ದೆಹಲಿಯ ಗಣರಾಜ್ಯೋತ್ಸವ ಪರೇಡ್‌ಗೆ ಲಕ್ಕುಂಡಿಯ ಬ್ರಹ್ಮಜಿನಾಲಯ ಸ್ತಬ್ಧ ಚಿತ್ರ ಆಯ್ಕೆ

ದೆಹಲಿಯ ಕರ್ತವ್ಯಪಥದಲ್ಲಿ ನಡೆಯುವ ಪರೇಡ್‌ನಲ್ಲಿ ಬ್ರಹ್ಮ ಜಿನಾಲಯ ದೇವಾಲಯ ಆಯ್ಕೆ ಆಗಿದ್ದು ಲಕ್ಕುಂಡಿಯ ಶಿಲ್ಪಕಲಾ ವೈಭವವನ್ನು ಮತ್ತೆ ನೆನಪಿಸುತ್ತದೆ.
Brahma Jinalaya at Lakkundi near Gadag
ಲಕ್ಕುಂಡಿಯ ಬ್ರಹ್ಮಜಿನಾಲಯ
Updated on

ಗದಗ: ಜನವರಿ 26 ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಲಕ್ಕುಂಡಿಯ ಬ್ರಹ್ಮ ಜಿನಾಲಯದ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ಶ್ರಮಿಸಿದ ಕಲಾವಿದರಿಗೆ, ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಇತಿಹಾಸಕಾರರು ಮತ್ತು ಗದಗ ಜಿಲ್ಲೆಯ ನಿವಾಸಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಆರ್‌ಡಿ ಮೆರವಣಿಗೆಯ ಸಮಯದಲ್ಲಿ ಪ್ರದರ್ಶಿಸಲು ಈ ಮೇರುಕೃತಿಗೆ ಅನುಮೋದನೆ.

ಈ ಮನ್ನಣೆಯು ಲಕ್ಕುಂಡಿಯ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ಹೊಂದಿರುವ ಜಿಲ್ಲಾಡಳಿತಕ್ಕೆ ಮತ್ತು ಈ ಐತಿಹಾಸಿಕ ದೇವಾಲಯ ಪಟ್ಟಣಕ್ಕೆ ಯುನೆಸ್ಕೋ ಪಾರಂಪರಿಕ ತಾಣದ ಟ್ಯಾಗ್ ಪಡೆಯಲು ದೊಡ್ಡ ಉತ್ತೇಜನವನ್ನು ನೀಡಿದೆ. ಲಕ್ಕುಂಡಿ ಮತ್ತು ಸುತ್ತಮುತ್ತಲಿನ ಸ್ಮಾರಕಗಳು ಮತ್ತು ದೇವಾಲಯಗಳನ್ನು ಅಗೆದು ಪುನಃಸ್ಥಾಪಿಸಲು ಉತ್ಖನನ ಕಾರ್ಯ ನಡೆಯುತ್ತಿದೆ.

ಲಕ್ಕುಂಡಿ ನಿವಾಸಿ ಶರಣು ಗರಜಪ್ಪನವರ್ ಮಾತನಾಡಿ, ಗಣರಾಜ್ಯೋತ್ಸವ ಪಥಸಂಚಲನಕ್ಕೆ ನಮ್ಮ ದೇವಸ್ಥಾನದ ಸ್ತಬ್ಧಚಿತ್ರ ಆಯ್ಕೆಯಾಗಿರುವುದು ಸಂತಸ ತಂದಿದೆ. ಇದು ಲಕ್ಕುಂಡಿ ಮತ್ತು ಅದರ ಶ್ರೀಮಂತ ಪರಂಪರೆಯನ್ನು ಜನಪ್ರಿಯಗೊಳಿಸಲು ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.

ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಸಲಹೆಗಾರ ಸಿದ್ದಲಿಂಗೇಶ್ವರ ಪಾಟೀಲ ಮಾತನಾಡಿ, ಇದು ನಮಗೆ ಹೆಮ್ಮೆಯ ಕ್ಷಣ. ಬ್ರಹ್ಮ ಜಿನಾಲಯ ಟ್ಯಾಬ್ಲೋ ಕಲ್ಪನೆಯನ್ನು ರೂಪಿಸಿದ್ದಕ್ಕಾಗಿ ನಮ್ಮ ಕಲಾವಿದರು ಮತ್ತು ಪ್ರವಾಸೋದ್ಯಮ ಸಚಿವರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದಿದ್ದಾರೆ.

11 ನೇ ಶತಮಾನದ ದೇವಾಲಯ ಬ್ರಹ್ಮ ಜಿನಾಲಯವು ಲಕ್ಕುಂಡಿಯಲ್ಲಿರುವ ವಸ್ತುಸಂಗ್ರಹಾಲಯದ ಸಮೀಪವಿರುವ ದೇವಾಲಯವಾಗಿದೆ. ಬ್ರಹ್ಮಜಿನಾಲಯ ದೇವಾಲಯ ಕ್ರಿ.ಶ 11ನೇ ಶತಮಾನದ್ದಾಗಿದ್ದು, ಪೂರ್ವಾಭಿಮುಖವಾಗಿ ಗರ್ಭಗುಡಿ, ಅಂತರಾಳ, ಗೂಢಮಂಟಪ, ಅಗ್ರಮಂಟಪ, ತಲವಿನ್ಯಾಸ ಹೊಂದಿರುವ, ಕಪ್ಪು ಶಿಲೆಯಿಂದ ರಚನೆಗೊಂಡಿದೆ. ಚೌಕಾಕಾರದ ಗರ್ಭಗೃಹದ ಮಧ್ಯದಲ್ಲಿ ಎತ್ತರವಾದ ಸಿಂಹಪೀಠದ ಮೇಲೆ ತೀರ್ಥಂಕರನ ಶಿಲ್ಪವಿದೆ. ಇಕ್ಕೆಲದಲ್ಲಿ ಇಬ್ಬರು ಚಾಮರಧಾರಿಗಳಿದ್ದಾರೆ.

ದೆಹಲಿಯ ಕರ್ತವ್ಯಪಥದಲ್ಲಿ ನಡೆಯುವ ಪರೇಡ್‌ನಲ್ಲಿ ಬ್ರಹ್ಮ ಜಿನಾಲಯ ದೇವಾಲಯ ಆಯ್ಕೆ ಆಗಿದ್ದು ಲಕ್ಕುಂಡಿಯ ಶಿಲ್ಪಕಲಾ ವೈಭವವನ್ನು ಮತ್ತೆ ನೆನಪಿಸುತ್ತದೆ. ಲಕ್ಕುಂಡಿ ದೇವಾಲಯಗಳ ಶಿಲ್ಪಕಲೆಯು ಅಭೂತಪೂರ್ವ ಇತಿಹಾಸವನ್ನು ಹೊಂದಿದ್ದು, ಕಲಾಸಕ್ತರ ಕಣ್ಮನ ಸೆಳೆಯುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com