
ಬೆಂಗಳೂರು: ಹಣವಿಲ್ಲ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ಕಳೆದ ಒಂಬತ್ತು ತಿಂಗಳಿನಿಂದ ಹೈನುಗಾರರಿಗೆ ಪ್ರೋತ್ಸಾಹಧನ ನೀಡಿಲ್ಲ. ಕ್ಷೀರಧಾರೆ ಯೋಜನೆಯಡಿ ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ ಸರಕಾರ 5 ರೂ. ಪ್ರೋತ್ಸಾಹ ಧನ ನೀಡಬೇಕು, ಈ ಬಗ್ಗೆ ಪ್ರಸ್ತಾವನೆ ಹಣಕಾಸು ಇಲಾಖೆ ಮುಂದೆ ಬಾಕಿಯಿರುವುದರಿಂದ ಐದು ತಿಂಗಳಿಂದ ರೈತರಿಗೆ ಪ್ರೋತ್ಸಾಹಧನ ಪಾವತಿಯಾಗಿಲ್ಲ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಒಪ್ಪಿಕೊಂಡಿದ್ದಾರೆ.
ರಾಜ್ಯದಲ್ಲಿ 16 ಹಾಲು ಒಕ್ಕೂಟ
ಪ್ರತಿದಿನ ರಾಜ್ಯಾಧ್ಯಂತ ಒಂದು ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತದೆ. ಹೀಗಾಗಿ ಹೈನುಗಾರಿಕೆಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. 2008ರಲ್ಲಿ ಪ್ರತಿ ಲೀಟರ್‌ಗೆ 2 ರೂ.ನಂತೆ ಹೈನುಗಾರರಿಗೆ ಪ್ರೊತ್ಸಾಹಧನ ನೀಡುವ ಯೋಜನೆ ಆರಂಭಿಸಲಾಗಿತ್ತು. 2013ರಲ್ಲಿ ಲೀಟರ್‌ಗೆ 4 ರೂ.ಗೆ ಏರಿಕೆಯಾಗಿದ್ದು, 2016ರಲ್ಲಿ 5 ರೂ ಏರಿಕೆ ಮಾಡಲಾಯಿತು. 7 ರೂಪಾಯಿಗೆ ಏರಿಸಲು ಕಾಂಗ್ರೆಸ್ ಒಲವು ಹೊಂದಿದ್ದರೂ ಸಾಧ್ಯವಾಗಲಿಲ್ಲ. ವಾಸ್ತವವಾಗಿ 2023ರ ವಿಧಾನಸಭೆ ಚುನಾವಣೆಗೂ ಮುನ್ನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಲೀಟರ್‌ಗೆ 6 ರೂ.ಗೆ ಪ್ರೋತ್ಸಾಹಧನವನ್ನು ಹೆಚ್ಚಿಸುವುದಾಗಿ ಹೇಳಿದ್ದರು. 2024ರ ಜೂನ್‌ನಿಂದ 2024ರ ಅಕ್ಟೋಬರ್‌ವರೆಗೆ ಹಣ ಪಾವತಿ ಮಾಡಿಲ್ಲ, ರೈತರಿಗೆ ಪಾವತಿಸಬೇಕಾದ ಮೊತ್ತ 606.69 ಕೋಟಿ ರೂ.ಬಾಕಿ ಉಳಿದಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಸಮುದಾಯದ ಹೈನುಗಾರರಿಗೆ ಅಕ್ಟೋಬರ್ ತಿಂಗಳಿಗೆ 6.85 ಕೋಟಿ ರೂ. ಹಣ ಪಾವತಿಸಬೇಕಿದ್ದರೆ, ಎಸ್‌ಟಿ ರೈತರಿಗೆ 2024ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಗೆ ಇನ್ನೂ 9 ಕೋಟಿ ರೂ. ಪಾವತಿಯಾಗಬೇಕಿದೆ. ಕಂತುಗಳಲ್ಲಿ ಹಣ ಪಾವತಿಸಲಾಗುವುದುಎಂದು ಹೇಳಿದರು.
ರೈತರಿಗೆ ಪ್ರೋತ್ಸಾಹಧನ ನೀಡದಿರುವುದರಿಂದ ಪ್ರತಿ ಲೀಟರ್ ಹಾಲಿಗೆ ಒಂದು ರೂಪಾಯಿ ಕಡಿಮೆ ನೀಡಲಾಗುತ್ತದೆ. ರಾಜ್ಯದಲ್ಲಿ ಸುಮಾರು 38 ಲಕ್ಷ ಹೈನುಗಾರರಿದ್ದು, ಅವರಲ್ಲಿ ಶೇ.90ಕ್ಕೂ ಹೆಚ್ಚು ಮಹಿಳೆಯರು ಇದ್ದಾರೆ. ರಾಜ್ಯ ಸರ್ಕಾರ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತದೆ, ಆದರೆ ಅವರಿಗೆ ಪ್ರೋತ್ಸಾಹಧನ ನೀಡುವಲ್ಲಿ ಮೌನವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ಹೈನುಗಾರರಿಗೆ ನೀಡಬೇಕಾದ ಪ್ರೋತ್ಸಾಹಧನ 1000 ಕೋಟಿ ರೂ. ಪಾವತಿ ಮಾಡಬೇಕಾಗಿದೆ ಎಂದಿದ್ದಾರೆ.
ಹೈನುಗಾರ್ತಿ ಲತಾಮಣಿ ಬಸವರಾಜು ಮಾತನಾಡಿ, ಫೆಬ್ರವರಿ 2024 ರಿಂದ ತನ್ನಿಂದ ಸಂಗ್ರಹಿಸಿದ ಹಾಲಿಗೆ ಯಾವುದೇ ಪ್ರೋತ್ಸಾಹಧನವನ್ನು ಪಡೆದಿಲ್ಲ ಎಂದು ಹೇಳಿದರು. ಇದಲ್ಲದೆ, ಹಾಲು ಸಂಗ್ರಹಣೆ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಪ್ರತಿ ಲೀಟರ್‌ಗೆ 34 ರೂಪಾಯಿ ಪಡೆಯುತ್ತಿದ್ದ ನನಗೆ ಈಗ 32.27 ರೂಪಾಯಿ ನೀಡಲಾಗುತ್ತಿದೆ. ನಾವು ಪ್ರಶ್ನಿಸಿದಾಗ, ಅವರು ತಮ್ಮ ಬಳಿ ಹಣವಿಲ್ಲ ಎಂದು ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಸ್ಯಾಚೆಟ್‌ಗಳಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಹೇಳಿ ಸರ್ಕಾರ ಜೂನ್‌ನಲ್ಲಿ ಬೆಲೆಯನ್ನು ಹೆಚ್ಚಿಸಿತು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ‘ಸರ್ಕಾರ ಹಾಲಿನ ದರ ಹೆಚ್ಚಿಸಿದ್ದರೂ ಸಂಗ್ರಹಿಸಿದ ಹಣ ರೈತರಿಗೆ ನೀಡುತ್ತಿಲ್ಲ’ ಎನ್ನುತ್ತಾರೆ ರಾಮನಗರದ ಹೈನುಗಾರ್ತಿ ಲಕ್ಷ್ಮವ್ವ.
Advertisement