11,694 ನಿವೃತ್ತ‌ ಸಾರಿಗೆ ನೌಕರರಿಗೆ 224.05 ಕೋಟಿ ರೂ. ಗ್ರಾಚ್ಯುಟಿ ಹಣ ಬಿಡುಗಡೆ: ರಾಮಲಿಂಗಾರೆಡ್ಡಿ

ಜನವರಿ 1, 2020 ರಿಂದ ಉಳಿದಿರುವ ಬಾಕಿಗಳನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ ಇಲ್ಲಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ವಿತರಿಸಿದರು. ಸಚಿವರು ಸಾಂಕೇತಿಕವಾಗಿ ಮೂವರು ನಿವೃತ್ತ ನೌಕರರಿಗೆ ಗ್ರಾಚ್ಯುಟಿ ಮತ್ತು ರಜೆ ನಗದೀಕರಣದ ಚೆಕ್ ವಿತರಿಸಿದರು.
Ramalinga redday
ರಾಮಲಿಂಗಾರೆಡ್ಡಿ
Updated on

ಬೆಂಗಳೂರು: ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳು - ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC), ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 11,694 ನಿವೃತ್ತ ನೌಕರರಿಗೆ 224.05 ಕೋಟಿ ರೂ.ಗಳನ್ನುಗಳಿಕೆ ರಜೆ ನಗದೀಕರಣ ಮತ್ತು ಗ್ರಾಚ್ಯುಟಿಗಾಗಿ ವಿತರಿಸಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಜನವರಿ 1, 2020 ರಿಂದ ಉಳಿದಿರುವ ಬಾಕಿಗಳನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ ಇಲ್ಲಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ವಿತರಿಸಿದರು. ಸಚಿವರು ಸಾಂಕೇತಿಕವಾಗಿ ಮೂವರು ನಿವೃತ್ತ ನೌಕರರಿಗೆ ಗ್ರಾಚ್ಯುಟಿ ಮತ್ತು ರಜೆ ನಗದೀಕರಣದ ಚೆಕ್ ವಿತರಿಸಿದರು.

ಕೆಎಸ್‌ಆರ್‌ಟಿಸಿಯ 4,711 ನಿವೃತ್ತ ನೌಕರರಿಗೆ - 86.55 ಕೋಟಿ ರೂ. ಬಿಎಂಟಿಸಿ 1,833 ನಿವೃತ್ತರಿಗೆ 50.25 ಕೋಟಿ ಹಾಗೂ ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ನಿವೃತ್ತ ನೌಕರರಿಗೆ ಕ್ರಮವಾಗಿ 3,116 ಮತ್ತು 2,034 51.50 ಕೋಟಿ ಮತ್ತು 35.75 ಕೋಟಿ ಬಿಡುಗಡೆ ಮಾಡಿದೆ. ನೌಕರರ ಸಂಘಟನೆಗಳೊಂದಿಗಿನ ಹಿಂದಿನ ಸಭೆಯಲ್ಲಿ ಹಲವಾರು ಬೇಡಿಕೆಗಳ ಕುರಿತು ಚರ್ಚಿಸಲಾಯಿತು ಮತ್ತು ಈ ನಿರ್ಣಯಗಳ ಭಾಗವಾಗಿ ನಾಲ್ಕು ನಿಗಮಗಳಾದ್ಯಂತ 1,308 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗೆ ಅಂತರ ನಿಗಮ ವರ್ಗಾವಣೆಯ ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ರೆಡ್ಡಿ ಹೇಳಿದರು.

Ramalinga redday
ಈಡೇರದ ಬೇಡಿಕೆ: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಸಾರಿಗೆ ನೌಕರರು, ಜ.24 ರಂದು ಪ್ರತಿಭಟನೆಗೆ ಮುಂದು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com