ತುಮಕೂರಿಗೆ ಮತ್ತೆ ಮೂರು ರೈಲ್ವೆ ಕಾಮಗಾರಿ ಮಂಜೂರು: ಕೇಂದ್ರ ಸಚಿವ ವಿ.ಸೋಮಣ್ಣ

ಕಲ್ಲಿಪಾಳ್ಯ ರೋಡ್ (ರಸ್ತೆ ಕೆಳ ಸೇತುವೆ 13.44 ಕೋಟಿ ರೂ.), ಬೆಂಚಗೆರೆ ಗೇಟ್ (ರಸ್ತೆ ಮೇಲ್ಸೇತುವೆ 36.62 ಕೋಟಿ ರೂ.), ಬಂಡಿಹಳ್ಳಿ ರೋಡ್ ಗೇಟ್ (ರಸ್ತೆ ಕೆಳ ಸೇತುವೆ 10.01 ಕೋಟಿ ರೂ.) ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ವಿ.ಸೋಮಣ್ಣ
ವಿ.ಸೋಮಣ್ಣ
Updated on

ನವದೆಹಲಿ: ತುಮಕೂರು ಜಿಲ್ಲೆಯಲ್ಲಿ ಮತ್ತೆ ಎರಡು ರಸ್ತೆ ಕೆಳ ಸೇತುವೆ (ಆರ್‌ಯುಬಿ) ಹಾಗೂ ಒಂದು ರಸ್ತೆ ಮೇಲ್ಸೇತುವೆಯನ್ನು (ಆರ್‌ಒಬಿ) ರೈಲ್ವೆ ಇಲಾಖೆ ಮಂಜೂರು ಮಾಡಿದೆ.

ಈ ಕಾಮಗಾರಿಗಳ ಮೊತ್ತ 60 ಕೋಟಿ. ರೂ. ಆಗಿದ್ದು ಕಾಮಗಾರಿಯ ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಕಲ್ಲಿಪಾಳ್ಯ ರೋಡ್ (ರಸ್ತೆ ಕೆಳ ಸೇತುವೆ 13.44 ಕೋಟಿ ರೂ.), ಬೆಂಚಗೆರೆ ಗೇಟ್ (ರಸ್ತೆ ಮೇಲ್ಸೇತುವೆ 36.62 ಕೋಟಿ ರೂ.), ಬಂಡಿಹಳ್ಳಿ ರೋಡ್ ಗೇಟ್ (ರಸ್ತೆ ಕೆಳ ಸೇತುವೆ 10.01 ಕೋಟಿ ರೂ.) ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ಈ ಹಿಂದೆ 5 ಮೇಲ್ಸೇತುವೆ ಕಾಮಗಾರಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ತುಮಕೂರು ನಗರದಲ್ಲಿ 3, ನಗರದ ಹೊರ ವಲಯದ ಹರಿಯೂರು (ಮಲ್ಲಸಂದ್ರ) ಬಳಿ 1, ಗುಬ್ಬಿ ತಾಲ್ಲೂಕಿನ ನಿಟ್ಟೂರು ರೈಲ್ವೆ ಸ್ಟೇಷನ್ ಬಳಿ 1 ಸೇರಿ ಒಟ್ಟು 5 ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸಲು 350 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆದೇಶಿಸಿತ್ತು. 13.44 ಕೋಟಿ ರು. ವೆಚ್ಚದಲ್ಲಿ ಕಲ್ಲಿಪಾಳ್ಯ ರಸ್ತೆಯಲ್ಲಿ ಕೆಳ ಸೇತುವೆ, 36.62 ಕೋಟಿ ವೆಚ್ಚದಲ್ಲಿ ಬೆಂಚಗೆರೆ ಗೇಟ್‌ನಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಬಂಡಿಹಳ್ಳಿ ರೋಡ್ ಗೇಟ್‌ನಲ್ಲಿ 10 ಕೋಟಿ ವೆಚ್ಚದಲ್ಲಿ ರಸ್ತೆ ಕೆಳ ಸೇತುವೆ ನಿರ್ಮಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಈ ಯೋಜನೆಗಳ ಅನುಷ್ಠಾನಕ್ಕೆ ಭೂ ಸ್ವಾಧೀನಕ್ಕೆ ತಕ್ಷಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ತುಮಕೂರು ಸಂಸದ ವಿ. ಸೋಮಣ್ಣ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವರಾಗುತ್ತಿದ್ದಂತೆ ತುಮಕೂರು ಜಿಲ್ಲೆಗೆ ಭರಪೂರ ಕೊಡುಗೆ ಹರಿದು ಬರುತ್ತಿವೆ ಎಂದು ಹೇಳಲಾಗುತ್ತಿದೆ.

ವಿ.ಸೋಮಣ್ಣ
ಬೆಂಗಳೂರು-ತುಮಕೂರು ನಡುವೆ ಶೀಘ್ರವೇ ದೈನಂದಿನ ರೈಲು ಸಂಚಾರ: ಸಚಿವ ಸೋಮಣ್ಣ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com