ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳ: KMF ನಂದಿನಿ ಪ್ಯಾಕೆಟ್ ನಲ್ಲಿ ಹೆಚ್ಚುವರಿ 50 ಮಿಲಿ ಹಾಲು ಪೂರೈಕೆ ಮುಂದುವರಿಕೆ!

ಜೂನ್‌ನಲ್ಲಿ, ಕೆಎಂಎಫ್ ಹೆಚ್ಚುವರಿ ಪೂರೈಕೆಯನ್ನು ಪ್ರಾರಂಭಿಸಿದಾಗ, ಇದು ತಾತ್ಕಾಲಿಕ ವಿದ್ಯಮಾನವಾಗಿದ್ದು, ಪೂರೈಕೆ ಸಹಜ ಸ್ಥಿತಿಗೆ ಮರಳಿದಾಗ ಡಿಸೆಂಬರ್‌ನಲ್ಲಿ ಪರಿಶೀಲಿಸಲಾಗುವುದು ಎಂದು ಹೇಳಿತ್ತು.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದ್ದರಿಂದ ನಂದಿನಿ ಹಾಲಿನ ಪ್ಯಾಕೆಟ್‌ಗೆ ತಲಾ 50 ಮಿ.ಲೀ. ಹಾಲು ಹೆಚ್ಚಾಗಿ ಸೇರಿಸಿ 2 ರೂ. ದರ ಹೆಚ್ಚಳ ಮಾಡಲಾಗಿತ್ತು, ಇದನ್ನು ಡಿಸೆಂಬರ್ ಅಂತ್ಯದವರೆಗೆ ಮುಂದುವರಿಸಲಾಗುವುದು ಎಂದು ಕೆಎಂಎಫ್ ತಿಳಿಸಿದೆ.

ಜೂನ್‌ನಲ್ಲಿ, ಕೆಎಂಎಫ್ ಹೆಚ್ಚುವರಿ ಪೂರೈಕೆಯನ್ನು ಪ್ರಾರಂಭಿಸಿದಾಗ, ಇದು ತಾತ್ಕಾಲಿಕ ವಿದ್ಯಮಾನವಾಗಿದ್ದು, ಪೂರೈಕೆ ಸಹಜ ಸ್ಥಿತಿಗೆ ಮರಳಿದಾಗ ಡಿಸೆಂಬರ್‌ನಲ್ಲಿ ಪರಿಶೀಲಿಸಲಾಗುವುದು ಎಂದು ಹೇಳಿತ್ತು. ಆದರೆ ಈಗ ಗ್ರಾಹಕರು ಮತ್ತು ಪೂರೈಕೆದಾರರು ಇದನ್ನು ಬಳಸುತ್ತಿರುವುದು ಕಂಡು ಬರುತ್ತಿದೆ, ಹೀಗಾಗಿ ಅದನ್ನೇ ಮುಂಗುವರಿಸಲು ನಿರ್ಧರಿಸಲಾಗಿದೆ. ಪ್ರತಿದಿನ 92-93 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ನಿರಂತರ ಮಳೆ ಮತ್ತು ಮೇವಿನ ಲಭ್ಯತೆ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ನಾವು ಹಾಲನ್ನು ರಸ್ತೆಗೆ ಚೆಲ್ಲಲು ಸಾಧ್ಯವಿಲ್ಲ, ನಾವು ಪ್ರತಿ ಸ್ಯಾಚೆಟ್‌ನಲ್ಲಿ ಹೆಚ್ಚುವರಿ 50 ಮಿಲಿ ಪೂರೈಸುವುದನ್ನು ಮುಂದುವರಿಸುತ್ತೇವೆ. ಇಲ್ಲಿಯವರೆಗೂ ಅದನ್ನೂ ಮುಂದುವರಿಸಲು ಯಾವುದೇ ಸಮಸ್ಯೆ ಕಂಡು ಬಂದಿಲ್ಲ, ಈ ಸಮಯದಲ್ಲಿ ಕಳೆದ ವರ್ಷಕ್ಕಿಂತ 10 ಲಕ್ಷ ಲೀಟರ್ ಸಂಗ್ರಹವಾಗಿದೆ. ಎಂದು ಕೆಎಂಎಫ್ ಅಧಿಕಾರಿಯೊಬ್ಬರು ಹೇಳಿದರು.

ಹೆಚ್ಚುವರಿ ಹಾಲು ಪೂರೈಕೆ ನಿರ್ವಹಣೆ ಬಗ್ಗೆಯೂ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. “ಹಾಲನ್ನು ಪುಡಿ ಮತ್ತು ಬೆಣ್ಣೆಯಾಗಿ ಸಂಸ್ಕರಿಸುವ ಕಾರ್ಯ ಹೆಚ್ಚಾಗಿದೆ. ಪ್ರತಿದಿನ, 25-30 ಲಕ್ಷ ಲೀಟರ್ ಹಾಲನ್ನು ಪುಡಿ ಮತ್ತು ಬೆಣ್ಣೆಯಾಗಿ ಹಾಗೂ ಸುಮಾರು 1 ಲಕ್ಷ ಲೀಟರ್ ಐಸ್ ಕ್ರೀಮ್ ಆಗಿ ಪರಿವರ್ತಿಸಲಾಗುತ್ತದೆ. ಆದರೆ ಶೀತ ಹವಾಮಾನದ ಕಾರಣ, ಐಸ್ ಕ್ರೀಮ್‌ಗೆ ಹೆಚ್ಚಿನ ಬೇಡಿಕೆಯಿಲ್ಲ ಎಂದು ಅಧಿಕಾರಿ ಸೇರಿಸಲಾಗಿದೆ. ಇತರೆ ರಾಜ್ಯಗಳ ಗ್ರಾಹಕ ಮಾರುಕಟ್ಟೆಗಳಿಗೆ ಪೂರೈಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಎಂಎಫ್ ಮಾತುಕತೆ ನಡೆಸುತ್ತಿದೆ. ನವೆಂಬರ್ 25 ರಂದು, ಕೆಎಂಎಫ್ ದೆಹಲಿಯಲ್ಲಿ ದಿನಕ್ಕೆ 10,000-11,000 ಲೀಟರ್ ಹಾಲನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಹಾಲಿನ ದರವನ್ನು ಹೆಚ್ಚಿಸುವ ಬಗ್ಗೆ ಅಧಿಕಾರಿಗಳು ಮತ್ತು ಒಕ್ಕೂಟಗಳು ಚರ್ಚೆ ನಡೆಸುತ್ತಿವೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿ ಜತೆ ಯಾವುದೇ ಚರ್ಚೆ ನಡೆಸಿಲ್ಲ ಎಂದಿದ್ದಾರೆ.

Representational image
ಉತ್ತರ ಭಾರತಕ್ಕೂ ಕಾಲಿಟ್ಟ ನಂದಿನಿ: ದೆಹಲಿಯಲ್ಲಿ Nandini Products ಬಿಡುಗಡೆ

ಬೆಂಗಳೂರಿಗೆ ಅತಿ ದೊಡ್ಡ ಪೂರೈಕೆದಾರರಲ್ಲಿ ಒಂದಾಗಿರುವ ಮಂಡ್ಯ ಹಾಲು ಒಕ್ಕೂಟವು ದೆಹಲಿಗೂ ಸರಬರಾಜು ಮಾಡುತ್ತಿದೆ. ಹಾಲು ದೆಹಲಿಗೆ 2 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ರಸ್ತೆಯ ಮೂಲಕ 52 ಗಂಟೆಗಳ ಕಾಲ ಪ್ರಯಾಣಿಸುತ್ತದೆ, ಅಲ್ಲಿ ಅದನ್ನು ಪ್ಯಾಕ್ ಮಾಡಿ ಮಾರಾಟ ಮಾಡುವ ಮೊದಲು 4 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಸ್ಕರಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಇಂತಹ ಕಸರತ್ತು ನಡೆಸಲಾಗುತ್ತಿದ್ದು, ಇದರ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆ ವಿಸ್ತರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕೆಎಂಎಫ್ ಅಧಿಕಾರಿಯೊಬ್ಬರು ತಿಳಿಸಿದರು. “ಜನರ ಮನಸ್ಥಿತಿ ಬದಲಾಗುತ್ತಿದೆ, ವಿಶೇಷವಾಗಿ ಉತ್ತರ ಭಾರತದಲ್ಲಿ, ಅವರು ಎಮ್ಮೆಯ ಹಾಲನ್ನು ಇಷ್ಟಪಡುತ್ತಿದ್ದರು. ಅವರು ಈಗ ಹಸುವಿನ ಹಾಲಿಗೆ ಬದಲಾಗುತ್ತಿದ್ದಾರೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com