ವಿಮಾನ ನಿಲ್ದಾಣ ಮತ್ತು ಬೆಂಗಳೂರು ಸಿಟಿ ನಡುವಣ ಕ್ಯಾಬ್ ಸೇವೆಗಳ ದರ ಮತ್ತೆ ಏರಿಕೆ!

ಓಲಾ, ಉಬರ್- ಬಿಐಎಎಲ್ ನಡುವಿನ ಹೊಸ ಒಪ್ಪಂದ ಜಾರಿಯಾಗಿರುವುದರಿಂದ ಇತ್ತೀಚೆಗೆ ಕ್ಯಾಬ್ ಸೇವೆಗಳ ದರ ಮತ್ತೊಮ್ಮೆ ಹೆಚ್ಚಳವಾಗಿದೆ.
Uber app (L) and Ola cabs
ಓಲಾ-ಉಬರ್online desk
Updated on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- ಬೆಂಗಳೂರು ನಗರದ ನಡುವಿನ ಕ್ಯಾಬ್ ಸೇವೆಗಳ ದರ ಸದ್ದಿಲ್ಲದೇ ಹೆಚ್ಚಳವಾಗಿದೆ.

ಓಲಾ, ಉಬರ್- ಬಿಐಎಎಲ್ ನಡುವಿನ ಹೊಸ ಒಪ್ಪಂದ ಜಾರಿಯಾಗಿರುವುದರಿಂದ ಇತ್ತೀಚೆಗೆ ಕ್ಯಾಬ್ ಸೇವೆಗಳ ದರ ಮತ್ತೊಮ್ಮೆ ಹೆಚ್ಚಳವಾಗಿದೆ.

ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಓಲಾ, ಉಬರ್- ಬಿಐಎಎಲ್ ನಡುವೆ ಈ ಹಿಂದೆ ಇದ್ದ 3 ವರ್ಷಗಳ ಒಪ್ಪಂದ ಅಂತ್ಯಗೊಂಡಿದ್ದು, ಒಪ್ಪಂದವನ್ನು ನೀಡಲು ಹೊಸ ಟೆಂಡರ್ ಕರೆಯಲಾಗಿತ್ತು. ಇದರಿಂದ ಕ್ಯಾಬ್ ಆಪರೇಟರ್‌ಗಳಿಗೆ ಹೆಚ್ಚು ವೆಚ್ಚದಾಯಕವಾಗಿದೆ, ಆದ್ದರಿಂದ ಅವರು ದರಗಳಲ್ಲಿ ಹೆಚ್ಚಳ ಮಾಡಿದ್ದಾರೆ. ಉಬರ್‌ಗೆ ಬಿಐಎಎಲ್ ವಿಧಿಸುವ ಏರ್‌ಪೋರ್ಟ್ ಪಿಕ್-ಅಪ್ ಶುಲ್ಕವು ರೂ 187.62 ರಿಂದ ರೂ 260.78 ಕ್ಕೆ ಏರಿದೆ.

ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಉಬರ್ ನ ಬಿಲ್‌ಗಳನ್ನು ಬಹಿರಂಗಪಡಿಸಿದ್ದಾರೆ. ಆದರೆ ಓಲಾದ ಹೆಚ್ಚಳ ಸ್ಪಷ್ಟವಾಗಿಲ್ಲ. ಪ್ರಯಾಣ ದರ ಹೆಚ್ಚಳದ ದಿನಾಂಕದ ಬಗ್ಗೆ ಯಾರಿಗೂ ಖಚಿತವಾದ ಮಾಹಿತಿ ಇಲ್ಲ.

ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಂದ ಸಂಗ್ರಹಿಸಲಾದ ಹೆಚ್ಚಿನ ದರಗಳಿಂದ ಅಗ್ರಿಗೇಟರ್ ಪ್ರಯೋಜನ ಪಡೆಯುವುದಿಲ್ಲ ಎಂದು ಉಬರ್ ವಕ್ತಾರರು ತಿಳಿಸಿದ್ದಾರೆ. “Uber ನಲ್ಲಿನ ಎಲ್ಲಾ ವಿಮಾನ ನಿಲ್ದಾಣ ಪ್ರಯಾಣಕ್ಕೆ, ವಿಮಾನ ನಿಲ್ದಾಣಗಳೊಂದಿಗಿನ ನಮ್ಮ ವಾಣಿಜ್ಯ ಒಪ್ಪಂದದ ಭಾಗವಾಗಿ ಪಿಕಪ್ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕವನ್ನು ವಿಮಾನ ನಿಲ್ದಾಣದ ನಿರ್ವಾಹಕರಿಗೆ ವರ್ಗಾಯಿಸಲಾಗುತ್ತದೆ. ಉಬರ್ ಈ ಶುಲ್ಕಗಳನ್ನು ಉಳಿಸಿಕೊಂಡಿಲ್ಲ, ”ಎಂದು ಅವರು ಹೇಳಿದರು.

Uber app (L) and Ola cabs
ಬೆಂಗಳೂರಿಗೆ 2 ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 7 ಸ್ಥಳಗಳು ಪಟ್ಟಿಯಲ್ಲಿ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com