
ಹೊಸಪೇಟೆ: ತುಂಗಭದ್ರಾ ಅಣೆಕಟ್ಟಿನ ಒಡೆದ ಕ್ರಸ್ಟ್ ಗೇಟ್ ನಿಂದ ನೀರು ಹೊರ ಹೋಗದಂತೆ ತಡೆಯಲು ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಗುರುವಾರವೂ ಸಫಲವಾಗಲಿಲ್ಲ. ಸ್ಟಾಪ್‌ಲಾಗ್‌ಗಳನ್ನು ಅಳವಡಿಸಲು ಅಣೆಕಟ್ಟಿನ ಒಂದು ಬೀಮ್ ಅಡ್ಡಿಯಾಗುತ್ತಿದೆ ಎಂದು ಕೆಲವು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
JSW ಉಕ್ಕು ಮತ್ತು ಇತರ ಎರಡು ಎಂಜಿನಿಯರಿಂಗ್ ಕಂಪನಿಗಳು ವಿನ್ಯಾಸಗೊಳಿಸಿದ 4x20 ಚದರ ಅಡಿ ವಿಸ್ತೀರ್ಣದ ಮೂರು ಕಬ್ಬಿಣದ ಪ್ಲೇಟ್ ಗಳನ್ನು ತಂದು ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಅವುಗಳ ಸಣ್ಣ ಗಾತ್ರದ ವ್ಯತ್ಯಾಸದಿಂದ ಹೊಸ ಕ್ರೆಸ್ಟ್ ಗೇಟ್ ಅನ್ನು ಸರಿಪಡಿಸಲು ಕಷ್ಟಕರವಾಗಿದೆ.
ತಜ್ಞರ ತಂಡ ಗುರುವಾರ ಸಂಜೆಯವರೆಗೆ ಕ್ರಸ್ಟ್ ಗೇಟ್ ನ ತಳದಲ್ಲಿ ಕ್ರೇನ್ ಬಳಸಿ ಸ್ಟಾಪ್‌ಲಾಗ್ ಅಳವಡಿಸಲು ಪ್ರಯತ್ನಿಸಿತು. ಆದರೆ, ಸಫಲವಾಗದ ಹಿನ್ನೆಲೆಯಲ್ಲಿ ಇಂದು ಕೂಡಾ ಅಳವಡಿಕೆ ಕಾರ್ಯ ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಸಂಜೆಯವರೆಗೆ ಕ್ರೆಸ್ಟ್ ಗೇಟ್ 19 ರ ಸ್ಟಾಪ್‌ಲಾಗ್ ಸರಿಪಡಿಸಲು ಎಲ್ಲಾ ಪ್ರಯತ್ನ ಮಾಡಿದ್ದೇವೆ. ಕೆಲವು ತಾಂತ್ರಿಕ ಸಮಸ್ಯೆಗಳಿದ್ದರೂ ಇದು ಯಶಸ್ವಿಯಾಗುತ್ತದೆ ಎಂದು ಭಾವಿಸಿರುವುದಾಗಿ ಅವರು ಹೇಳಿದ್ದಾರೆ. ಒಂದು ಸ್ಟಾಪ್‌ಲಾಗ್ 25 ಕ್ಯೂಸೆಕ್ ನೀರಿನ ಹೊರಹರಿವನ್ನು ನಿಲ್ಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಗೇಟ್ ಕೊಚ್ಚಿಹೋದ ನಂತರ ಅಣೆಕಟ್ಟಿನಿಂದ 25 ಟಿಎಂಸಿ ಅಡಿ ನೀರು ಹೊರಹರಿವು ವರದಿಯಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಅಣೆಕಟ್ಟೆಯಲ್ಲಿ 76 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ನೀರಿನ ಹೊರಹರಿವು ತಡೆಯಲು ತಜ್ಞರ ತಂಡ ಶ್ರಮಿಸುತ್ತಿದೆ.
Advertisement