ಅತಿಥಿ ಉಪನ್ಯಾಸಕರ ಕೆಲಸದ ಸಮಯ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

ವಾರದಲ್ಲಿ 8 ಗಂಟೆಯಿದ್ದ ಕೆಲಸದ ಅವಧಿಯನ್ನು 9 ಗಂಟೆಗೆ ಏರಿಸಲಾಗಿದೆ, ಇದರಿಂದ ಸರ್ಕಾರಿ ಕಾಲೇಜುಗಳಿಗೆ 15 ಗಂಟೆ, ಪಾಲಿಟೆಕ್ನಿಕ್‌ಗಳಿಗೆ 17 ಗಂಟೆ ಮತ್ತು ತಾಂತ್ರಿಕ ಶಾಲೆಗಳಿಗೆ 14 ಗಂಟೆಗಳವರೆಗೆ ಗರಿಷ್ಠ ಸಮಯ ನಿಗದಿ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸರ್ಕಾರಿ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳು ಮತ್ತು ಜೂನಿಯರ್ ಪಾಲಿಟೆಕ್ನಿಕ್ ಕಾಲೇಜುಗಳ ಅತಿಥಿ ಉಪನ್ಯಾಸಕರ ಕೆಲಸದ ಸಮಯವನ್ನು ಹೆಚ್ಚಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ವಾರಕ್ಕೆ ಎಂಟು, ಒಂಬತ್ತು ಮತ್ತು ಒಂಬತ್ತು ಗಂಟೆಗಳಿಂದ ಹೆಚ್ಚಿಸಿದೆ.

ವಾರದಲ್ಲಿ 8 ಗಂಟೆಯಿದ್ದ ಕೆಲಸದ ಅವಧಿಯನ್ನು 9 ಗಂಟೆಗೆ ಏರಿಸಲಾಗಿದೆ, ಇದರಿಂದ ಸರ್ಕಾರಿ ಕಾಲೇಜುಗಳಿಗೆ 15 ಗಂಟೆ, ಪಾಲಿಟೆಕ್ನಿಕ್‌ಗಳಿಗೆ 17 ಗಂಟೆ ಮತ್ತು ತಾಂತ್ರಿಕ ಶಾಲೆಗಳಿಗೆ 14 ಗಂಟೆಗಳವರೆಗೆ ಗರಿಷ್ಠ ಸಮಯ ನಿಗದಿ ಮಾಡಲಾಗಿದೆ. ಈ ಕುರಿತು ತಾಂತ್ರಿಕ ಶಿಕ್ಷಣ ಇಲಾಖೆ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಮಾಸಿಕ ಗೌರವಧನ ನಿಗದಿ ಪಡಿಸಲಾಗಿದ್ದು, ತಕ್ಷಣವೇ ಜಾರಿಗೆ ಬರಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ಇಲಾಖೆಯು ಕೆಲವು ಷರತ್ತುಗಳನ್ನು ಹಾಕಿದೆ. 2024-25ನೇ ಶೈಕ್ಷಣಿಕ ವರ್ಷಕ್ಕೆ 1,894 ಅತಿಥಿ ಉಪನ್ಯಾಸಕರನ್ನು ಮಾತ್ರ ನೇಮಕ ಮಾಡಿಕೊಳ್ಳಲಿದೆ, ಇದರಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ 294, ಪಾಲಿಟೆಕ್ನಿಕ್ ಮತ್ತು ಕಿರಿಯ ತಾಂತ್ರಿಕ ಶಾಲೆಗಳಿಗೆ 1,600 ಉಪ್ಯಾಸಕರ ನೇಮಕ ಮಾಡಲಿದೆ. ಅತಿಥಿ ಉಪನ್ಯಾಸಕರ ಗರಿಷ್ಠ ಕೆಲಸದ ಅವಧಿಯನ್ನು ಕಡ್ಡಾಯವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಾಂದರ್ಭಿಕ ಚಿತ್ರ
ಸೇವೆ ಕಾಯಂಗೊಳಿಸುವಂತೆ ಒತ್ತಾಯ; ರಕ್ತದಲ್ಲಿ ಸರ್ಕಾರಕ್ಕೆ ಪತ್ರ ಬರೆದ ಕೊಪ್ಪಳದ ಅತಿಥಿ ಉಪನ್ಯಾಸಕರು

ಐದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಕಾಲ ಸೇವೆ ಸಲ್ಲಿಸಿದ ಮತ್ತು ಅಖಿಲ ಭಾರತ ಟೆಕ್ನಿಕಲ್ ಕೌನ್ಸಿಲ್ ಆಫ್ ಇಂಜಿನಿಯರಿಂಗ್ (ಎಐಟಿಸಿಇ) ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಹೊಂದಿರುವ ಉಪನ್ಯಾಸಕರು 32,000 ರೂ ಗೌರವಧನಕ್ಕೆ ಅರ್ಹರಾಗಿರುತ್ತಾರೆ, ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿನ ಅತಿಥಿ ಉಪನ್ಯಾಸಕರಿಗೆ ಮಾಸಿಕ 28,000 ರೂ. ಗೌರವ ಧನ ನೀಡಲಾಗುತ್ತಿದೆ.

ನಿಗದಿತ ಎಐಟಿಸಿಇ ವಿದ್ಯಾರ್ಹತೆಯನ್ನು ಹೊಂದಿರದ ಮತ್ತು ಐದು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಕ್ರಮವಾಗಿ ಸರ್ಕಾರಿ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ರೂ 30,000 ಮತ್ತು ರೂ 26,000 ಪಾವತಿಸಲಾಗುತ್ತದೆ.

ಐದು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಆದರೆ ಎಐಟಿಸಿಇ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರದ ಸರ್ಕಾರಿ ಕಾಲೇಜುಗಳ ಅತಿಥಿ ಪ್ರಾಧ್ಯಾಪಕರಿಗೆ 28,000 ರೂ. ಹಾಗೂ ಪಾಲಿಟೆಕ್ನಿಕ್ ಸಂಸ್ಥೆಗಳ ಉಪನ್ಯಾಸಕರಿಗೆ 24,000 ಗೌರವಧನ ನೀಡಲಾಗುತ್ತದೆ. ಕಿರಿಯ ತಾಂತ್ರಿಕ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕರು 18,000 ರೂ. ಸಂಭಾವನೆ ಪಡೆಯುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com