Gokarna Beach
ಗೋಕರ್ಣ ಬೀಚ್‌

ಮುಚ್ಚಿದ ಮುರ್ಡೇಶ್ವರ; ಕಿಕ್ಕಿರಿದು ತುಂಬಿದ ಗೋಕರ್ಣ ಬೀಚ್; ಭದ್ರತೆ ಒದಗಿಸುವಂತೆ ಸ್ಥಳೀಯರ ಒತ್ತಾಯ

ಹೊಸ ವರ್ಷದ ಮುನ್ನಾದಿನದಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮತ್ತು ಇತರ ಬೀಚ್‌ಗಳಲ್ಲಿ ಹೆಚ್ಚಿನ ಭದ್ರತೆ ಮತ್ತು ರಕ್ಷಣಾ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Published on

ಕಾರವಾರ: ಮುರುಡೇಶ್ವರ ಸಮುದ್ರ ತೀರವನ್ನು ಮುಚ್ಚುವುದರದಿಂದ ಗೋಕರ್ಣ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಇತರ ಪ್ರಸಿದ್ಧ ಬೀಚ್‌ಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ಗೋಕರ್ಣ ಕಡಲತೀರದಲ್ಲಿ ಮುಳುಗುತ್ತಿದ್ದ ಇಬ್ಬರು ವಿದೇಶಿ ಪ್ರವಾಸಿಗರು ಸೇರಿದಂತೆ ಏಳು ಮಂದಿಯನ್ನು ರಕ್ಷಿಸಲಾಗಿದೆ.

ಹೊಸ ವರ್ಷದ ಮುನ್ನಾದಿನದಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮತ್ತು ಇತರ ಬೀಚ್‌ಗಳಲ್ಲಿ ಹೆಚ್ಚಿನ ಭದ್ರತೆ ಮತ್ತು ರಕ್ಷಣಾ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ನೀರಲ್ಲಿ ಇಳಿದು ಖುಷಿಪಡುವ ಪ್ರವಾಸಿಗರು ಸಮುದ್ರದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕೋಲಾರ ಮತ್ತು ಬೆಂಗಳೂರಿನ ಐವರು ವಿದ್ಯಾರ್ಥಿಗಳು ಮುರುಡೇಶ್ವರ ಕಡಲತೀರದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಹೀಗಾಗಿ ಪ್ರವಾಸಿಗರಿಗೆ ಮುರುಡೇಶ್ವರ ಬೀಚ್‌ ಪ್ರವೇಶ ನಿರ್ಬಂಧಿಸಲಾಗಿದೆ.

ಆದಾಗ್ಯೂ, ಪ್ರವಾಸಿಗರು ಇತರ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ, ಲೈಫ್ ಗಾರ್ಡ್ಸ್ ಕಳೆದ ನಾಲ್ಕು ದಿನಗಳಲ್ಲಿ ಐದು ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಕುಡ್ಲೆ ಬೀಚ್ ನಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಇಟಲಿ ಪ್ರವಾಸಿ ಜಾರ್ಜ್ ಅವರನ್ನು ರಕ್ಷಿಸಲಾಗಿದೆ. ಸಮುದ್ರದಲ್ಲಿ ಈಜುತ್ತಿದ್ದಾಗ ಸುಳಿಯಲ್ಲಿ ಸಿಲುಕಿ ಸಹಾಯಕ್ಕಾಗಿ ಕೂಗುತ್ತಿದ್ದರು. ಜೀವರಕ್ಷಕರಾದ ನಾಗೇಂದ್ರ ಎಸ್ ಕುರ್ಲೆ, ಪ್ರದೀಪ್ ಅಂಬಿಗ ಮತ್ತು ಪ್ರವಾಸಿ ಮಾರ್ಗದರ್ಶಿ ಶೇಖರ್ ಹರಿಕಂತ್ರ ಅವರನ್ನು ಕೂಡಲೇ ರಕ್ಷಿಸಿದರು.

Gokarna Beach
ಮುರುಡೇಶ್ವರ ದುರಂತ: ಮೃತ ವಿದ್ಯಾರ್ಥಿನಿಯರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ; 6 ಶಿಕ್ಷಕರ ಅಮಾನತು!

ಹೊಸ ವರ್ಷ ಮುಗಿಯುವವರೆಗೆ ಬೀಚ್‌ಗಳಲ್ಲಿ ಭದ್ರತೆ ಒದಗಿಸಬೇಕು. ನಮ್ಮ ಕಡಲತೀರಗಳಲ್ಲಿ ಯಾವುದೇ ಜನಸಂದಣಿ ನಿಯಂತ್ರಣ ಮಾಡಿತ್ತಿಲ್ಲ. ವಿಶೇಷವಾಗಿ ರಜಾದಿನಗಳಲ್ಲಿ ಮತ್ತು ವಾರಾಂತ್ಯದಲ್ಲಿ ಪೊಲೀಸರ ಉಪಸ್ಥಿತಿಯು ಅತ್ಯಗತ್ಯವಾಗಿದೆ. ಅನೇಕ ಪ್ರವಾಸಿಗರು ತಿಳಿಯದೆ ಆಳ ಸಮುದ್ರಕ್ಕೆ ಇಳಿದು ತೊಂದರೆಗೆ ಒಳಗಾಗುತ್ತಾರೆ ಎಂದು ಗೋಕರ್ಣದ ಪ್ರವಾಸ ನಿರ್ವಾಹಕರೊಬ್ಬರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com