ಅಲ್ಪಸಂಖ್ಯಾತರ ಉನ್ನತ ಶಿಕ್ಷಣ ಸಂಸ್ಥೆಗಳ ನಿಯಮ ಸರಳಗೊಳಿಸಿದ ಸರ್ಕಾರ: ಮಸೂದೆಗೆ ಸಂಪುಟ ಒಪ್ಪಿಗೆ

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕಾಗಿ ನಿಯಮಗಳನ್ನು ರದ್ದುಗೊಳಿಸಲಾಗಿದೆ. ಈಗ ನಾವು ಉನ್ನತ ಶಿಕ್ಷಣಕ್ಕೂ ಅದೇ ಅನ್ವಯಿಸುತ್ತಿದ್ದೇವೆ ಎಂದು ಹೇಳಿದರು.
Chief Minister Siddaramaiah garlands a statue of Dr BR Ambedkar on the occasion of the latter’s Mahaparinirvan Diwas at Vidhana Soudha on Friday.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧ ಆವರಣದಲ್ಲಿ ಡಾ ಬಿಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿವಸ ನಿಮಿತ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
Updated on

ಬೆಂಗಳೂರು: ಅಲ್ಪಸಂಖ್ಯಾತರ ಸ್ಥಾನಮಾನ ಪಡೆಯಲು ಅಲ್ಪಸಂಖ್ಯಾತ ಸಮುದಾಯದ ಶೇಕಡಾ 50ರಷ್ಟು ವಿದ್ಯಾರ್ಥಿಗಳನ್ನು ಸೇರಿಸುವುದು ಸೇರಿದಂತೆ ಕೆಲವು ನಿಯಮಗಳಿಂದ ಧಾರ್ಮಿಕ ಅಲ್ಪಸಂಖ್ಯಾತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮುಕ್ತಗೊಳಿಸಲು ರಾಜ್ಯ ಸಚಿವ ಸಂಪುಟ ಶುಕ್ರವಾರ ನಿರ್ಧರಿಸಿದೆ.

ಈ ಸಂಸ್ಥೆಗಳ ಮೂರನೇ ಎರಡರಷ್ಟು ಸಿಬ್ಬಂದಿ ಆಯಾ ಅಲ್ಪಸಂಖ್ಯಾತ ಸಮುದಾಯದವರಾಗಿರಬೇಕು ಎಂದು ನಿರ್ಧರಿಸಿದೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳಿಗೆ (ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವ ನಿಯಮಗಳು ಮತ್ತು ಷರತ್ತುಗಳು) (ಕಾಲೇಜು ಶಿಕ್ಷಣ) (1 ನೇ ತಿದ್ದುಪಡಿ) ನಿಯಮಗಳು, 2024 ರ ತಿದ್ದುಪಡಿಯ ಕರಡನ್ನು ಕರ್ನಾಟಕ ಗೆಜೆಟ್‌ನಲ್ಲಿ ಪ್ರಕಟಿಸಲು, ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಆಹ್ವಾನಿಸಲು ಸಂಪುಟ ನಿರ್ಧರಿಸಿದೆ. ಯಾವುದೇ ಆಕ್ಷೇಪಗಳು ಬರದಿದ್ದರೆ, ಕರಡು ನಿಯಮಗಳನ್ನು ಮತ್ತೊಮ್ಮೆ ಸಂಪುಟದ ಮುಂದೆ ಮಂಡಿಸದೆ ಅಂತಿಮಗೊಳಿಸಲಾಗುತ್ತದೆ.

ರಾಜ್ಯದ ಅಲ್ಪಸಂಖ್ಯಾತರಲ್ಲಿ ಮುಸಲ್ಮಾನರು, ಕ್ರೈಸ್ತರು, ಸಿಖ್ಖರು, ಜೈನರು, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನಸಂಖ್ಯೆಯು ಕಡಿಮೆ ಇರುವುದರಿಂದ, ಈ ಸಮುದಾಯಗಳಿಂದ ಶೇಕಡಾ 50ರಷ್ಟು ವಿದ್ಯಾರ್ಥಿಗಳನ್ನು ಹೊಂದಲು ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಅವರು ನಡೆಸುವ ಸಂಸ್ಥೆಗಳಲ್ಲಿ ಕಷ್ಟವಾಗುತ್ತದೆ ಎಂದು ಸಚಿವ ಸಂಪುಟ ಗಮನಿಸಿ ಅಸ್ತಿತ್ವದಲ್ಲಿರುವ ನಿಯಮಗಳಿಗೆ ತಿದ್ದುಪಡಿಯನ್ನು ಸಮರ್ಥಿಸಿದೆ.

ಆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ 30 ನೇ ವಿಧಿ ಮತ್ತು ನಿಯಮಾವಳಿಗಳ ಪ್ರಕಾರ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕಾಗಿ ನಿಯಮಗಳನ್ನು ರದ್ದುಗೊಳಿಸಲಾಗಿದೆ. ಈಗ ನಾವು ಉನ್ನತ ಶಿಕ್ಷಣಕ್ಕೂ ಅದೇ ಅನ್ವಯಿಸುತ್ತಿದ್ದೇವೆ ಎಂದು ಹೇಳಿದರು.

ಜುಲೈ 2025 ರಿಂದ ನಾಲ್ಕು ವರ್ಷಗಳ ಕಾಲ ವಿಶ್ವಬ್ಯಾಂಕ್‌ನಿಂದ 1,750 ಕೋಟಿ ಮತ್ತು ರಾಜ್ಯ ಸರ್ಕಾರದಿಂದ 750 ಕೋಟಿ ಸೇರಿದಂತೆ 2,500 ಕೋಟಿ ರೂಪಾಯಿ ಬಾಹ್ಯ ಅನುದಾನದೊಂದಿಗೆ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು ಸಂಪುಟ ನಿರ್ಧರಿಸಿದೆ. ಇದು ಪ್ರಾಥಮಿಕ ಯೋಜನಾ ವರದಿಯನ್ನು ಸಲ್ಲಿಸಲಿದೆ. ಬಾಹ್ಯ ಅನುದಾನಗಳಿಗೆ ಅನುಮೋದನೆಗಾಗಿ ಕೇಂದ್ರದ ಆರ್ಥಿಕ ವ್ಯವಹಾರಗಳ ಇಲಾಖೆಯ ಮೂಲಕ ವಿಶ್ವ ಬ್ಯಾಂಕ್‌ಗೆ ಮೊರೆ ಹೋಗಲಿದೆ.

Chief Minister Siddaramaiah garlands a statue of Dr BR Ambedkar on the occasion of the latter’s Mahaparinirvan Diwas at Vidhana Soudha on Friday.
ಕಟ್ಟಡದ ಕಲ್ಲು ಗಣಿಗಾರಿಕೆಯ ರಾಯಧನ ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ!

ಸಚಿವ ಸಂಪುಟ ಸಭೆಯ ಇತರ ನಿರ್ಧಾರಗಳು

  • ಹಣಕಾಸು ಸಂಸ್ಥೆಗಳಲ್ಲಿ ಕರ್ನಾಟಕ ಠೇವಣಿದಾರರ ಹಿತಾಸಕ್ತಿ ರಕ್ಷಣೆ (ತಿದ್ದುಪಡಿ) ಮಸೂದೆ, 2024

  • ರಾಷ್ಟ್ರೀಯ ಉಚಿತ ರೋಗನಿರ್ಣಯ ಮತ್ತು ಉಚಿತ ಔಷಧ ಸೇವೆಗಳ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ಪ್ರಯೋಗಾಲಯಗಳಿಗೆ ಡಯಾಗ್ನೋಸ್ಟಿಕ್ ಕಿಟ್‌ಗಳನ್ನು 19.70 ಕೋಟಿಗಳಲ್ಲಿ ಖರೀದಿ

  • ಎಸ್‌ಸಿಪಿ/ಟಿಎಸ್‌ಪಿ ಅಡಿಯಲ್ಲಿ ಎಸ್‌ಸಿ/ಎಸ್‌ಟಿ ಹಾಸ್ಟೆಲ್‌ಗಳಿಗೆ ರೂ 42 ಕೋಟಿಯಲ್ಲಿ ಬಂಕ್ ಬೆಡ್‌ಗಳ ಪೂರೈಕೆ

  • ಕೆಕೆಆರ್‌ಡಿಬಿ ಅಡಿಯಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿಯಿಂದ ಯಡ್ರಾಮಿಗೆ ರಸ್ತೆ ಸುಧಾರಣೆಗೆ 25 ಕೋಟಿ ರೂಪಾಯಿ

  • ಹೊಸಕೋಟೆ ತಾಲೂಕಿನ ರಸ್ತೆ ಅಭಿವೃದ್ಧಿಗೆ 97.27 ಕೋಟಿ ರೂಪಾಯಿ, ರಾಜ್ಯದ ಪಾಲು 54.25 ಕೋಟಿ ರೂಪಾಯಿ

  • ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ನಿರ್ಮಿಸಲು 40.50 ಕೋಟಿ ರೂಪಾಯಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com