ಮೈಸೂರು ದಸರಾ: ಗಜ ಪಯಣಕ್ಕೆ ಕೊಡಗಿನಿಂದ ಹೊರಟ ಐದು ಆನೆ

ದುಬಾರೆ ಕ್ಯಾಂಪ್‌ನಿಂದ ಒಟ್ಟು ಏಳು ಆನೆಗಳು ಈ ವರ್ಷ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಲಿವೆ. ಇಂದು ಕಂಜನ್, ಧನಂಜಯ ಹಾಗೂ ಗೋಪಿ ಸಾಕಾನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.
ಕೊಡಗಿನಿಂದ ಹೊರಟ ಐದು ಆನೆ
ಕೊಡಗಿನಿಂದ ಹೊರಟ ಐದು ಆನೆ
Updated on

ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಡಗಿನಿಂದ ಐದು ಆನೆಗಳು ಮಂಗಳವಾರ ಗಜಪಯಣಕ್ಕೆ ಪ್ರಯಾಣ ಬೆಳೆಸಿದವು. ಮೊದಲ ಸುತ್ತಿನಲ್ಲಿ ದುಬಾರೆ ಆನೆ ಶಿಬಿರದಿಂದ ಮೂರು ಆನೆಗಳು ಹಾಗೂ ಕೊಡಗಿನ ಮತ್ತಿಗೋಡು ಆನೆ ಶಿಬಿರದಿಂದ ಎರಡು ಆನೆಗಳು ವೀರನ ಹೊಸಹಳ್ಳಿ ಆನೆ ಶಿಬಿರಕ್ಕೆ ತೆರಳಿದವು. ಅಲ್ಲಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ತೆರಳಲಿವೆ.

ಮೂಲಗಳ ಪ್ರಕಾರ, ದುಬಾರೆ ಕ್ಯಾಂಪ್‌ನಿಂದ ಒಟ್ಟು ಏಳು ಆನೆಗಳು ಈ ವರ್ಷ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಲಿವೆ. ಇಂದು ಕಂಜನ್, ಧನಂಜಯ ಹಾಗೂ ಗೋಪಿ ಸಾಕಾನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಆನೆಗಳೊಂದಿಗೆ ಮಾವುತರು ಮತ್ತು ಸಹಾಯಕರಾದ ವಿಜಯ್, ಅನಿಲ್, ಭಾಸ್ಕರ್, ರಾಜಣ್ಣ, ನವೀನ್ ಮತ್ತು ಶಿವು ತೆರಳಿದರು.

ಪ್ರಶಾಂತ್, ಹರ್ಷ, ಸುಗ್ರೀವ ಮತ್ತು ಅಯ್ಯಪ್ಪ ಸೇರಿದಂತೆ ಶಿಬಿರದ ನಾಲ್ಕು ಆನೆಗಳನ್ನು ಈ ವರ್ಷ ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ ಎಂದು ದುಬಾರೆ ಆರ್‌ಎಫ್‌ಒ ರಂಜನ್ ಅವರು ಖಚಿತಪಡಿಸಿದ್ದಾರೆ.

ಕೊಡಗಿನಿಂದ ಹೊರಟ ಐದು ಆನೆ
ಮೈಸೂರು ದಸರಾ 2024: ಜನರ ಉತ್ಸವ ಆಗಬೇಕು, ಈ ಬಾರಿ ಅದ್ದೂರಿಯಾಗಿ ಆಚರಣೆ- ಸಿಎಂ ಸಿದ್ದರಾಮಯ್ಯ

ಇತರ ಆನೆಗಳು ಈ ಹಿಂದೆ ಉತ್ಸವದಲ್ಲಿ ಪಾಲ್ಗೊಂಡಿದ್ದರೆ, ಅಯ್ಯಪ್ಪ ಆನೆ ಈ ವರ್ಷ ಮೊದಲ ಬಾರಿಗೆ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದೆ.

ಇದೇ ವೇಳೆ ಜಿಲ್ಲೆಯ ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಮತ್ತು ಭೀಮಾ ಆನೆಗಳು ವೀರನ ಹೊಸಹಳ್ಳಿಗೆ ತೆರಳಿದವು. ಅದೇ ಶಿಬಿರದ ಮತ್ತೊಂದು ಆನೆ ಮಹೇಂದ್ರ ನಂತರ ಗಜಪಡೆ ಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com