ಮಹಾರಾಷ್ಟ್ರ: ಹೊಸ ಅನುಭವ ಮಂಟಪ ಸರ್ವ ಧರ್ಮಗಳಿಗೂ ಮುಕ್ತ

ಈ ಆಧುನಿಕ ಕಟ್ಟಡವು ಎಂಟರಿಂದ ಒಂಬತ್ತು ಶತಮಾನಗಳ ಹಿಂದೆ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಸಮಾಜ ಸುಧಾರಕ ಬಸವಣ್ಣ ಸ್ಥಾಪಿಸಿದ ಮೊದಲ ಅನುಭವ ಮಂಟಪಕ್ಕೆ ಗೌರವ ಸಲ್ಲಿಸುತ್ತದೆ. ಅನುಭವ ಮಂಟಪದಲ್ಲಿ ನಾಲ್ಕು ಕಂಬಗಳನ್ನು ನಿರ್ಮಿಸಿದ್ದು ಕಾಣಬಹುದು.
ಮಹಾರಾಷ್ಟ್ರದ ಅನುಭವ ಮಂಟಪ
ಮಹಾರಾಷ್ಟ್ರದ ಅನುಭವ ಮಂಟಪ
Updated on

ಬೆಂಗಳೂರು: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಔರಂಗಾಬಾದ್ ಜಿಲ್ಲೆಯ ದಹೆಗಾಂವ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಅನುಭವ ಮಂಟಪ ಎಲ್ಲರ ಗಮನ ಸೆಳೆಯುತ್ತಿದೆ.

ಈ ಆಧುನಿಕ ಕಟ್ಟಡವು ಎಂಟರಿಂದ ಒಂಬತ್ತು ಶತಮಾನಗಳ ಹಿಂದೆ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಸಮಾಜ ಸುಧಾರಕ ಬಸವಣ್ಣ ಸ್ಥಾಪಿಸಿದ ಮೊದಲ ಅನುಭವ ಮಂಟಪಕ್ಕೆ ಗೌರವ ಸಲ್ಲಿಸುತ್ತದೆ. ಅನುಭವ ಮಂಟಪದಲ್ಲಿ ನಾಲ್ಕು ಕಂಬಗಳನ್ನು ನಿರ್ಮಿಸಿದ್ದು ಕಾಣಬಹುದು. ಅವಕ್ಕೆ ಇಷ್ಟಲಿಂಗ, ಕಾಯಕ, ದಾಸೋಹ ಮತ್ತು ಸಮಾನತೆ ಎಂದು ಹೆಸರು ಕೊಡಲಾಗಿದೆ. ಹೊಸ ಅನುಭವ ಮಂಟಪವನ್ನು ಬಸವಣ್ಣನವರ ನಿಷ್ಠಾವಂತ ಅನುಯಾಯಿ ವೀರೇಂದ್ರ ಮಂಗಲ್ಗೆ ನಿರ್ಮಿಸಿದ್ದಾರೆ. ಟಿಎನ್‌ಐಇ ಜತೆ ದೂರವಾಣಿ ಮೂಲಕ ಮಾತನಾಡಿದ ಮಂಗಲ್ಗೆ ಅವರು ಬಸವಣ್ಣನವರ ಬೋಧನೆಗಳ ಮಹತ್ವವನ್ನು ತಿಳಿಸಿದರು.

ಬಸವ ತತ್ವದ ಬಗ್ಗೆ ಎಲ್ಲ ಧರ್ಮ, ಹಿನ್ನೆಲೆಯಲ್ಲೂ ಜಾಗೃತಿ ಮೂಡಿಸುವುದು ಅಗತ್ಯ ಎಂದರು. ಗೋವಿಂದ ಪನ್ಸಾರೆ, ನರೇಂದ್ರ ದಾಭೋಲ್ಕರ್ ಮತ್ತು ಎಂಎಂ ಕಲಬುರ್ಗಿ ಅವರ ದುರಂತ ಹತ್ಯೆಗಳಿಂದ ಸಮಾಜ ನೊಂದಿದೆ. ಬಸವಣ್ಣ ಬೋಧಿಸಿದ ಧರ್ಮವನ್ನು ಅನುಸರಿಸುವುದು ಅಗತ್ಯ ಎಂದು ಹೇಳಿದ್ದಾರೆ. ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸುಮಾರು 70 ಲಕ್ಷ ರು ಖರ್ಚಾಗಿದೆ. ಭೂಮಿಗೆ 20 ಲಕ್ಷ ರೂ. ಹಾಗೂ ಕಟ್ಟಡ ನಿರ್ಮಾಣಕ್ಕೆ 40-50 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಅನುಭವ ಮಂಟಪವು ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾಗಿದೆ. ಅನುಭವ ಮಂಟಪವನ್ನು ಯಾವುದೇ ಜಾತಿ ಧರ್ಮದ ಬಳಕೆಗೆ ಸೀಮಿತಗೊಳಿಸದೆ, ಸಕಲರಿಗೂ ಇದರ ಬಳಕೆ ಮಾಡಿಕೊಳ್ಳುವ, ಸಮಾಜಮುಖಿ ಕಾರ್ಯಗಳಿಗೆ ಅವಕಾಶ ಮಾಡಿಕೊಡಲಾಗುವುದು. ಮಂಟಪದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ಬಸವ ಸಮಿತಿಯ ಡಾ.ಅರವಿಂದ ಜತ್ತಿ ವಹಿಸಿದ್ದರು.

ಮಹಾರಾಷ್ಟ್ರದ ಅನುಭವ ಮಂಟಪ
ಎರಡು ವರ್ಷಗಳ ನಂತರ 600 ಕೋಟಿ ರೂ. ವೆಚ್ಚದ ಅನುಭವ ಮಂಟಪ ಕಾಮಗಾರಿ ಆರಂಭ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com