Junior Toes: 20 ವರ್ಷಗಳ ಅಪ್ಪು​ ಕನಸು ನನಸಾಗಿಸಿದ Ashwini Puneet Rajkumar!

ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ನಾಯಕತ್ವ ತರಬೇತಿದಾರರು ಮತ್ತು ಪ್ರೇರಕ ಭಾಷಣಕಾರ್ತಿ ಸ್ಪೂರ್ತಿ ವಿಶ್ವಾಸ್ ಕೈಜೋಡಿಸಿದ್ದಾರೆ.
Ashwini Puneet Rajkumar- Puneet Rajkumar
ಅಶ್ವಿನಿ ಪುನೀತ್ ರಾಜ್ ಕುಮಾರ್- ಪುನೀತ್ ರಾಜ್ ಕುಮಾರ್ online desk
Updated on

ಬೆಂಗಳೂರು: ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಜನಮನ ಗೆದ್ದಿದ್ದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಈಗ 20 ವರ್ಷಗಳ ಅಪ್ಪು ಕನಸನ್ನು ಹಠ ಬಿಡದೇ ನನಸು ಮಾಡಿ ಮತ್ತೊಮ್ಮೆ ಎಲ್ಲರ ಮನಸ್ಸು ಗೆದ್ದಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಪುನೀತ್ ರಾಜ್ ಕುಮಾರ್ ಅಪಾರ ಕನಸು ಹೊಂದಿದ್ದರು. ಈಗ ಅಪ್ಪು ಕನಸು ನನಸು ಮಾಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್, 'Junior Toes International Preschool' ನ್ನು ಆರಂಭಿಸಿದ್ದಾರೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ನಾಯಕತ್ವ ತರಬೇತಿದಾರರು ಮತ್ತು ಪ್ರೇರಕ ಭಾಷಣಕಾರ್ತಿ ಸ್ಪೂರ್ತಿ ವಿಶ್ವಾಸ್ ಕೈಜೋಡಿಸಿದ್ದಾರೆ. ಈ ಯೋಜನೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಶಿಕ್ಷಣತಜ್ಞೆ ಐಶ್ವರ್ಯಾ ಡಿ.ಕೆ. ಎಸ್ ಹೆಗ್ಡೆ ಭಾಗಿಯಾಗಿದ್ದ ಇಂಡಿಯನ್ ವುಮನ್ ಅಚೀವರ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಉದ್ಘಾಟನೆಯಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​​, ನಾನು ಮತ್ತು ಪುನೀತ್ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸುವ ಕನಸು ಕಂಡಿದ್ದೆವು. ಈ ಯೋಜನೆ ನಮ್ಮ ಕನಸನ್ನು ನನಸಾಗಿಸುತ್ತಿದೆ. ಪ್ರತೀ ಮಗುವಿನ ಸಾಮರ್ಥ್ಯವನ್ನು ಪೋಷಿಸುವ ಶಾಲೆಗಳನ್ನು ರಚಿಸುವುದು, ​ ಶೈಕ್ಷಣಿಕ ಉತ್ಕೃಷ್ಟತೆ​ ಮಾತ್ರವಲ್ಲದೇ ನಾಯಕತ್ವವನ್ನೂ ನಿರ್ಮಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.

Junior Toes International Preschool ನ ಮೊದಲ ಐದು ಕಲಿಕಾ ಕೇಂದ್ರಗಳು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದ್ದು, ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಮತ್ತು ನವೀನ ಪಠ್ಯಕ್ರಮ ಇರಲಿವೆ. ಈ ಕೇಂದ್ರಗಳು ಕೇವಲ ಶಾಲೆಗಳಷ್ಟೇ ಅಲ್ಲ, ಅವು ಮಕ್ಕಳಿಗೆ ಸೃಜನಶೀಲವಾಗಿ ಚಿಂತಿಸಲು, ಆತ್ಮವಿಶ್ವಾಸದಿಂದ ನಡೆದುಕೊಳ್ಳಲು ಮತ್ತು ನಾಯಕತ್ವಕ್ಕೆ ಪ್ರೇರಣೆ ನೀಡುವ ಸ್ಥಳಗಳಾಗಿ ರೂಪುಗೊಳ್ಳುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com