ಸರ್ಕಾರಿ ಭೂಮಿಯಿಂದ ನೀಲಗಿರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದು!

ರಾಣೆಬೆನೂರು ಕೃಷ್ಣಮೃಗ ಅಭಯಾರಣ್ಯ ಸೇರಿದಂತೆ ಕೆಲವು ಅರಣ್ಯ ಮತ್ತು ಹುಲ್ಲುಗಾವಲು ಪ್ರದೇಶಗಳಲ್ಲಿ ಈಗಾಗಲೇ ಈ ಪ್ರಕ್ರಿಯೆ ಪ್ರಾರಂಭಿಸಲಾಗಿದೆ, ಈಗ ಇದನ್ನು ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಇತರ ಅರಣ್ಯಗಳು ಮತ್ತು ನಗರಗಳಿಗೆ ವಿಸ್ತರಿಸಲಾಗುವುದು.
eucalyptus trees
ನೀಲಗಿರಿ ಮರಗಳು
Updated on

ಬೆಂಗಳೂರು: ರಾಜ್ಯ ಅರಣ್ಯ ಇಲಾಖೆಯು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ರಾಜ್ಯದಲ್ಲಿರುವ ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿರುವ ಹಳೆಯ ನೀಲಗಿರಿ ಮರಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.

ರಾಣೆಬೆನೂರು ಕೃಷ್ಣಮೃಗ ಅಭಯಾರಣ್ಯ ಸೇರಿದಂತೆ ಕೆಲವು ಅರಣ್ಯ ಮತ್ತು ಹುಲ್ಲುಗಾವಲು ಪ್ರದೇಶಗಳಲ್ಲಿ ಈಗಾಗಲೇ ಈ ಪ್ರಕ್ರಿಯೆ ಪ್ರಾರಂಭಿಸಲಾಗಿದೆ, ಈಗ ಇದನ್ನು ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಇತರ ಅರಣ್ಯಗಳು ಮತ್ತು ನಗರಗಳಿಗೆ ವಿಸ್ತರಿಸಲಾಗುವುದು. ನೀಲಗಿರಿ ಮರಗಳನ್ನುಕತ್ತರಿಸುವುದು ಪ್ರತಿ ಅರಣ್ಯ ವಿಭಾಗದ ಕಾರ್ಯಯೋಜನೆಯ ಭಾಗವಾಗಿದೆ. ಇದರಿಂದ ನೈಸರ್ಗಿಕ ಸಸ್ಯವರ್ಗವನ್ನು ಸುಧಾರಿಸುವುದು ಮತ್ತು ಸ್ಥಳೀಯ ಪ್ರಭೇದಗಳಿಗೆ ದಾರಿ ಮಾಡಿಕೊಡಲಾಗುತ್ತದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಬೆಂಗಳೂರು ಮತ್ತು ಅದರ ಸುತ್ತಮುತ್ತಲು ಸುಮಾರು 75 ಎಕರೆಗಳನ್ನು ಗುರುತಿಸಲಾಗಿದೆ. ತುರಹಳ್ಳಿ ಕಿರು ಅರಣ್ಯ ಸೇರಿದಂತೆ ಅರಣ್ಯ ಪ್ರದೇಶದಲ್ಲಿರುವ ಹಳೆಯ ನೀಲಗಿರಿ ಮರಗಳನ್ನು ತೆರವುಗೊಳಿಸಲಾಗುವುದು. ಈ ನಿರ್ಧಾರವನ್ನು ರಾಜ್ಯದ ಹಸಿರು ಹೊದಿಕೆಯ ಭಾಗವೆಂದು ಉಲ್ಲೇಖಿಸಿ ಕೆಲವು ಕಾರ್ಯಕರ್ತರು ವಿರೋಧಿಸಿದ್ದಾರೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಸೇನಾ ಸ್ಮಾರಕಕ್ಕಾಗಿ ನೀಲಗಿರಿ ಮರಗಳನ್ನುಕತ್ತರಿಸಲು ಅರಣ್ಯ ಇಲಾಖೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧಾರ ಕೈಗೊಂಡಾಗ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು ಎಂದು ಅವರು ತಿಳಿಸಿದ್ದಾರೆ.

eucalyptus trees
ರಾಣೆಬೆನ್ನೂರು ಅಭಯಾರಣ್ಯದಲ್ಲಿ ಕೃಷ್ಣಮೃಗಗಳ ಸಂಖ್ಯೆ ಹೆಚ್ಚಿಸಲು ಕ್ರಮ: ನೀಲಗಿರಿ ನೆಡುತೋಪು ತೆರವು; ಸಫಾರಿ ಆರಂಭ!

ನೀಲಗಿರಿ ಮರ ಕತ್ತರಿಸುವುದು ಒಳ್ಳೆಯ ಕೆಲಸವಾಗಿದೆ ಅನೇಕ ಪರಿಸರ ಸಂರಕ್ಷಣಾಕಾರರು ತಿಳಿಸಿದ್ದಾರೆ. 1950 ರ ದಶಕದಲ್ಲಿ ವಿದೇಶಿ ಕೈಗಾರಿಕೋದ್ಯಮಿಯೊಬ್ಬರು ನೀಲಗಿರಿಯನ್ನು ನೆಡಲು ಸರ್ಕಾರಕ್ಕೆ ಸೂಚಿಸಿದರು. ನೀಲಗಿರಿ ಮರ ವೇಗವಾಗಿ ಬೆಳೆಯುತ್ತಿರುವ ಜಾತಿಯಾಗಿದೆ.ಪೇಪರ್,ಮತ್ತು ರೇಯಾನ್ ಕಾರ್ಖಾನೆಯ ಬೇಡಿಕೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು 1950 ರ ದಶಕದಲ್ಲಿ ನೀಲಗಿರಿ ಮರಗಳನ್ನು ದೇಶದಲ್ಲಿ ಪರಿಚಯಿಸಲಾಯಿತು ಎಂದು ಖ್ಯಾತ ಪರಿಸರವಾದಿ ಮತ್ತು ಮಾಜಿ ಅರಣ್ಯ ಅಧಿಕಾರಿ ಎಎನ್ ಯಲ್ಲಪ್ಪ ರೆಡ್ಡಿ ಹೇಳಿದರು. ಬಿದಿರಿನ ಬದಲಾಗಿ ನೀಲಗಿರಿಯನ್ನು ಉತ್ತೇಜಿಸಲಾಯಿತು, ಇದನ್ನು ನಿಧಾನವಾಗಿ ಬೆಳೆಯುವ ಜಾತಿ ಎಂದು ಕರೆಯಲಾಯಿತು, ಅದರ ಪರಿಸರ ಮೌಲ್ಯವನ್ನು ಕಡಿಮೆ ಮಾಡುತ್ತದೆ.

17ನೇ ಶತಮಾನದಲ್ಲಿ ನಂದಿ ಬೆಟ್ಟದಲ್ಲಿ ನೀಲಗಿರಿಯನ್ನು ಪರಿಚಯಿಸಲಾಯಿತು. ಇದರ ನಂತರದ ಹೈಬ್ರಿಡ್ ತಳಿಯನ್ನು ಮೈಸೂರು ಹೈಬ್ರಿಡ್ ಎಂದು ಕರೆಯಲಾಯಿತು, ಇದನ್ನು ರಾಜ್ಯ ಸರ್ಕಾರವು ಉತ್ತೇಜಿಸಿದ್ದರಿಂದ ರೈತರು ತ್ವರಿತ ಲಾಭಕ್ಕಾಗಿ ಬೆಳೆಯಲು ಪ್ರಾರಂಭಿಸಿದರು ಎಂದು ರೆಡ್ಡಿ ಹೇಳಿದ್ದಾರೆ.

“ಕಾಲಾನಂತರದಲ್ಲಿ, ಇದು ಯಾವುದೇ ಹುಲ್ಲು, ಯಾವುದೇ ಮಣ್ಣಿನ ಪುನರುಜ್ಜೀವನ ಮತ್ತು ಮಣ್ಣಿನಲ್ಲಿ ಹ್ಯೂಮಸ್ಗೆ ಕಾರಣವಾಗುವುದಿಲ್ಲ ಎಂಬುದು ತಿಳಿಯಿತು. ನೀಲಗಿರಿ ಮರಗಳು ಎಲ್ಲಾ ನೀರನ್ನು ಹೀರಿಕೊಳ್ಳುತ್ತವೆ ಮತ್ತು ಅಂತರ್ಜಲದ ಮೇಲೆ ಪರಿಣಾಮ ಬೀರುತ್ತವೆ , ಇದು ಪರಿಸರ ವ್ಯವಸ್ಥೆಗೆ ಒಳ್ಳೆಯದಲ್ಲ ಎಂಬುದನ್ನು ಮನಗಂಡ ಅರಣ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com