ಕೊಪ್ಪಳ: ಜಾತಿ ವ್ಯವಸ್ಥೆಯ ಪೆಂಡಭೂತ ಇನ್ನೂ ಹಳ್ಳಿಗಳಲ್ಲಿ ಜೀವಂತವಾಗಿದೆ ಎಂಬುದಕ್ಕೆ ಇಂದು ಕೊಪ್ಪಳ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ.ಕ್ಷೌರಕ್ಕಾಗಿ ನಡೆದ ವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಸಂಗನಾಳ ಗ್ರಾಮದ 46 ವರ್ಷದ ಮುತ್ತಣ್ಣ ಹಡಪದ ಎಂಬ ವ್ಯಕ್ತಿಯ ಕಟಿಂಗ್ ಶಾಪ್‌ಗೆ ದಲಿತ ಸಮುದಾಯದ 26 ವರ್ಷದ ಯಮನೂರಸ್ವಾಮಿ ಎನ್ನುವ ಯುವಕ ಕ್ಷೌರ ಮಾಡಿಸಲು ಹೋಗಿದ್ದಾನೆ. ನೀನು ದಲಿತ ಕಟ್ಟಿಂಗ್ ಮಾಡುವುದಿಲ್ಲ ಎಂದು ಮುದುಕಪ್ಪ ಹೇಳಿದ್ದಾನೆ.
ಇದರಿಂದ ಕೋಪಗೊಂಡ ಯುವಕ ಮತ್ತು ಕ್ಷೌರಿಕನ ಮಧ್ಯೆ ಮಾತಿಗೆ ಮಾತು ಬೆಳೆದು ಯಮನೂರಸ್ವಾಮಿ ಕೊಲೆಯಲ್ಲಿ ಅಂತ್ಯವಾಗಿದೆ. ಯಮನೂರಸ್ವಾಮಿ ಕಟಿಂಗ್‌ಗೆ ಬಂದಾಗ ಮುತ್ತಣ್ಣ ನಿಂದಿಸಿ, ನಿಮಗೆ ಕಟಿಂಗ್ ಮಾಡೋದ ದೊಡ್ಡ ತ್ರಾಸು, ಅಂತದರೊಳಗ ದುಡ್ಡಿಲ್ಲದ ಹೇಗೆ ಮಾಡಬೇಕು ಎಂದಿದ್ದಾನೆ.
ಅದಕ್ಕೆ ಯಮನೂರಸ್ವಾಮಿ ನಮ್ಮ ಜಾತಿ ಬಗ್ಗೆ ಮಾತನಾಡಬೇಡ. ನಮ್ಮಣ್ಣ ಊರಲ್ಲಿ ಇಲ್ಲ. ಆತ ಬಂದ ಮೇಲೆ ಹಣ ಕೊಡುತ್ತೇನೆ ಮೊದಲು ಕಟಿಂಗ್ ಮಾಡು ಎಂದಿದ್ದಕ್ಕೆ ಮುತ್ತಣ್ಣ ಏಕಾಏಕಿ ಯಮನೂರಸ್ವಾಮಿಯ ಜತೆಗೆ ಜಗಳ ತೆಗೆದಿದ್ದಾನೆ. ಜಾತಿನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕತ್ತರಿಯಿಂದ ಹೊಟ್ಟೆಗೆ ಚುಚ್ಚಿ ಸಾಯಿಸಿದ್ದಾನೆ ಎಂದು ಮೃತ ಯಮನೂರಸ್ವಾಮಿ ಅಣ್ಣ ಹನುಮಂತ ಬಂಡಿಹಾಳ ನೀಡಿದ ದೂರಿನ ಮೇಲೆ ಯಲಬುರ್ಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಮುತ್ತಣ್ಣ ಹಡಪದನನ್ನು ಬಂಧಿಸಲಾಗಿದೆ.
Advertisement