ಹುಬ್ಬಳ್ಳಿ: ಪಾಲಿಸ್ಟರ್ ಧ್ವಜದ ಭರಾಟೆ; ಬೆಂಗೇರಿ ಖಾದಿ ಧ್ವಜಕ್ಕೆ ಸಂಚಾಕಾರ; ನಷ್ಟದಲ್ಲಿ ಖಾದಿ ಗ್ರಾಮೋದ್ಯೋಗ ಸಂಸ್ಥೆ

ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ದೇಶದ ಏಕೈಕ ಬಿಐಎಸ್ ಪ್ರಮಾಣೀಕೃತ ರಾಷ್ಟ್ರಧ್ವಜ ತಯಾರಿಕೆ ಕೇಂದ್ರವು ಈ ವರ್ಷದ ವ್ಯಾಪಾರದಲ್ಲಿ ಶೇ. 40-50 ರಷ್ಟು ನಷ್ಟವನ್ನು ಎದುರಿಸುತ್ತಿದೆ. ಇದೇ ಮೊದಲ ಬಾರಿಗೆ ಘಟಕಕ್ಕೆ ನಷ್ಟವಾಗುತ್ತಿದೆ.
ಬೆಂಗೇರಿ ಖಾದಿ ಗ್ರಾಮೋದ್ಯೋಗ  ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ
ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ
Updated on

ಹುಬ್ಬಳ್ಳಿ: ದೇಶದ ವಿವಿಧ ರಾಜ್ಯಗಳಿಗೆ ಖಾದಿ ರಾಷ್ಟ್ರಧ್ವಜವನ್ನು ಒದಗಿಸುವ ಮೂಲಕ ಮಹಾತ್ಮ ಗಾಂಧೀಜಿಯವರ ಕನಸನ್ನು ಸಾಕಾರಗೊಳಿಸಿದ್ದ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯಲ್ಲಿ (ಕೆಕೆಜಿಎಸ್ಎಸ್) ರಾಷ್ಟ್ರ ಧ್ವಜಗಳ ಬೇಡಿಕೆ ಕುಸಿದಿದೆ.

ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ದೇಶದ ಏಕೈಕ ಬಿಐಎಸ್ ಪ್ರಮಾಣೀಕೃತ ರಾಷ್ಟ್ರಧ್ವಜ ತಯಾರಿಕೆ ಕೇಂದ್ರವು ಈ ವರ್ಷದ ವ್ಯಾಪಾರದಲ್ಲಿ ಶೇ. 40-50 ರಷ್ಟು ನಷ್ಟವನ್ನು ಎದುರಿಸುತ್ತಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಹಬ್ಬ ಸಮೀಪದಲ್ಲಿರುವಾಗ ಘಟಕಕ್ಕೆ ನಷ್ಟವಾಗುತ್ತಿದೆ. ಈ ಘಟಕವು ವರ್ಷವಿಡೀ ಖಾದಿಯಲ್ಲಿ ಸಾವಿರಾರು ಕೈಯಿಂದ ನೇಯ್ದ ತ್ರಿವರ್ಣಗಳನ್ನು ಸಿದ್ಧಪಡಿಸುತ್ತದೆ. ಆಗಸ್ಟ್ 15 ಮತ್ತು ಜನವರಿ 26 ರ ಸಮಯದಲ್ಲಿ ಮಾರಾಟವು ಅಧಿಕವಾಗಿರುತ್ತದೆ. ಅದು ಸಂಸತ್ತಿನ ಕಟ್ಟಡವಾಗಲಿ ಅಥವಾ ರಾಷ್ಟ್ರಪತಿ ಭವನವಾಗಲಿ, ಕೆಲವು ಐಕಾನಿಕ್ ಕಟ್ಟಡಗಳ ಮೇಲೆ ಹಾರಾಡುವ ತ್ರಿವರ್ಣ ಧ್ವಜ ಇಲ್ಲಿಂದಲೇ ತಯಾರಾಗುತ್ತದೆ. ಭಾರತದ ಸರಕು ಹಡಗುಗಳು ಕೂಡ ಈ ಘಟಕದಿಂದ ದೊಡ್ಡ ಗಾತ್ರದ ತ್ರಿವರ್ಣಗಳನ್ನು ಆರ್ಡರ್ ಮಾಡುತ್ತವೆ.

ಆದರೆ ಇತ್ತೀಚೆಗೆ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ವ್ಯಾಪಾರದಲ್ಲಿ ಕುಸಿತ ಉಂಟಾಗಿದೆ . 2021 ರಲ್ಲಿ, ಕೇಂದ್ರ ಸರ್ಕಾರವು ಭಾರತೀಯ ರಾಷ್ಟ್ರೀಯ ಧ್ವಜ ನಿಯಮದಲ್ಲಿ ತಿದ್ದುಪಡಿ ಮಾಡಿತು, ಇದರಿಂದಾಗಿ ಖಾಸಗಿ ತಯಾರಕರು ಪಾಲಿಯೆಸ್ಟರ್ ಮತ್ತು ಇತರ ವಸ್ತುಗಳಲ್ಲಿ ತ್ರಿವರ್ಣಗಳನ್ನು ತಯಾರಿಸಲು ಅವಕಾಶ ಮಾಡಿಕೊಟ್ಟಿತು. ಹೀಗಾಗಿ ನಿಯಮಗಳಲ್ಲಿನ ಈ ಬದಲಾವಣೆಯು ಘಟಕದ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರಿದೆ.

ಬೀದಿಗೆ ಬಂತು ಬೆಂಗೇರಿ ಸ್ಲಂ ನಿವಾಸಿಗಳ ಬದುಕು

ತಿದ್ದುಪಡಿಯು ಖಂಡಿತವಾಗಿಯೂ ಈ ಋತುವಿನಲ್ಲಿ ಧ್ವಜ ಮಾರಾಟವನ್ನು ಶೇಕಡಾ 40 ರಷ್ಟು ಕುಂಠಿತಗೊಳಿಸಿದೆ. ಆಗಸ್ಟ್‌ನಲ್ಲಿ 2 ಕೋಟಿ ರೂ.ವರೆಗೆ ವ್ಯಾಪಾರ ಆಗುತ್ತಿತ್ತು. ಆದರೆ ಈ ವರ್ಷ 1.2 ಕೋಟಿ ರೂ. ದಾಟಿಲ್ಲ. ನಮ್ಮಿಂದ ನಿಯಮಿತವಾಗಿ ಧ್ವಜಗಳನ್ನು ಖರೀದಿಸುವ ಅನೇಕ ಸಂಸ್ಥೆಗಳು ಈ ಬಾರಿ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಘಟಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಆದರೆ, ಸರ್ಕಾರಿ ಕಟ್ಟಡಗಳು ಮತ್ತು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಖಾದಿಯಿಂದ ಮಾಡಿದ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಎಂಬ ನಿಯಮ ಮಾಡಬೇಕು ಆಗ ಆ ಎಲ್ಲಾ ಆದೇಶಗಳು ಬೆಂಗೇರಿ ಘಟಕಕ್ಕೆ ಬರುತ್ತವೆ. ಇಲ್ಲಿ ಕೇವಲ ಮಹಿಳಾ ಕಾರ್ಮಿಕರು ಮಾತ್ರ ಇದ್ದಾರೆ. ಅವರು ಪ್ರತಿದಿನ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಧಾರವಾಡ ಮತ್ತು ಬಾಗಲಕೋಟೆಯ ಹಳ್ಳಿಗಳಿಂದ ಕಚ್ಚಾವಸ್ತುಗಳನ್ನು ಖರೀದಿಸಲಾಗುತ್ತದೆ.

ಖಾಸಗಿ ಸಂಸ್ಥೆಗಳಿಗೂ ಸರ್ಕಾರ ಖಾದಿ ಧ್ವಜವನ್ನು ಕಡ್ಡಾಯಗೊಳಿಸಬೇಕು. ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ರ್ಯಾಲಿಗಳಲ್ಲಿ, ನಿರ್ದಿಷ್ಟ ಗಾತ್ರಕ್ಕಿಂತ ಹೆಚ್ಚಿನ ಧ್ವಜಗಳಿಗೆ, ಖಾದಿಯನ್ನು ಕಡ್ಡಾಯಗೊಳಿಸಬೇಕು. ಇದು ಖಾದಿ ಗ್ರಾಮೋದ್ಯೋಗದೊಂದಿಗೆ ದೀರ್ಘಕಾಲ ಸಂಬಂಧ ಹೊಂದಿರುವವರಿಗೆ ಸಹಾಯ ಮಾಡುತ್ತದೆ ಎಂದು ಅಧಿಕಾರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com