಾಯಿ ಇಲಾಖೆ

ನಟ ದರ್ಶನ್ ಗೆ ಮನೆ ಊಟಕ್ಕೆ ಅವಕಾಶ ನೀಡಬೇಡಿ, ಜೈಲೂಟ ತಿಂದು ಅವರಿಗೆ ಆರೋಗ್ಯ ಸಮಸ್ಯೆಯೇನೂ ಆಗಿಲ್ಲ, ಚೆನ್ನಾಗಿದ್ದಾರೆ, ಕಾನೂನಿನಲ್ಲಿ ಕೊಲೆ ಆರೋಪಿಗೆ ಮನೆಯೂಟಕ್ಕೆ ಅವಕಾಶವಿಲ್ಲ ಎಂಬುದಾಗಿ ನಿರಾಕರಿಸಿದ್ದಾರೆ. ಈ ಮೂಲಕ ನಟ ದರ್ಶನ್ ಗೆ ಮತ್ತೆ ಶಾಕ್ ನೀಡಿದ್ದಾರೆ.

ಈ ಕುರಿತು ಆಗಸ್ಟ್.20ರಂದು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು, ಜೈಲು ಅಧಿಕಾರಿಗಳು ಮನೆಯೂಟ ನಿರಾಕರಣೆ ಮಾಡಲು ಕಾರಣವೇನು ಎನ್ನುವ ಬಗ್ಗೆಯೂ ಆಕ್ಷೇಪಣೆ ಸಲ್ಲಿಸುವ ತಯಾರಿ ನಡೆಸಿದ್ದಾರೆ. ಅಂದು ಕೋರ್ಟ್ ಯಾವ ನಿರ್ದೇಶನ, ಆದೇಶ ಹೊರಡಿಸಲಿದೆ ಎಂದು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com