ಕಾಂಗ್ರೆಸ್ MLC ಐವಾನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ; ಇಬ್ಬರ ಬಂಧನ

ಬಂಧಿತ ಆರೋಪಿಗಳನ್ನು ಭರತ್ ಅಲಿಯಾಸ್ ಯಕ್ಷಿತ್ ಮತ್ತು ದಿನೇಶ್ ಕುರ್ತಮೊಗೇರು ಎಂದು ಗುರುತಿಸಲಾಗಿದೆ.
ಕಾಂಗ್ರೆಸ್ ಎಂಎಲ್ ಸಿ ಐವಾನ್ ಡಿಸೋಜಾ
ಕಾಂಗ್ರೆಸ್ ಎಂಎಲ್ ಸಿ ಐವಾನ್ ಡಿಸೋಜಾ
Updated on

ಮಂಗಳೂರು: ಕಾಂಗ್ರೆಸ್ ಎಂಎಲ್ ಸಿ ಐವಾನ್ ಡಿಸೋಜಾ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ಬುಧವಾರ ಇಬ್ಬರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಭರತ್ ಅಲಿಯಾಸ್ ಯಕ್ಷಿತ್ ಮತ್ತು ದಿನೇಶ್ ಕುರ್ತಮೊಗೇರು ಎಂದು ಗುರುತಿಸಲಾಗಿದೆ.

ಮುಡಾ ಸೈಟ್ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲ ನಡೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಐವಾನ್ ಡಿಸೋಜಾ ಅವರು, ಬಾಂಗ್ಲಾದಲ್ಲಿ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆದಂತೆಯೇ ಇಲ್ಲಿಯೂ ನಿಮಗೆ ಆಗಲಿದೆ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿತ್ತು.

ಕಾಂಗ್ರೆಸ್ ಎಂಎಲ್ ಸಿ ಐವಾನ್ ಡಿಸೋಜಾ
ಮಂಗಳೂರು: ಎಂಎಲ್ ಸಿ ಐವಾನ್ ಡಿಸೋಜಾ ನಿವಾಸದ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು!

20 ರಂದು ಇಬ್ಬರು ವ್ಯಕ್ತಿಗಳು ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. "ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಐವಾನ್ ಡಿಸೋಜಾ ಹೇಳಿಕೆಯಿಂದ ಆಕ್ರೋಶಗೊಂಡು ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 9.30 ರ ಸುಮಾರಿಗೆ ಹೋಟೆಲ್‌ನಲ್ಲಿ ಊಟ ಮಾಡಿದ ನಂತರ ಹಠಾತ್ ಆಗಿ ಐವಾನ್ ಡಿಸೋಜಾ ಅವರ ಮನೆ ಮೇಲೆ ಕಲ್ಲು ಎಸೆಯಲು ನಿರ್ಧರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com