ರಾಯಚೂರಿನ ಸಿಂಧನೂರಿನಲ್ಲಿರುವ ನಿರಾಶ್ರಿತರ ಶಿಬಿರ
ರಾಯಚೂರಿನ ಸಿಂಧನೂರಿನಲ್ಲಿರುವ ನಿರಾಶ್ರಿತರ ಶಿಬಿರ

ರಾಯಚೂರು: ಬಾಂಗ್ಲಾ ಪುನರ್ವಸತಿ ಕ್ಯಾಂಪ್‌ನ ಐವರಿಗೆ ಪೌರತ್ವ; 13 ಸಾವಿರ ನಿರಾಶ್ರಿತರಿಗೆ ಭರವಸೆಯ ಆಶಾಕಿರಣವಾದ CAA

ಈ ಶಿಬಿರಗಳಲ್ಲಿ ವಾಸಿಸುವ 25,000 ನಿವಾಸಿಗಳಲ್ಲಿ, 13,000 ಕ್ಕೂ ಹೆಚ್ಚು ಜನರು ಭಾರತೀಯ ಪೌರತ್ವವನ್ನು ಹೊಂದಿಲ್ಲ.
Published on

ರಾಯಚೂರು: ಕೇಂದ್ರ ಸರ್ಕಾರ ಈಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಪುನರ್ವಸತಿ ಕ್ಯಾಂಪ್‌ನ ಐವರು ಬಾಂಗ್ಲಾ ನಿರಾಶ್ರಿತರಿಗೆ ಭಾರತದ ಪೌರತ್ವ ಲಭಿಸಿದೆ. ಹೀಗಾಗಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕಳೆದ ಐದು ದಶಕಗಳಿಂದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶಿ ನಿರಾಶ್ರಿತರಿಗೆ ಭರವಸೆಯ ಆಶಾ ಕಿರಣ ಮೂಡಿಸಿದೆ.

ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಿರಾಶ್ರಿತರು ಆರ್ ಎಚ್ ನಂ 1 ರಿಂದ 4 ಶಿಬಿರಗಳಲ್ಲಿ ಮತ್ತು ಬರ್ಮಾ ನಿರಾಶ್ರಿತರು ಆರ್ ಎಚ್ ನಂ 5 ಶಿಬಿರದಲ್ಲಿ ವಾಸಿಸುತ್ತಿದ್ದಾರೆ. 1971ರಲ್ಲಿ ಬಾಂಗ್ಲಾದೇಶದ ವಿಮೋಚನೆಯ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಭಾರತಕ್ಕೆ ವಲಸೆ ಬಂದ ಬಾಂಗ್ಲಾದೇಶಿ ಮತ್ತು ಮ್ಯಾನ್ಮಾರ್ ನಿರಾಶ್ರಿತರಿಗೆ ಸಿಂಧನೂರು ತಾಲೂಕಿನಲ್ಲಿ ವಾಸಿಸಲು ಅವಕಾಶ ನೀಡಿದ್ದರು. ಪ್ರತಿ ಕುಟುಂಬಕ್ಕೆ 5 ಎಕರೆ ಭೂಮಿಯನ್ನು ಕೃಷಿಗಾಗಿ ನೀಡಲಾಯಿತು. ಆರಂಭದಲ್ಲಿ ಕೆಲವರಿಗೆ ಭಾರತೀಯ ಪೌರತ್ವ ನೀಡಲಾಯಿತು.

ಈಗ, ಈ ಶಿಬಿರಗಳಲ್ಲಿ ವಾಸಿಸುವ 25,000 ನಿವಾಸಿಗಳಲ್ಲಿ, 13,000 ಕ್ಕೂ ಹೆಚ್ಚು ಜನರು ಭಾರತೀಯ ಪೌರತ್ವವನ್ನು ಹೊಂದಿಲ್ಲ. ಇಲ್ಲಿನ ನಿವಾಸಿಗಳು ಕಳೆದ ಮೂರು ದಶಕಗಳಿಂದ ಪೌರತ್ವ ಪಡೆಯಲು ಬಯಸುತ್ತಿದ್ದಾರೆ. ತಾಲೂಕು ಮತ್ತು ಜಿಲ್ಲಾಡಳಿತದಿಂದ ನಿವಾಸಿಗಳ ದಾಖಲೆಗಳನ್ನು ಸಲ್ಲಿಸಲಾಗಿದೆ, ಆದರೆ ಇನ್ನೂ ಪೌರತ್ವ ನೀಡಿಲ್ಲ. ಅವರು ಉದ್ಯೋಗ ಮತ್ತು ಶಿಕ್ಷಣ ಪಡೆಯಲು ಹೆಣಗಾಡುತ್ತಿದ್ದು, ಪೌರತ್ವ ಮತ್ತು ಜಾತಿ ಪ್ರಮಾಣ ಪತ್ರಕ್ಕಾಗಿ ಅವರ ಹೋರಾಟ ಮುಂದುವರಿದಿದೆ. ಆದರೆ ಈಗ ಸಿಎಎ ಈ ನಿವಾಸಿಗಳಲ್ಲಿ ಭರವಸೆ ಮೂಡಿಸಿದೆ. ಪೌರತ್ವಕ್ಕಾಗಿ ಇದುವರೆಗೆ 146 ಅರ್ಜಿಗಳು ಸಲ್ಲಿಕೆಯಾಗಿವೆ. ರಾಮಕೃಷ್ಣನ್ ಅಭಿಕಾರಿ, ಸುಕುಮಾರ್ ಮೊಂಡಲ್, ಬಿಪ್ರದಾಸ ಗೋಲ್ಡರ್, ಜಯಂತ್ ಮೊಂಡಲ್ ಮತ್ತು ಅದ್ವಿತ್ ಸೇರಿದಂತೆ ಕೆಲವರಿಗೆ ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯದ ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯವು ಭಾರತೀಯ ಪೌರತ್ವವನ್ನು ನೀಡಿದೆ. ಕೇಂದ್ರದ ಈ ಕ್ರಮ ಇತರರಲ್ಲೂ ಭರವಸೆ ಮೂಡಿಸಿದೆ.

ರಾಯಚೂರಿನ ಸಿಂಧನೂರಿನಲ್ಲಿರುವ ನಿರಾಶ್ರಿತರ ಶಿಬಿರ
ಎನ್ ಆರ್ ಸಿ, ಎನ್ ಪಿ ಆರ್ ಮತ್ತು ಪೌರತ್ವ ಕಾಯಿದೆ ವಿರೋಧಿಸಲು ಪಕ್ಷಗಳಿಗೆ ನ್ಯಾಯಮೂರ್ತಿ ಗೋಪಾಲಗೌಡ ಕರೆ

X

Advertisement

X
Kannada Prabha
www.kannadaprabha.com