ಚಿತ್ರದುರ್ಗ: ಚಂದ್ರಯಾನ-3ರ ಯಶಸ್ಸಿನ ಸ್ಮರಣಾರ್ಥ ಚಿತ್ರದುರ್ಗದಲ್ಲಿ ಶನಿವಾರ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇಸ್ರೋ ವಿಜ್ಞಾನಿ ಶ್ರೀನಾಥ್ ರತ್ನಾಕರ್ ಅವರು ಬಾಹ್ಯಾಕಾಶ ವಿಜ್ಞಾನ ವಿಕಾಸ, ಅಭಿವೃದ್ಧಿ ಮತ್ತು ಭವಿಷ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ದೇವರಾಜ ಅರಸು ಎಜುಕೇಶನ್ ಸೊಸೈಟಿ, ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಮತ್ತು ಸದ್ಗುರು ಆಯುರ್ವೇದ ಸಹಯೋಗದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸರ್ಕಾರಿ ಶಾಲೆಗಳ ವಿಜ್ಞಾನ ಶಿಕ್ಷಕರು ಹಾಗೂ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ದೇವರಾಜ ಅರಸು ಶಿಕ್ಷಣ ಸೊಸೈಟಿ ಸಿಇಒ ಎಂಸಿ ರಘು ಚಂದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧಿಕಾರಿ ಟಿ ವೆಂಕಟೇಶ್ ಉದ್ಘಾಟಿಸಲಿದ್ದಾರೆ.
TNIE ಕರ್ನಾಟಕ ಹಿರಿಯ ಪ್ರಧಾನ ವ್ಯವಸ್ಥಾಪಕ ಪಿ.ಸುರೇಶ್ ಕುಮಾರ್, ಸದ್ಗುರು ಆಯುರ್ವೇದದ ಪ್ರವರ್ತಕ ಡಿ.ಎಸ್.ಪ್ರದೀಪ್, ಚಿತ್ರದುರ್ಗ ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ತಾರಮಂಡಲ ಮುಖ್ಯಸ್ಥ ಯರ್ರಿಸ್ವಾಮಿ, ಜ್ಯೋತಿಷಿ ಎಚ್.ಎಸ್.ಟಿ.ಸ್ವಾಮಿ ಮತ್ತಿತರರು ಪಾಲ್ಗೊಳ್ಳುವರು. ಬಾಹ್ಯಾಕಾಶ ಕುರಿತ ಉಪನ್ಯಾಸದ ಹೊರತಾಗಿ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳ ನಡುವೆ ಸಂವಾದ ನಡೆಯಲಿದೆ.
ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತ ತನ್ನ ಅಳಿಸಲಾಗದ ಛಾಪು ಮೂಡಿಸಿದ ದಿನವಾಗಿ ಆಗಸ್ಟ್ 23 ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಒಂದು ವರ್ಷದ ಹಿಂದೆ ಇದೇ ದೀನ ಎಸ್ ಸೋಮನಾಥ್ ನೇತೃತ್ವದಲ್ಲಿ ಇಸ್ರೋ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿಸುವ ಮೂಲಕ ಅದ್ವಿತೀಯ ಸಾಧನೆ ಮಾಡಿತ್ತು.
Advertisement