
ಬೆಂಗಳೂರು: ಮನೆಯಿಂದಲೇ ಕ್ಲಿನಿಕ್ ನಡೆಸುತ್ತಿದ್ದ ಪರ್ಯಾಯ ಔಷಧ ವೈದ್ಯರೊಬ್ಬರಿಂದ ಹೊರಮಾವಿನ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕಾರಿಗಳು, ಪವರ್ ಕನೆಕ್ಷನ್ ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿ 20,000 ರೂ. ಲಂಚ ಪಡೆದಿರುವುದು ಬೆಳಕಿಗೆ ಬಂದಿದೆ.
ಸಹಾಯಕ ಎಂಜಿನಿಯರ್ (ಎಇ) ವೀರೇಶ್ ಮತ್ತು ಅವರ ಸಹವರ್ತಿ ಸುಬ್ರಮಣಿಯನ್, ಮೀಟರ್ ರೀಡರ್, ಹಣ ನೀಡದಿದ್ದರೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದರು. ಇದಾದ ನಂತರ ಮತ್ತೊಬ್ಬ ಮೀಟರ್ ರೀಡರ್ ಸುದರ್ಶನ್ ವಿ ಕಳೆದ ಶುಕ್ರವಾರ ಸುಬ್ರಮಣಿಯನ್ ಮತ್ತು ವೀರೇಶ್ ಪರವಾಗಿ ಯುಪಿಐ ಮೂಲಕ ರೂ 20,000 ಪಡೆದಿದ್ದರು. ಕೊತ್ತನೂರು ಪ್ರದೇಶವನ್ನು ನೋಡಿಕೊಳ್ಳುವ ಸುಬ್ರಮಣಿಯನ್ ಎಂಬುವರಿಗ ಹಣ ಪಾವತಿಸಬೇಕಾಗಿತ್ತು ಎಂದು ಸಂತ್ರಸ್ತ ಡಾ.ಅನುಷ್ ಸೊಲೊಮನ್ ಜಾಯ್ ಹೇಳಿದ್ದಾರೆ.
ಸಹಾಯಕ ಇಂಜಿನಿಯರ್ ವೀರೇಶ್ ಮತ್ತು ಅವರ ಸಹೋದ್ಯೋಗಿ ಸುಬ್ರಮಣಿಯನ್ ಅವರು ನನಗೆ 1 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಬೆದರಿಕೆ ಹಾಕಿದರು. ನಾನು ಕಾನೂನನ್ನು ಉಲ್ಲಂಘಿಸಿಲ್ಲ ಎಂದು ನನಗೆ ತಿಳಿದಿದ್ದರಿಂದ ನಾನು ಅಷ್ಟು ಹಣ ಪಾವತಿಸಲು ಸಿದ್ಧನಿರಲಿಲ್ಲ. ಆದರೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವುದಾಗಿ ಹೇಳಿದಾಗ ಅವರ ಬೆದರಿಕೆಗೆ ಮಣಿದು ಮೊದಲು 20 ಸಾವಿರ ರೂ.ನಂತರ 10 ಸಾವಿರ ಲಂಚ ನೀಡಿದ್ದೇನೆ. ತಕ್ಷಣವೇ ತಮಗೆ 20,000 ರೂ ಪಾವತಿಸಬೇಕು ಎಂದು ಅವರು ಹೇಳಿದರು, ನಾನು UPI ಮೂಲಕ ಮಾತ್ರ ಪಾವತಿಸುವುದಾಗಿ ಹೇಳಿದೆ. ಹೀಗಾಗಿ ಅಪರಿಚಿತ ವ್ಯಕ್ತಿಯ UPI ಖಾತೆಗೆ ಪಾವತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಮರುದಿನ ಅವರು ಇನ್ನೂ 10 ಸಾವಿರ ರು ಹಣವನ್ನು ನಗದು ಮೂಲಕ ಕೊಡಬೇಕು ಎಂದು ಹೇಳಿದರು. ಹೀಗಾಗಿ ಒಟ್ಟು 30 ಸಾವಿರ ರೂ.ಹಣವನ್ನು ಪಾವತಿಸಿದ್ದೇನೆ, ಇದಕ್ಕೂ ಮೊದಲು ಆರಂಭದಲ್ಲಿ 50,000 ರೂ. ಲಂಚ ನೀಡುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದಾರೆ.
ಈ ವಿಷಯವನ್ನು ಸಂತ್ರಸ್ತ ವೈದ್ಯ ಕಾರ್ಯಕರ್ತನೊಂದಿಗೆ ಚರ್ಚಿಸಿದ್ದಾರೆ, ಅವರು ವಿಷಯವನ್ನು ಸಾರ್ವಜನಿಕವಾಗಿ ತಿಳಿಸಲು ಮನವರಿಕೆ ಮಾಡಿದರು. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಮೀಟರ್ ರೀಡರ್‌ಗಳನ್ನು ಸಂಪರ್ಕಿಸಿದಾಗ, ಅವರು ಹಣವನ್ನು ಸಂಗ್ರಹಿಸಿರುವುದಾಗಿ ಒಪ್ಪಿಕೊಂಡರು. ಚುನಾಯಿತ ಪ್ರತಿನಿಧಿಯೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಯ ಆಜ್ಞೆಯ ಮೇರೆಗೆ ಅದನ್ನು ಮಾಡಿದ್ದೇನೆ ಮತ್ತು ಮೊತ್ತವನ್ನು ಹಿಂದಿರುಗಿಸುವುದಾಗಿ ಸುಬ್ರಮಣಿಯನ್ ತಿಳಿಸಿದ್ದಾರೆ. ಆರೋಪಿಗಳು ಯುಪಿಐ ಮೂಲಕ ಹಣವನ್ನು ಹಿಂದಿರುಗಿಸಿದ್ದಾರೆ.ವೀರೇಶ್ ಅವರನ್ನು ಸಂಪರ್ಕಿಸಿದಾಗ ಆರೋಪವನ್ನು ನಿರಾಕರಿಸಿದ್ದಾರೆ. ಮೀಟರ್ ರೀಡರ್‌ಗಳು ಗುತ್ತಿಗೆ ಆಧಾರದ ಮೇಲೆ ನೇಮಕ ಗೊಂಡಿದ್ದು ತನಗೂ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
Advertisement