ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರೀಗ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಪವಿತ್ರಾ ಗೌಡ ಪುತ್ರಿ ಖುಷಿ ಗೌಡ ಸಧ್ಯ ಸೋಶಿಯಲ್ ಮೀಡಿಯಾ ಮೂಲಕ ತಾಯಿ ಬಗ್ಗೆ ಮಾತನಾಡಿದ್ದಾರೆ. ತನ್ನ ತಾಯಿ ಪವಿತ್ರಾಗೌಡ ಬಗ್ಗೆ ಖುಷಿ ಗೌಡ ಹಾಕಿಕೊಂಡಿರುವ ಪೋಸ್ಟ್ ವೈರಲ್ ಆಗುತ್ತಿದೆ.
ತಾಯಿಯೇ ನನ್ನ ಸ್ಫೂರ್ತಿ, ಸಂದರ್ಭ ಏನೇ ಇರಲಿ ಅವಳು ನನಗೆ ಹೇಗೆ ಗಟ್ಟಿಯಾಗಿ ಇರಬೇಕು ಎಂದು ಹೇಳಿಕೊಟ್ಟಿದ್ದಾಳೆ. ಅವಳು ನನಗೆ ಎಂದಿಗೂ ಬೆಂಬಲವಾಗಿಯೇ ಇದ್ದಳು. ಆಕೆ ನೂರು ಕೋಟಿಯಲ್ಲಿ ಒಬ್ಬಳು. ನನಗೆ ಅಂಥ ವ್ಯಕ್ತಿ ಸಿಗೋದಿಲ್ಲ. ಅವಳಂತ ತಾಯಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ. ಲವ್ ಯು ಅಮ್ಮಾ” ಎಂದು ಖುಷಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸದ್ಯ ಅಜ್ಜ-ಅಜ್ಜಿ, ಮಾವನ ಆರೈಕೆಯಲ್ಲಿ ಬೆಳೆಯುತ್ತಿರುವ ಖುಷಿ ಗೌಡ ಅವರು ತಾಯಿಯ ‘ರೆಡ್ ಕಾರ್ಪೆಟ್ ಸ್ಟುಡಿಯೋ’ವನ್ನು ನೋಡಿಕೊಳ್ಳುತ್ತಿದ್ದಾರಂತೆ. 15 ವರ್ಷದ ಖುಷಿ ಗೌಡ ಅವರು ‘ರೆಡ್ ಕಾರ್ಪೆಟ್ ಸ್ಟುಡಿಯೋ’ದ ಹೊಸ ಡಿಸೈನರ್ ಬಟ್ಟೆಗಳನ್ನು ಅವರ ಅಕೌಂಟ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Advertisement