ಮೈಸೂರು: ಮೈಸೂರು ದಸರಾ ಉತ್ಸವ ಅಕ್ಟೋಬರ್ 3ರಂದು ಉದ್ಘಾಟನೆಯಾಗುತ್ತಿದ್ದು ಅಕ್ಟೋಬರ್ 12ರಂದು ಜಂಬೂಸವಾರಿ ನಡೆಯಲಿದೆ. ಈ ಬಾರಿಯೂ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಜಂಜೂಸವಾರಿ ನಡೆಯಲಿದ್ದು ಅಂಬಾರಿಯನ್ನು ಹೊತ್ತು ಸಾಗಲಿದೆ.
ಅಭಿಮನ್ಯು ಜೊತೆ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ 18 ಆನೆಗಳ ಪಟ್ಟಿ ಬಿಡುಗಡೆಯಾಗಿದ್ದು ಇದರಲ್ಲಿ 13 ಗಂಡು ಮತ್ತು 05 ಹೆಣ್ಣು ಆನೆ ಸೇರಿದೆ. ಜಂಬೂ ಸವಾರಿಯಲ್ಲಿ ಅಭಿಮನ್ಯು ಜೊತೆ 13 ಆನೆ ಭಾಗಿ ಆಗಲಿವೆ.
ಮೊದಲನೇ ತಂಡದಲ್ಲಿ ಅಭಿಮನ್ಯು, ವರಲಕ್ಷ್ಮೀ, ಧನಂಜಯ, ಗೋಪಿ, ಭೀಮ, ಲಕ್ಷ್ಮೀ, ಕಂಜನ್, ರೋಹಿತ್, ಏಕಲವ್ಯ. ಎರಡನೇಯ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮೀ, ಹಿರಣ್ಯ ಮೈಸೂರಿಗೆ ಆಗಮಿಸಲಿದೆ.
ಇನ್ನು ಹರ್ಷ, ಅಯ್ಯಪ್ಪ, ಪಾರ್ಥಸಾರಥಿ, ಮಾಲದೇವಿ ಮೀಸಲು ಆನೆಗಳಾಗಿವೆ. ದಸರಾ ಮಹೋತ್ಸವಕ್ಕೂ 2 ತಿಂಗಳ ಮುಂಚಿತವಾಗಿ ಮೈಸೂರಿಗೆ ಗಜಪಡೆ ಆಗಮಿಸಲಿವೆ. ಆಗಸ್ಟ್ 21ಕ್ಕೆ ಗಜಪಯಣ ನಿಗದಿಯಾಗಿದೆ.
Advertisement