ಮುಡಾ ಹಗರಣ: ಆರೋಪಿಗಳನ್ನು ರಕ್ಷಿಸುತ್ತಿರುವ ಅಡ್ವೊಕೇಟ್‌ ಜನರಲ್; ಸ್ಪಷ್ಟೀಕರಣ ನೀಡದಿದ್ದರೆ ಕ್ರಮ- ಸ್ನೇಹಮಯಿ ಕೃಷ್ಣ

100 ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಕಾನೂನು ಹೇಳುತ್ತದೆ.
Petitioner Krishna
ಸ್ನೇಹಮಯಿ ಕೃಷ್ಣ
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎನ್ನಲಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದಲ್ಲಿ ಆರೋಪಿಗಳನ್ನು ಅಡ್ವೊಕೇಟ್ ಜನರಲ್ ರಕ್ಷಿಸುತ್ತಿದ್ದು, ಸರ್ಕಾರದ ಹಿತಾಸಕ್ತಿ ಕಾಪಾಡುತ್ತಿಲ್ಲ ಎಂದು ಶನಿವಾರ ಆರೋಪಿಸಿದ್ದಾರೆ.

ಮೈಸೂರು ನಗರದ ಹೊರವಲಯದ ಕಸಬಾ ಹೋಬಳಿಯ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿನ ಆಸ್ತಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಕಾರ್ಯದರ್ಶಿಗೆ ನೀಡಿರುವ ಕಾನೂನು ಅಭಿಪ್ರಾಯವನ್ನು ವಿರೋಧಿಸಿ ಸ್ನೇಹಮಯಿ ಕೃಷ್ಣ ಅವರು ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರಿಗೆ ಪತ್ರ ಬರೆದಿದ್ದಾರೆ.

ಅಡ್ವೊಕೇಟ್ ಜನರಲ್ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ನೀಡಿರುವ ಅಭಿಪ್ರಾಯದ ಪ್ರತಿ ತನ್ನ ಬಳಿ ಇದೆ. ಜವಾಬ್ದಾರಿಯುತ ಅಧಿಕಾರಿಯಾಗಿರುವ ನೀವು ಆರೋಪಿಗಳನ್ನು ರಕ್ಷಿಸುವ ಅಭಿಪ್ರಾಯ ನೀಡಿದ್ದೀರಿ. ಕಾನೂನಿನ ಅರಿವಿಲ್ಲದ ವ್ಯಕ್ತಿಯಂತೆ ಸರ್ಕಾರಿ ಆಸ್ತಿ ಸಂರಕ್ಷಣೆ ವಿರುದ್ಧ ಹೋಗಿದ್ದೀರಿ ಮತ್ತು ಈ ಬಗ್ಗೆ ಸ್ಪಷ್ಟೀಕರಣ ಮತ್ತು ಅಧಿಕೃತ ದಾಖಲೆಗಳನ್ನು ಕೇಳುತ್ತಿದ್ದೇನೆ ಎಂದು ಕೃಷ್ಣ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ನಮ್ಮದು ಪ್ರಜಾಸತ್ತಾತ್ಮಕ ದೇಶ ಮತ್ತು ಜನರೇ ಸರ್ವಶ್ರೇಷ್ಠರು. ಸಾರ್ವಜನಿಕರು ಪಾವತಿಸುವ ಹಣದಲ್ಲಿ ನಿಮಗೆ ಸಂಬಳ ಮತ್ತು ಸೌಲಭ್ಯಗಳನ್ನು ಒದಗಿಸಲಾಗಿದ್ದು, ನೀವು ಅವರಿಗೆ ಜವಾಬ್ದಾರರಾಗಿರುತ್ತೀರಿ. ನಿಮ್ಮ ಕ್ರಮಗಳನ್ನು ಪ್ರಶ್ನಿಸಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಸಂವಿಧಾನದ 51ಎ ವಿಧಿಯ ನಿಬಂಧನೆಗಳ ಪ್ರಕಾರ ಈ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

''100 ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಕಾನೂನು ಹೇಳುತ್ತದೆ. ಶ್ವೇತಪತ್ರದ ಮೇಲಿನ ಹೇಳಿಕೆಗಳ ಆಧಾರದ ಮೇಲೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿಯನ್ನು ವರ್ಗಾಯಿಸುವುದು ಕಾನೂನುಬಾಹಿರವಲ್ಲವೇ? ನಿಮ್ಮಂತಹ ಅಧಿಕಾರಿಗಳು ಇದನ್ನು ಬೆಂಬಲಿಸುವುದು ಸಮರ್ಥನೆಯೇ?” ಎಂದು ಕೃಷ್ಣ ಅಡ್ವೊಕೇಟ್ ಜನರಲ್ ಅವರನ್ನು ಪ್ರಶ್ನಿಸಿದ್ದಾರೆ.

Petitioner Krishna
MUDA Scam: ಸುಳ್ಳು ಮಾಹಿತಿ ಆರೋಪ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧವೇ FIR!

ಕರಾರು ಪತ್ರದ ಪ್ರಕಾರ ಆಸ್ತಿ ಹಕ್ಕುಗಳನ್ನು ಮೈಲಾರಪ್ಪಗೆ ವರ್ಗಾಯಿಸಲಾಗಿದೆ. 23 ವರ್ಷಗಳ ನಂತರ 1993 ರಲ್ಲಿ ನಿಂಗ ಅಕಾ ಜವರ ಆಸ್ತಿ ಹೇಗಾಗುತ್ತದೆ? ನಾಲ್ಕನೇ ಆರೋಪಿ ಭೂಮಾಲೀಕ ಜೆ.ದೇವರಾಜು ಅವರ ಹೆಸರಿಗೆ ಕಂದಾಯ ಅಧಿಕಾರಿಗಳು ಭೂಮಿ ಹಸ್ತಾಂತರ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದು, ಯಾರ ಪ್ರಭಾವದಿಂದ ಇದೆಲ್ಲ ನಡೆದಿದೆ ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡದಿದ್ದರೆ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸುವುದು ಅನಿವಾರ್ಯವಾಗುತ್ತದೆ ಎಂದು 10 ಪುಟಗಳ ಪತ್ರದಲ್ಲಿ ಸ್ನೇಹಮಯಿ ಕೃಷ್ಣ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com