ಕೆಂಪೇಗೌಡ ಏರ್ ಪೋರ್ಟ್: ಪ್ರಯಾಣಿಕರಿಂದ 1.25 ಕೋಟಿ ರೂ ಮೌಲ್ಯದ ಗಾಂಜಾ ವಶ

ಕಳೆದ ನವೆಂಬರ್ 30ರಿಂದ ಡಿಸೆಂಬರ್ 1 ರ ರಾತ್ರಿಯವರೆಗೆ ಈ ಘಟನೆ ನಡೆದಿದೆ. ಮೂವರು ಕೂಡ ಪುರುಷ ಪ್ರಯಾಣಿಕರಾಗಿದ್ದ ಎಲ್ಲರೂ ಭಾರತೀಯರಾಗಿದ್ದಾರೆ.
Recovered Ganja
ವಶಪಡಿಸಿಕೊಂಡ ಗಾಂಜಾಗಳು
Updated on

ಬೆಂಗಳೂರು: ಮೂರು ಪ್ರತ್ಯೇಕ ಘಟನೆಗಳಲ್ಲಿ ಬ್ಯಾಂಕಾಂಕ್ ನಿಂದ ಪ್ರಯಾಣಿಸುತ್ತಿದ್ದವರಿಂದ ಕಸ್ಟಮ್ಸ್ ಅಧಿಕಾರಿಗಳು ಸುಮಾರು 1.25 ಕೋಟಿ ಮೌಲ್ಯದ ಸುಮಾರು 12.5 ಕೆಜಿ ಗಾಂಜಾವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎಂದು ಮೂಲಗಳು ತಿಳಿಸಿವೆ.

ಕಳೆದ ನವೆಂಬರ್ 30ರಿಂದ ಡಿಸೆಂಬರ್ 1 ರ ರಾತ್ರಿಯವರೆಗೆ ಈ ಘಟನೆ ನಡೆದಿದೆ. ಮೂವರು ಕೂಡ ಪುರುಷ ಪ್ರಯಾಣಿಕರಾಗಿದ್ದ ಎಲ್ಲರೂ ಭಾರತೀಯರಾಗಿದ್ದಾರೆ. ಎರಡು ಇಂಡಿಗೋ ವಿಮಾನಗಳು ಮತ್ತು ಥಾಯ್ ಏರ್ ವಿಮಾನದ ಮೂಲಕ ಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂರೂ ಪ್ರಕರಣಗಳಲ್ಲಿ ಕಾರ್ಯಾಚರಣೆಯ ವಿಧಾನ ಒಂದೇ ಆಗಿತ್ತು. ಗಾಂಜಾ ಉಂಡೆಗಳನ್ನು ಚಿಪ್ಸ್ ಪ್ಯಾಕೆಟ್‌ಗಳಲ್ಲಿ ಮರೆಮಾಚಿದ್ದರು. ಪ್ರಯಾಣಿಕರ ವಿವರಗಳ ಆಧಾರದ ಮೇಲೆ, ಕಸ್ಟಮ್ಸ್ ಅಧಿಕಾರಿಗಳು ಅವರನ್ನು ವಶಕ್ಕೆ ತೆಗೆದುಕೊಂಡು ವ್ಯಾಪಕ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ರಾತ್ರಿ ಬಂದ ಮೊದಲ ವಿಮಾನದಲ್ಲಿದ್ದ ಪ್ರಯಾಣಿಕರಿಂದ 4 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಪ್ರಯಾಣಿಕನಿಂದ 6 ಕೆಜಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ಮರುದಿನ ಬೆಳಗ್ಗೆ ವಿಮಾನದಲ್ಲಿ ಬಂದ ಪ್ರಯಾಣಿಕನೊಬ್ಬನಿಂದ 2.5 ಕೆಜಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ಯಾಕೆಟ್‌ಗಳ ಮೇಲೆ ತೆಂಗಿನಕಾಯಿ ಕ್ರಿಸ್ಪ್ಸ್ ಮತ್ತು `ಕ್ರಿಸ್ಪಿ ಪೀಚ್' ಎಂಬ ಅಲಂಕಾರಿಕ ವಸ್ತುಗಳ ಹೆಸರುಗಳಿದ್ದವು.

ವಶಪಡಿಸಿಕೊಂಡ ವಸ್ತುವನ್ನು ಹೈಡ್ರೋಫೋನಿಕ್ ಗಾಂಜಾ ಎಂದು ಕರೆಯಲಾಗುತ್ತದೆ, ಅವುಗಳಿಗೆ ಪೋಷಕಾಂಶಗಳನ್ನು ಸೇರಿಸುವ ಮೂಲಕ ಪ್ರಯೋಗಾಲಯಗಳಲ್ಲಿ ನೀರಿನಲ್ಲಿ ಬೆಳೆಸಲಾಗುತ್ತದೆ. ಇದು ಪ್ರತಿ ಕಿಲೋಗ್ರಾಮ್‌ಗೆ ಸುಮಾರು 10 ಲಕ್ಷ ರೂಪಾಯಿ ಮೌಲ್ಯವನ್ನು ಹೊಂದಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಅವುಗಳನ್ನು ಬೆಂಗಳೂರಿನೊಳಗೆ ಸರಬರಾಜು ಮಾಡಲು ಅಥವಾ ಬೇರೆ ಯಾವುದಾದರೂ ಸ್ಥಳಕ್ಕೆ ಕಳುಹಿಸಲು ತರಿಸಲಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಸಾಮಾನ್ಯವಾಗಿ ಅವುಗಳನ್ನು ಸಂಗ್ರಹಿಸಲು ವಿಮಾನ ನಿಲ್ದಾಣದ ಹೊರಗೆ ಕಾಯುವ ಅವರ ಸಹಚರರಿಗೆ ಹಸ್ತಾಂತರಿಸಲಾಗುತ್ತದೆ, ನಂತರ ಅವರು ವಿತರಣೆಯನ್ನು ಮಾಡುತ್ತಾರೆ ಎಂದು ವಿವರಿಸಿದರು.

ಮೂವರ ವಿರುದ್ಧ ನಾರ್ಕೋಟಿಕ್ಸ್ ಡ್ರಗ್ ಆ್ಯಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣಗಳ ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com