ವಿವಾಹಿತ ಮಹಿಳೆಗೆ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಅತ್ಯಾಚಾರ: ಇಸ್ಲಾಂ ಧರ್ಮಕ್ಕೆ ಮತಾಂತರಕ್ಕೆ ಒತ್ತಾಯ; ವ್ಯಕ್ತಿಯ ಜಾಮೀನು ಅರ್ಜಿ ತಿರಸ್ಕಾರ

ಮುಗ್ಧ ಮತ್ತು ಬಡ ಮಹಿಳೆಯರನ್ನು ಪ್ರೇರೇಪಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸುವ ಕ್ರಮವು ಗಂಭೀರ ಬೆಳವಣಿಗೆಯಾಗಿದೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: 28 ವರ್ಷದ ವಿವಾಹಿತ ಮಹಿಳೆಗೆ ಕೆಲಸ ಕೊಡಿಸುವ ಆಮೀಷವೊಡ್ಡಿ, ಅತ್ಯಾಚಾರವೆಸಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದ 33 ವರ್ಷದ ವ್ಯಕ್ತಿಯ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.

ಮುಗ್ಧ ಮತ್ತು ಬಡ ಮಹಿಳೆಯರನ್ನು ಪ್ರೇರೇಪಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸುವ ಕ್ರಮವು ಗಂಭೀರ ಬೆಳವಣಿಗೆಯಾಗಿದೆ. ಆದ್ದರಿಂದ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಸಮಾಜದ ಮುಗ್ಧ ಮತ್ತು ಹಿಂದುಳಿದ ಮಹಿಳೆಯರು ಹಾಗ ಮಕ್ಕಳನ್ನು ರಕ್ಷಿಸಲು ನ್ಯಾಯಾಲಯಗಳು ಜಾಗೃತವಾಗಿವೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವುದು ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ರಾಚಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗ್ರಾಮವೊಂದರ ಕೃಷಿಕ ರಫೀಕ್ ಅಕಾ ಲಾಲಸಾಬ್ ಬೇಪಾರಿ (33) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಮೇ 2024 ರಲ್ಲಿ ಬೆಳಗಾವಿಯ ಸೆಷನ್ಸ್ ನ್ಯಾಯಾಲಯವು ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಆರೋಪಿಯು ಹೈಕೋರ್ಟ್‌ಗೆ ಮೊರೆ ಹೋಗಿದ್ದ. ಆತನ ವಿರುದ್ಧ ಐಪಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹೈಕೋರ್ಟ್
ಬೆಳಗಾವಿ ಅಧಿವೇಶನ: ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆಗೆ ಡಿ.ಕೆ.ಶಿವಕುಮಾರ್ ವಿರೋಧ

ಸಂತ್ರಸ್ತೆ 2013ರಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಗಂಡನ ಮನೆಯಲ್ಲಿ ಚಿಲ್ಲರೆ ಅಂಗಡಿಯಿತ್ತು. ಅತ್ತೆ ಅಂಗಡಿ ನೋಡಿಕೊಳ್ಳುತ್ತಿದ್ದರು, ಅತ್ತೆ ಮನೆಗೆ ಊಟಕ್ಕೆ ಹೋದ ಸಮಯದಲ್ಲಿ ಸಂತ್ರಸ್ತೆ ಮಹಿಳೆ ಚಿಲ್ಲರೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದಳು. ಅಂಗಡಿಗೆ ಬರುತ್ತಿದ್ದ ರಫೀಕ್ ಸಂತ್ರಸ್ತೆಗೆ ಹತ್ತಿರವಾದ.

ಆಕೆಯ ಮೊಬೈಲ್ ನಂಬರ್ ಕೇಳಿದಾಗ ಆಕೆ ನೀಡಲು ನಿರಾಕರಿಸಿದ್ದಾಳೆ. ನಂತರ, ಅವನು ಅವಳ ನೆರೆಹೊರೆಯವರಿಂದ ಅವಳ ಸಂಖ್ಯೆಯನ್ನು ತೆಗೆದುಕೊಂಡು ಆಗಾಗ್ಗೆ ಮಾತನಾಡುತ್ತಿದ್ದ. ಜೊತೆಗೆ ಅವಳಿಗೆ ಬ್ಯಾಂಕ್ ಉದ್ಯೋಗವನ್ನುಕೊಡಿಸುವ ಆಮೀಷವೊಡ್ಡಿದ್ದ. ಕೊನೆಗೆ ಮಹಿಳೆಯೊಂದಿಗೆ ರಫೀಕ್ ಅನೈತಿಕ ಸಂಬಂಧ ಆರಂಭಿಸಿದ್ದು ಆಕೆಯ ಪತಿಗೆ ತಿಳಿಯಿತು.ವಿಷಯ ತಿಳಿದ ಪತಿ ಒಕೆಯನ್ನು 2021 ರಲ್ಲಿ ಆಕೆಯ ಪೋಷಕರ ಮನೆಗೆ ಕಳುಹಿಸಿದನು. ಗ್ರಾಮದ ಹಿರಿಯರ ಮಧ್ಯಸ್ಥಿಕೆಯಿಂದ, ಮಹಿಳೆ ತನ್ನ ಪತಿಯೊಂದಿಗೆ ಮತ್ತೆ ಸೇರಿಕೊಂಡಳು.

ಆರೋಪಿಯು ಆಕೆಯನ್ನು ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದ, ಆಕೆ ತನಗೆ ಲೈಂಗಿಕ ಸುಖ ನೀಡದಿದ್ದರೆ ಆಕೆಯ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಹೇಳಿದ್ದಾರೆ. ನಂತರ ಮಹಿಳೆಯನ್ನು ಆಕೆಯ ಗ್ರಾಮದಿಂದ ಬೆಳಗಾವಿಯ ಸ್ವಾದರ್ ಕೇಂದ್ರಕ್ಕೆ ಕರೆತಂದಿದ್ದು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com