ಹಣ ದುರುಪಯೋಗ ಪ್ರಕರಣ: PSI ಶಂಕರ್ ನಾಯಕ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ಧುಗೊಳಿಸಲು ಹೈಕೋರ್ಟ್ ನಕಾರ

ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ರಾಜ್ಯದ ಖಜಾನೆಗೆ ಠೇವಣಿ ಇಡದೆ ಸುಮಾರು ನಾಲ್ಕು ತಿಂಗಳಿಂದ 72 ಲಕ್ಷ ರೂ.ನಗದನ್ನು ತನ್ನ ಬಳಿ ಇಟ್ಟುಕೊಂಡಿದ್ದ ಆರೋಪ ಅವರ ಮೇಲಿದೆ
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ಸದ್ಯ ಬಿಡದಿ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಜಿ ಕೆ ಶಂಕರ್ ನಾಯಕ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ರಾಜ್ಯದ ಖಜಾನೆಗೆ ಠೇವಣಿ ಇಡದೆ ಸುಮಾರು ನಾಲ್ಕು ತಿಂಗಳಿಂದ 72 ಲಕ್ಷ ರೂ.ನಗದನ್ನು ತನ್ನ ಬಳಿ ಇಟ್ಟುಕೊಂಡಿದ್ದ ಆರೋಪ ಅವರ ಮೇಲಿದೆ. ಹೊಸಕೋಟೆ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣದಲ್ಲಿ ಹಣವನ್ನು ಅವರು ವಶಪಡಿಸಿಕೊಂಡರು, ಆದರೆ ಅವರು ಅದನ್ನು ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಂತೆ ಕೇಸ್ ದಾಖಲಿಸಿದ್ದರು.

ನನ್ನ ವಿರುದ್ಧ 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆ ರದ್ದುಗೊಳಿಸಬೇಕು ಎಂದು ಕೋರಿ ಶಂಕರ ನಾಯಕ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ. ರಾಜ್ಯ ಪ್ರಾಸಿಕ್ಯೂಟರ್ ಬಿ.ಎ.ಬೆಳ್ಳಿಯಪ್ಪ ಅವರು ಮಂಡಿಸಿದ, ಶಂಕರ್ ನಾಯಕ್ ಅವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಕರ್ತವ್ಯ ಲೋಪ, ನಿರ್ಲಕ್ಷ್ಯ ಹಾಗೂ ಉದ್ಧಟತನ ತೋರಿದ್ದಾರೆ ಎಂಬ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ಶಂಕರ್‌ ನಾಯಕ್‌ ಬೃಹತ್‌ ಮೊತ್ತವನ್ನು ಖಜಾನೆಗೆ ಜಮೆ ಮಾಡದೆ, ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಹೀಗಾಗಿ, ಪ್ರಕರಣದ ತನಿಖೆ ನಡೆಯಬೇಕು ಎಂದು ಆದೇಶದಲ್ಲಿ ವಿವರಿಸಿದೆ.

ಶಂಕರ್ ನಾಯಕ್‌ ಬ್ಯಾಟರಾಯನಪುರ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ, ತಮ್ಮ ವ್ಯಾಪ್ತಿಗೆ ಸೇರದ ಸ್ಥಳದಲ್ಲಿ ನಡೆದಿದ್ದ ಕಳ್ಳತನದ ಸಂಬಂಧ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯನ್ನು ಬಂಧಿಸಿ 72 ಲಕ್ಷ ರು. ಜಪ್ತಿ ಮಾಡಿದ್ದರು. ಇದಾದ ನಂತರ, ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು. ದೂರುದಾರರಿಗೆ ವಾಪಸು ಕೊಟ್ಟಿರಲಿಲ್ಲ. ಜೊತೆಗೆ, 20 ಲಕ್ಷ ಲಂಚಕ್ಕೂ ಬೇಡಿಕೆ ಇಟ್ಟಿದ್ದರು’ ಎಂಬ ಆರೋಪಗಳನ್ನು ಆಧರಿಸಿ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 110, 201, 409,465 ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 7ರ ಅಡಿಯಲ್ಲಿನ ಅಪರಾಧಗಳಿಗೆ ವಿಚಾರಣೆ ಎದುರಿಸುತ್ತಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿದ ತನಿಖಾಧಿಕಾರಿ, ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅರ್ಜಿದಾರರು ವಿಶ್ರಾಂತಿ ಪಡೆದ ನಂತರ ಪೊಲೀಸ್ ಠಾಣೆಗೆ ಬರುವುದು, ನಗದು ಹೊಂದಿರುವ ಬ್ಯಾಗ್ ಇರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂಬುದನ್ನು ಗಮನಿಸಿದ್ದಾರೆ. ಮರುದಿನ ಆದಾಯ ತೆರಿಗೆ ಅಧಿಕಾರಿಗಳು ಮೊತ್ತವನ್ನು ವಶಕ್ಕೆ ತೆಗೆದುಕೊಂಡಿದ್ದರು. ನಮೂದಾಗಿರುವ ಹಣದಲ್ಲಿ ಕರೆನ್ಸಿ ನೋಟುಗಳ ಮುಖಬೆಲೆಯಲ್ಲಿ ಬದಲಾವಣೆ ಕಂಡುಬಂದಿದೆ.

ಹೈಕೋರ್ಟ್
ರಾಮನಗರದ ವಕೀಲರ ವಿರುದ್ಧ ಎಫ್ಐಆರ್ ಪ್ರಕರಣ: ಐಜೂರು ಪೊಲೀಸ್ ಠಾಣೆ ಪಿಎಸ್​ಐ ತನ್ವೀರ್ ಹುಸೇನ್ ಅಮಾನತು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com