
ಬೆಂಗಳೂರು: ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ನಟನೆಯ ಹಿಟ್ ಚಿತ್ರ 'ಕರಿಯ' ಇಂದು ಶುಕ್ರವಾರ ರಾಜ್ಯಾದ್ಯಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ದರ್ಶನ್ ಅಭಿಮಾನಿಗಳು ಎಂದಿನಂತೆ ತಮ್ಮ ನಟನ ಹಳೆಯ ಚಿತ್ರವಾಗಿದ್ದರೂ ಕೂಡ ಖುಷಿಯಿಂದ ಹಬ್ಬದಂತೆ ಮಾಡಿ ಸ್ವಾಗತಿಸಿದ್ದಾರೆ. ಅಲ್ಲಲ್ಲಿ ಪುಂಡಾಟಿಕೆ ಮೆರೆಯುತ್ತಿದ್ದಾರೆ.
ಥಿಯೇಟರ್ ಗಳ ಮುಂದೆ ಕರಿಯ ಚಿತ್ರದ ಕಟೌಟ್, ಫೋಟೋಗಳು ರಾರಾಜಿಸುತ್ತಿವೆ. ದಾಸನ ಫೋಟೋಗೆ ಹೂವಿನ ಹಾರ, ಹಾಲು ಎರೆದು ಸಂಭ್ರಮಿಸುತ್ತಿದ್ದಾರೆ. ದರ್ಶನ್ ಈಗ ಬಂಧಿಯಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳಿದ್ದಾರೆ. ಅವರು ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ ಖುಷಿಪಡುತ್ತಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ಬಳಿ ಪುಂಡಾಟಿಕೆ ಮಾಡುತ್ತಿದ್ದ ಅಭಿಮಾನಿಗಳಿಗೆ ಪೊಲೀಸರು ಮೈಕ್ ನಲ್ಲಿ ಕ್ಲಾಸ್ ತೆಗೆದುಕೊಂಡು ವಾರ್ನ್ ಮಾಡಿದ್ದಾರೆ. ಮಾಧ್ಯಮಗಳ ವಿರುದ್ಧ ಘೋಷಣೆ ಕೂಗುತ್ತಿದ್ದವರಿಗೆ ನಿಮ್ಮಂತಹ ಅಭಿಮಾನಿಗಳಿಂದಲೇ ದರ್ಶನ್‌ಗೆ ಕೆಟ್ಟ ಹೆಸರು ಎಂದು ಪೊಲೀಸರು ಹೇಳಿದ್ದಾರೆ.
ಫಿಲ್ಮ್ ನೋಡಿ ಎಂಜಾಯ್ ಮಾಡಿ, ಆದರೆ ಬೇರೆಯವರ ಬಗ್ಗೆ ಘೋಷಣೆ ಕೂಗುವುದು, ಲೂಸ್ ಟಾಕ್ ಮಾತನಾಡಿದ್ರೆ ನಾವಿಲ್ಲಿ ಮೇಲಿನಿಂದ ರೆಕಾರ್ಡ್ ಮಾಡಿಕೊಳ್ಳುತ್ತಿದ್ದೇವೆ, ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.
2003ರಲ್ಲಿ ‘ಕರಿಯಾ’ ಸಿನಿಮಾ ರಿಲೀಸ್ ಆಗಿತ್ತು. ಇದನ್ನೂ ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದರು. ದರ್ಶನ್ ನಟನೆ ಮತ್ತು ಕಥೆ ಎರಡು ಜನರ ಮನಗೆದ್ದಿತ್ತು. ದರ್ಶನ್ ನಟನೆಯ ಮತ್ತೊಂದು ಚಿತ್ರ ಶಾಸ್ತ್ರಿ ಕಳೆದ ವಾರ ಬಿಡುಗಡೆಯಾಗಿತ್ತು.
Advertisement